ಮತಾಂತರದ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ ಮತಾಂತರ ಜಾಸ್ತಿ ನಡೆಯುತ್ತಿದ್ದು, ಬಿಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ. ಸರ್ಕಾರಗಳು ಕ್ರಮಕೈಗೊಳ್ಳುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದವು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ ನಂತರ ವಿಪಕ್ಷಗಳ ಬಾಯಿ ಬಂದ್ ಆಗಿದೆ ಕೇಂದ್ರ- ರಾಜ್ಯ ಸರ್ಕಾರ ಇನ್ನೂ ಬಿಗಿ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಮತದಾರರ ಪಟ್ಟಿ ತಯಾರಿಸಲು ಕೆಲಸ ಮಾಡ್ತಾ ಇದ್ದಾರೆ ಡಿಸಿ, ಬಿಎಲ್ಓ ಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. 2-3 ಕಾರ್ಡ್ ಹೊಂದಿರುವವರ ಪತ್ತೆಗಾಗಿ ಆಧಾರ್ ಲಿಂಕ್ ಮಾಡಲಾಗುತ್ತಿದೆ ಆಪಾದನೆ ಮಾಡ್ಬೇಕು ಅಂತಾನೇ ಸುರ್ಜೆವಾಲಾ ಮಾಡಿದ್ರೇ ನಾನೇನು ಮಾಡೋಕೆ ಅಗಲ್ಲಾ ನಮ್ಮ ಕಾರ್ಯಕರ್ತರು ಕೂಡ ಪ್ರತಿ ಮನೆಗೆ ಹೋಗ್ತಾ ಇದ್ದಾರೆ. ವೋಟರ್ ಲೀಸ್ಟ್ ಗೆ ಸೇರಿಸುವ ಹಾಗೂ ಡಬ್ಬಲ್ ಇದ್ದರೇ ಹೆಸರು ತೆಗೆಸುವ ಕೆಲಸ ಮಾಡ್ತಾ ಇದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಆ ಶಕ್ತಿ ಇದ್ದರೇ ಅವರು ಮಾಡಲಿ….. ಆಪಾದನೆ ಮಾಡಿದ್ರೇ ಅರ್ಥ ಇರಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಯಲ್ಲಿ ರಣತಂತ್ರ ಕುರಿತು ಮಾತನಾಡಿದ ಈಶ್ವರಪ್ಪ ಅದು ತಂತ್ರ ಅಲ್ಲ.. ಗತಿಯಿಲ್ಲ.. ಎಲ್ಲಿ ಹೋದರೂ ಸೋಲ್ತಿನಿ ಅನ್ನೋ ಭಯ ಚಾಮರಾಜನಗರ, ಕೋಲಾರ, ಬಾದಾಮಿ, ವರುಣಾ ಅಂತಾರೆ ನಿನ್ನೆ ಕೊನೆ ಇದ್ದರೂ ಅರ್ಜಿ ಹಾಕಿಲ್ಲ ಕ್ಷೇತ್ರ ಸಿಗದೇ ಇರೋ ಸಿದ್ದರಾಮಯ್ಯ.. ಎಲ್ಲಿ ಬೇಕಾದ್ರೂ ನಿಲ್ತೀನಿ ಅನ್ನೋ ಮಾತು ಯಾಕಾಡ್ತಾರೋ ಗೊತ್ತಿಲ್ಲ ರಾಜ್ಯದ ಕೆಪಿಸಿಸಿ ಅಧ್ಯಕ್ಷರಿಗೆ ಅರ್ಜಿ ಹಾಕಿ, ಎರಡು ಲಕ್ಷ ದುಡ್ಡು ಕಟ್ಟಲಿ 224 ಕ್ಷೇತ್ರದಲ್ಲಿ ಎಲ್ಲಿಯೇ ಕೊಟ್ಟರೂ ನಾನು ತಯಾರು ಅನ್ನೋ ಮಾತನ್ನ ಹೇಳಲಿ ಅದು ಬಿಟ್ಟು ಕ್ಷೇತ್ರವೇ ಸಿಕ್ಕಿಲ್ಲ ಅನ್ನೋದು ಸರಿಯಲ್ಲ.
ಕೋಲಾರಕ್ಕೆ ಹೋಗ್ತಿನಿ ಅಂದ್ರು ಮುನಿಯಪ್ಪ ಅವರು ಕಾಂಗ್ರೆಸ್ ಗೊಂದಲ ಸರಿ ಮಾಡಿ, ಕೋಲಾರಕ್ಕೆ ಬನ್ನಿ ಅಂದ್ರು ಸಿದ್ದರಾಮಯ್ಯ ಪರಿಸ್ಥಿತಿ ಅಯ್ಯೋ ಪಾಪ ಅನ್ನಿಸುತ್ತೇ ಎಂದು ಲೇವಡಿಯಾಡಿದ್ದಾರೆ.
ಬಿಜೆಪಿ ಪಟ್ಟಿ ನಮಗೆ ಲೆಕ್ಕಕ್ಕೆ ಇಲ್ಲ ನಮ್ಮ ಕಾರ್ಯಕರ್ತರು ಚುನಾವಣೆ ಇಲ್ಲದೇ ಇದ್ರೂ ಸಕ್ರೀಯವಾಗಿ ಕೆಲಸ ಮಾಡ್ತಾರೆ ಐದು ವರ್ಷವೂ ಸಂಘಟನಾತ್ಮಕವಾಗಿ ಕೆಲಸ ಮಾಡ್ತಾರೆ ಕಾರ್ಯಕರ್ತರು ಚುನಾವಣಾ ಕೆಲಸ ಅಲ್ಲ ಸಮಾಜ ಸೇವೆಯನ್ನು ಮಾಡ್ತಾರೆ. ಕೋವಿಡ್, ನೆರೆ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ ಬಿಜೆಪಿ ಚುನಾವಣೆಗೋಸ್ಕರ ತಯಾರಾದ ಪಕ್ಷ ಬಿಜೆಪಿ ಅಲ್ಲ ಯಾವ ಕ್ಷಣಕ್ಕೂ ಚುನಾವಣೆ ಬಂದ್ರೂ, ಬಿಜೆಪಿ 150 ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.