ಯುರೋಪಿಯನ್ ಯೂನಿಯನ್ ಆಡಳಿತಾಧಿಕಾರಿಗಳು ತಮ್ಮ ಅಡಿಯಲ್ಲಿ ಬರುವ ಎಲ್ಲಾ ದೇಶಗಳಲ್ಲಿ ಮಾರಾಟವಾಗುವ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು 2024 ರ ಹೊತ್ತಿಗೆ USB-C ಸಂಪರ್ಕ ಪೋರ್ಟ್ ಹೊಂದಿರಲೇಬೇಕು ಎಂದು ನಿರ್ಧರಿಸಿದ್ದಾರೆ. ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಇ -ರೀಡರ್ಸ್, ಗೇಮ್ ಕನ್ಸೋಲ್‌ಗಳು, ಹೆಡ್‌ಫೋನ್‌ಗಳು, ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್‌ಗಳು ಮತ್ತು ಡಿಜಿಟಲ್ ಕ್ಯಾಮೆರಾಗಳು ಎಲ್ಲಕ್ಕೂ ಈ ನಿಯಮಗಳು ಅನ್ವಯವಾಗಲಿವೆ. ಆದರೆ ಲ್ಯಾಪ್‌ಟಾಪ್‌ಗಳಿಗೆ ಮಾತ್ರ ಅಳವಡಿಕೆಗಾಗಿ 40 ತಿಂಗಳ ಸಮಯಾವಕಾಶ ನೀಡಲಾಗುವುದು.
ಹೊಸ ನಿಯಮಗಳು ಇನ್ನೂ ಅಂತಿಮ ನಿರ್ದೇಶನಗಳಿಗಾಗಿ ಕಾಯುತ್ತಿವೆ. ಬೇಸಿಗೆ ಬಿಡುವಿನ ನಂತರ ನಡೆಯಲಿರುವ ಯುರೋಪಿಯನ್ ಪಾರ್ಲಿಮೆಂಟ್ ಮತ್ತು ಯುರೋಪಿಯನ್ ಕೌನ್ಸಿಲ್ ಈ ಒಪ್ಪಂದವನ್ನು ಔಪಚಾರಿಕವಾಗಿ ಅನುಮೋದಿಸಬೇಕಾಗುತ್ತದೆ. ಅದರ ನಂತರ ಅದು ಇಯು ಅಧಿಕೃತ ಜರ್ನಲ್ನಲ್ಲಿ ಪ್ರಕಟವಾಗುತ್ತದೆ. ಅಲ್ಲಿಂದ ಎರಡನೆಯ ಹಂತದ ಕೌಂಟ್ಡೌನ್ ಪ್ರಾರಂಭವಾಗುತ್ತದೆ, ಏಕೆಂದರೆ ಈ ಪ್ರಕಟಣೆಯ 20 ದಿನಗಳ ನಂತರ ನಿಬಂಧನೆಗಳು ಕಾರ್ಯರೂಪಕ್ಕೆ ಬರಲು ಪ್ರಾರಂಭಿಸುತ್ತವೆ. ಆ ನಂತರ 24 ತಿಂಗಳುಗಳ ನಂತರ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿವೆ.
ಪರಿಸರ ಮತ್ತು ಆರ್ಥಿಕ ಜಾಗೃತಿ
ಜಾಗತಿಕವಾಗಿ ಒಂದು ಶತಕೋಟಿ ಐಫೋನ್ಗಳು ಬಳಕೆಯಲ್ಲಿವೆ. ಐಫೋನಿನ ಚಾರ್ಜಿಂಗ್ ಕೇಬಲ್ಗಳು ಮತ್ತು ಅಡಾಪ್ಟರುಗಳು ಯಾವುದೇ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್‌ಗಳನ್ನು ಜಾರ್ಜ್ ಮಾಡಲು ಬಳಸಲಾಗುವುದಿಲ್ಲ. ಆದರೆ ಒಂದು ಆಂಡ್ರಾಯ್ಡ್ ಫೋನ್‌ನ ಚಾರ್ಜರ್ ನಿಂದ ಇನ್ನೊಂದು ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ (ಕೆಲವು ಸಂದರ್ಭಗಳಲ್ಲಿ, ಲ್ಯಾಪ್ಟಾಪ್ ಸಹ) ಚಾರ್ಜ್ ಮಾಡಬಹುದು. ಇಯುನ ಯೋಜನೆ ಸರಳವಾಗಿದೆ. ಒಂದೇ ರೀತಿಯ ಚಾರ್ಜರ್ ಬಳಸುವುದರಿಂದ ಗ್ರಾಹಕರು ಹೊಸ ಚಾರ್ಜರ್ಗಳನ್ನು ಖರೀದಿಸುವ ಹಣವನ್ನು ಉಳಿಸಬಹುದು ಮತ್ತು ವಾರ್ಷಿಕವಾಗಿ 11,000 ಟನ್‌ಗಳಷ್ಟು ಇ-ವೇಸ್ಟ್ ಉತ್ಪಾದನೆಯಾಗುವುದನ್ನು ತಪ್ಪಿಸಬಹುದು.
