ಈಗಾಗಲೇ ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯ ಲಾಕ್ ಡೌನ್ ಜಾರಿಗೊಳಿಸಲು ರಾಜ್ಯ ಸರ್ಕಾರ ಆದೇಶಿಸಲಾಗಿತ್ತು. ಮತ್ತೆ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದ್ದು ಈಗ ಅಗತ್ಯ ಸೇವೆ ಹೊರತಾಗಿ, ಎಲ್ಲಾ ಶಾಪ್ ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಶಾಲಾ-ಕಾಲೇಜು ಸಂಪೂರ್ಣ ಬಂದ್ ಮಾಡಲಾಗಿದೆ. ರಾತ್ರಿ ಸಮಯ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಮದುವೆಗೆ 50 ಜನ, ಅಂತ್ಯಕ್ರಿಕ್ಕೆ 20 ಜನರು ಭಾಗವಹಿಸುವಂತೆ ಅನುಮತಿಸಲಾಗಿದೆ.

ಅಗತ್ಯ ಸೇವೆ ಒದಗಿಸುವಂತ ಅಂಗಡಿಗಳು ಹೊರತುಪಡಿಸಿ, ರಾಜ್ಯಾದ್ಯಂತ ಇತರೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡುವಂತೆ ಹೊಸ ಮಾರ್ಗಸೂಚಿಯಲ್ಲಿ ಆದೇಶಿಸಲಾಗಿದೆ.
50% ರಷ್ಟು ಮಾತ್ರ ಪ್ರಯಾಣಿಸುವಂತೆ ಬಸ್, ಮೆಟ್ರೊ ಸಂಚಾರವನ್ನು ಮುಂದುವರೆಸಲಾಗಿದೆ. ರಾತ್ರೆ ಸಮಯದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

















