2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಬಿಜೆಪಿ ಗೆ ಬಂಡಾಯದ ಬಿಸಿ ಕೊಂಚ ಜೋರಾಗಿಯೇ ತಟ್ಟಿದೆ. ಕೆ.ಎಸ್.ಈಶ್ವರಪ್ಪರ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ಎಂಟ್ರಿ ಆಗೋದು ಪಕ್ಕಾ ಆಗಿದೆ.
ಶಿವಮೊಗ್ಗ ಕ್ಷೇತ್ರದ ಬಂಡಾಯ ಶಮನಗೊಳಿಸಲು ಹೈಕಮಾಂಡ್ ನಾಯಕರು ಎಂಟ್ರಿಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.ಹಾವೇರಿ ಲೋಕಸಭಾ ಚುನಾವಣೆಯ ಬಿಜೆಪಿಯ ಟಿಕೆಟ್ ಈಶ್ವರಪ್ಪರ ಪುತ್ರ ಕಾಂತೇಶ್‌ಗೆ ಮಿಸ್ ಆದ ಕಾರಣ ಬಂಡಾಯವೆದ್ದು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧೆ ಮಾಡಲು ಈಶ್ವರಪ್ಪ ಮುಂದಾಗಿದ್ದಾರೆ.ಈಶ್ವರಪ್ಪರ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರ ಎಂಟ್ರಿ ಆಗ್ತಿದೆ.ನೇರವಾಗಿ ಅಮಿತ್ ಶಾ ರನ್ನೇ ಕಣಕ್ಕಿಳಿಸಲು ಬಿಜೆಪಿ ನಿರ್ಧಾರ ಮಾಡಿದೆ.ಅಮಿತ್ ಶಾ ಬಳಿಯೇ ಮಾತುಕತೆ ನಡೆಸಿ ಟಿಕೆಟ್ ಅಂತಿಮ ಮಾಡಿಕೊಂಡಿದ್ದ ಈಶ್ವರಪ್ಪ ಸದ್ಯ ಕೆಂಡಾಮಂಡಲರಾಗಿದ್ದಾರೆ.
ಕೊನೆ ಘಳಿಗೆಯಲ್ಲಿ ಕಾಂತೇಶ್ ಬಿಟ್ಟು ಬಸವರಾಜ ಬೊಮ್ಮಾಯಿಗೆ ಹಾವೇರಿ ಟಿಕೆಟ್ ಘೋಷಣೆ ಆಗಿದೆ.ಟಿಕೆಟ್ ಘೋಷಣೆ ಬಳಿಕ ಅಸಮಾಧಾನಗೊಂಡು ಬಂಡಾಯವೆದ್ದ ಈಶ್ವರಪ್ಪ, ಏಪ್ರಿಲ್ 12 ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ.ಸದ್ಯ ಅಖಾಡಕ್ಕೆ ಇಳಿಯಲು ಅಮಿತ್ ಶಾ ಸಿದ್ಧತೆ ನಡೆಸಿದ್ದು , ಈಶ್ವರಪ್ಪ ತಣ್ಣಗಾಗಿಸಲು ತಂತ್ರ ಹೆಣೆಯಲಾಗುತ್ತಿದೆ. ಈಗಾಗ್ಲೇ ದೂರವಾಣಿಯಲ್ಲಿ ಈಶ್ವರಪ್ಪರ ಸಂಪರ್ಕಕ್ಕೆ ಅಮಿತ್ ಶಾ ಪ್ರಯತ್ನ ಮಾಡಿದ್ದಾರೆ.ಯಾವುದೇ ಬಂಡಾಯದ ಬಾವುಟ ಹಾರಿಸದೇ ಪಕ್ಷ ಸಂಘಟನೆಗೆ ಮುಂದಾಗಿ ಎಂದು ಸೂಚನೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮುಂದೆ ನಿಮ್ಮ ಮಗನಿಗೆ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಲು ಮುಂದಾಗಿದ್ದಾರೆ. ಆದ್ರೆ,ಅಮಿತ್ ಶಾ ಸಂಪರ್ಕಕ್ಕೆ ಈವರೆಗೂ ಸಿಗದ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ . ಇವೆಲ್ಲಕ್ಕೂ ಮುಂದಿನ 3-4 ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಓಡಾಡ್ತಿದೆ.