“ದೀರ್ಘ ಕಾಲದಲ್ಲಿ ಇದು ಇ-ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ಉತ್ತಮ ಫೋನ್ಗೆ ಅಪ್ಗ್ರೇಡ್ ಮಾಡುವಾಗ, ಸಾಮಾನ್ಯವಾಗಿ ಹಳೆಯ ಚಾರ್ಜರ್ ಅನ್ನು ಎಸೆಯಲಾಗುತ್ತದೆ” ಎನ್ನುತ್ತಾರೆ ‘Cashify’ಯ ಸಿಒಒ, ಅಕ್ಷ್ ಚೌಹಾನ್. ಇದೇ ಮಾತನ್ನು ಪುಷ್ಟೀಕರಿಸುವ ಇಯು “ಈ ಹೊಸ ನಿಯಮಗಳಿಂದಾಗಿ ಚಾರ್ಜರ್ಗಳು ಹೆಚ್ಚು ಹೆಚ್ಚು ಮರುಬಳಕೆಗೆಯಾಗುತ್ತದೆ ಮತ್ತು ಗ್ರಾಹಕರು ಅನಗತ್ಯ ಚಾರ್ಜರ್ ಖರೀದಿಗಳಲ್ಲಿ ವ್ಯಯಿಸುವ 250 ಮಿಲಿಯನ್ ಯ್ಯುರೋ ವನ್ನು ವಾರ್ಷಿಕವಾಗಿ ಉಳಿಸಬಹುದು” ಎನ್ನುತ್ತದೆ. ಇಯುನ ಡಾಟಾವು ಗ್ರಾಹಕರು ಸರಾಸರಿ ಮೂರು ಮೊಬೈಲ್ ಚಾರ್ಜರ್ಗಳನ್ನು ಹೊಂದಿದ್ದಾರೆ ಎಂದು ಸೂಚಿಸುತ್ತದೆ, ಅದರಲ್ಲಿ ಎರಡು ನಿಯಮಿತವಾಗಿ ಬಳಸಲಾಗುತ್ತದೆ. ಅಲ್ಲದೆ ಸುಮಾರು 11,000 ಟನ್ಗಳ ಇ-ವೇಸ್ಟ್ ಇಯು ದೇಶಗಳಲ್ಲಿ ಉತ್ಪತ್ತಿಯಾಗುತ್ತದೆ ಎನ್ನುತ್ತದೆ ಅದರ ಡೇಟಾ. ಯುಎಸ್ಬಿ-ಸಿ ಪೋರ್ಟ್ ಅನ್ನು ಕಡ್ಡಾಯಗೊಳಿಸುವುದು ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕಡೆಗೆ ಒಂದು ಹೆಜ್ಜೆಯಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಇಯು ಅಧಿಕಾರಿಗಳು.
2020 ರ ಜಾಗತಿಕ ಇ-ವೇಸ್ಟ್ ಮಾನಿಟರ್ ಪ್ರಕಾರ, 53.6 ಮಿಲಿಯನ್ ಟನ್ಗಳ ಇ-ವೇಸ್ಟ್ ಅನ್ನು ವಾರ್ಷಿಕವಾಗಿ ಉತ್ಪಾದಿಸಲಾಗುತ್ತದೆ, ಮತ್ತು ಇದರಲ್ಲಿ ಮೊಬೈಲ್ ಫೋನ್ ಚಾರ್ಜರ್ಗಳ ಪಾಲು 54,000 ಟನ್ಗಳು (0.1% ಪಾಲು). “ಎಲ್ಲಾ ಗ್ಯಾಜೆಟ್ಗಳೊಂದಿಗೆ ಹೊಂದಿಕೊಳ್ಳುವ ಓಮ್ನಿ-ಚಾರ್ಜರ್ ಅನ್ನು ಬಳಸುವುದು ಸೌಲಭ್ಯವನ್ನು ಹೆಚ್ಚಿಸುತ್ತದೆ ಮತ್ತು ಇ-ವೇಸ್ಟ್ ಅನ್ನು ಕಡಿಮೆ ಮಾಡುತ್ತದೆ” ಎಂದು ಚೌಹಾನ್ ಹೇಳಿದ್ದಾರೆ.
ಯುಎಸ್ಬಿ-ಸಿಯ ಅನುಕೂಲತೆ
ಗ್ಯಾಜೆಟ್ಗಳಿಗೆ ಯುಎಸ್‌ಬಿ ಸಿಯನ್ನು ಮೊದಲಿಗೆ 2014 ರಲ್ಲಿ ಪರಿಚಯಿಸಲಾಯಿತು. ಹಿಂದಿನ ಪೀಳಿಗೆಯ ಮೈಕ್ರೋ-ಯುಎಸ್ಬಿ ಮತ್ತು ಮಿನಿ-ಯುಎಸ್ಬಿ ಚಾರ್ಜಿಂಗ್‌ಗಳನ್ನು ಆನಂತರ ಯುಎಸ್ಬಿ-ಎ ಎಂದು ಗುರುತಿಸಲಾಯಿತು.

ಯುಎಸ್‌ಬಿ ಸಿ ಯನ್ನು ಬಾಹ್ಯ ಸಾಧನಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ರೂಪಿಸಲಾಯಿತು. ಇದರಿಂದಾಗಿ ಬೇರೆ ಯಾವುದೇ ಸಾಧನಗಳ ಸಹಾಯವಿಲ್ಲದೆ ಕಂಪ್ಯೂಟರ್ ಮತ್ತು ಇತರ ಸಾಧನಗಳೊಂದಿಗೆ ಸಂಪರ್ಕಿಸಲು ಸಾಧ್ಯವಾಯಿತು. ಪೋರ್ಟ್ ವಿನ್ಯಾಸವು ಕನೆಕ್ಟರ್ ಮತ್ತು ಕೇಬಲ್ ಸಂಪೂರ್ಣವಾಗಿ ಹಿಮ್ಮುಖವಾಗಿ ಕೆಲಸ ಮಾಡುವ ಶೈಲಿಯಲ್ಲಿ ರೂಪಿಸಲಾಗಿದೆ. ಅಲ್ಲದೆ ಸಿ ಪೋರ್ಟ್‌ಗಳು ಅತ್ಯಂತ ವೇಗದ ವಿದ್ಯುತ್ ವಿತರಣೆಯನ್ನು ಸಹ ಬೆಂಬಲಿಸುತ್ತದೆ. ಇದರಿಂದಾಗಿ ವೇಗವಾಗಿ ಮೊಬೈಲ್ ಮತ್ತು ಇಲೆಕ್ಟ್ರಾಟನಿಕ್ ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದು.
ಇತ್ತೀಚಿನ ಸ್ಮಾರ್ಟ್ಫೋನ್ಗಳು 150-ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನೂ ಒದಗಿಸುತ್ತದೆ. ಹಾಗೆಯೇ ಆಪಲ್ ಮ್ಯಾಕ್ಬುಕ್ ಪ್ರೊ 16, 96-ವ್ಯಾಟ್ ಯುಎಸ್ಬಿ-ಸಿ ಪವರ್ ಅಡಾಪ್ಟರ್ ಅನ್ನು ನೀಡುತ್ತದೆ. ಇವುಗಳು ಕೆಲವು ಉದಾಹರಣೆಗಳಾಗಿದ್ದು ಈ ರೀತಿ ಎಲ್ಲಾ ಡಿವೈಸ್‌ಗಳಿಗೆ ಹೊಂದುವ ಚಾರ್ಜರ್ ರೂಪಿಸುವ ಕಲ್ಪನೆಯೂ ಇದೆ. ಫೋನ್ಗಾಗಿ 150-ವ್ಯಾಟ್ ಅಥವಾ 120-ವ್ಯಾಟ್ ವೇಗದ ಚಾರ್ಜಿಂಗ್ ಅಡಾಪ್ಟರ್ , ಲ್ಯಾಪ್‌ಟಾಪ್ ಚಾರ್ಜ್ ಮಾಡುವಾಗ ತಮ್ಮ ವೇಗವನ್ನು ದ್ವಿಗುಣಗೊಳಿಸಿಕೊಳ್ಳಬೇಕು.
ಯುಎಸ್‌ಬಿ ಸಿಯಿಂದ ಡೇಟಾ ವರ್ಗಾವಣೆಯೂ ವೇಗವಾಗಿ ನಡೆಯುತ್ತದೆ. 2019 ರಲ್ಲಿ ಅಳವಡಿಸಲಾದ , USB4 ಎಂದು ಕರೆಯಲ್ಪಡುವ ಪೋರ್ಟ್ಗಳು 40 ಗಿಗಾಬಿಟ್ ಥ್ರೋಪುಟ್ ಅನ್ನು ಬೆಂಬಲಿಸುತ್ತದೆ . USB 3.2 Gen 1 (ಸೂಪರ್‌ಸ್ಪೀಡ್ ಎಂದೂ ಕರೆಯುತ್ತಾರೆ) 5Gbps ವೇಗದಲ್ಲಿ ಡಾಟಾ ವರ್ಗಾವಣೆ ಮಾಡುತ್ತದೆ.
ಯುಎಸ್‌ಬಿ-ಸಿ ಮಾರ್ಗಸೂಚಿಗಳು
“ಇಯು ನ ಹೊಸ ನಿಯಮಗಳು ನೀತಿ ರೂಪಿಸುವುದಕ್ಕಿಂತ ಮೊದಲು ಮಾರುಕಟ್ಟೆಗೆ ಬಂದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ” ಎಂದು EU ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂದರೆ ಈಗ ಅಸ್ತಿತ್ವದಲ್ಲಿರುವ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪೋರ್ಟಬಲ್‌ಗಳು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಹೊಸ ಲಾಂಚ್‌ಗಳು ಮತ್ತು ಮುಂಬರುವ ಉತ್ಪನ್ನಗಳು ಹೊಸ ನೀತಿಗೆ ಒಳಪಡಬೇಕು . ಇನ್ನೂ ಹಳೆಯ ಮೈಕ್ರೋ-ಯುಎಸ್‌ಬಿ ಬಳಸುವ ಇ-ರೀಡರ್‌ಗಳು ಮತ್ತು ವೈರ್‌ಲೆಸ್ ಸ್ಪೀಕರ್‌ಗಳು ಸೇರಿದಂತೆ ಮೊಬೈಲ್ ಸಾಧನಗಳಿಗೆ ಇದು ವಿಶೇಷವಾಗಿ ಅನ್ವಯಿಸಲಿದೆ
ಮುಂದಿನ ಐಫೋನ್ ಎಷ್ಟು ವಿಭಿನ್ನವಾಗಿರಲಿದೆ?
ಐಫೋನ್‌ಗಳು ಶೀಘ್ರದಲ್ಲೇ ‘ಲೈಟಿಂಗ್ ಪೋರ್ಟ್’ ನಿಂದ USB-C ಪೋರ್ಟ್‌ಗೆ ಬದಲಾಯಿಸಬೇಕಾಗುತ್ತದೆ. ಇದು ಐಪೋನ್ ಚಾರ್ಜರ್ಗಳ ಮೇಲೆ ವ್ಯಯಿಸು ಖರ್ಚನ್ನು ಕಡಿಮೆ ಮಾಡಲಿದೆ. ಪ್ರತಿವರ್ಷವೂ ಆ್ಯಪಲ್ ತನ್ನ ಹೊಸ ಐಫೋನನ್ನು ಬಿಡುಗಡೆ ಮಾಡುತ್ತದೆ ಮತ್ತು ಈ ವರ್ಷ ಯುಎಸ್‌ಬಿ- ಸಿ ಅಪ್‌ಗ್ರೇಡ್‌ನೊಂದಿಗೆ ಐಫೋನ್‌ಗಳನ್ನು ನೀಡಬಹುದು. ಅಥವಾ 2023- 2024ರಲ್ಲಿ ಹೊಸ ಅಪ್‌ಗ್ರೇಡನ್ನು ನೀಡಬಹುದು ನಿರೀಕ್ಷಿಸಲಾಗಿದೆ .
ಇನ್ಪುಟ್: ಹಿಂದುಸ್ತಾನ್ ಟೈಮ್ಸ್








