• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಈಶ್ವರಪ್ಪ ಸಭೆಯಲ್ಲಿ ಆಯನೂರು ಮಂಜುನಾಥ್ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
August 9, 2021
in ಕರ್ನಾಟಕ, ವಿಡಿಯೋ
0
ಈಶ್ವರಪ್ಪ ಸಭೆಯಲ್ಲಿ ಆಯನೂರು ಮಂಜುನಾಥ್ ಆಕ್ರೋಶ
Share on WhatsAppShare on FacebookShare on Telegram

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕರೆದಿದ್ದ ಪ್ರಗತಿಪರಿಶೀಲನಾ ಸಭೆಯಲ್ಲಿ ಯಡಿಯೂರಪ್ಪ ಆಪ್ತ ವಿಧಾನಪರಿಷತ್ ಸದಸ್ಯರು ಸಭೆಗೆ ತಮಗೆ ಆಹ್ವಾನ ನೀಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನೆರೆ ಪರಿಹಾರ ಕಾರ್ಯ ಪ್ರಗತಿ ಸಭೆಯಲ್ಲಿ ಈ ಘಟನೆ ನಡೆದಿದೆ.

ADVERTISEMENT

ಸಚಿವ ಕೆ.ಎಸ್ ಈಶ್ವರಪ್ಪ ಸಮ್ಮುಖದಲ್ಲೇ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಮತ್ತು ಎಸ್ ರುದ್ರೇಗೌಡ ಅವರು ಸಭೆಗೆ ತಮಗೆ ಅಧಿಕೃತ ಆಹ್ವಾನ ನೀಡದ ಜಿಲ್ಲಾಧಿಕಾರಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.”ಪ್ರೋಟೋಕಾಲ್ ಪ್ರಕಾರ ತಮಗೆ ಸಭೆಗೆ ಅಧಿಕೃತ ಆಹ್ವಾನ ನೀಡಬೇಕು. ಆದರೆ ಹಾಗಾಗುತ್ತಿಲ್ಲ. ಇದು ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಬೆಳವಣಿಗೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಗಮನ ಸೆಳೆದರೂ ಮತ್ತೆ ಮತ್ತೆ ಪರಿಷತ್ ಸದಸ್ಯರನ್ನು ಅವಮಾನಿಸಲಾಗುತ್ತಿದೆ. ನೀವೇನು ಆಡಳಿತ ನಡೆಸುತ್ತಿದ್ದೀರೋ ಇಲ್ಲ, ಮಷ್ಕಿರಿ ಮಾಡ್ತಿದ್ದೀರೊ” ಎಂದು ಜಿಲ್ಲಾಧಿಕಾರಿಯನ್ನು ಆಯನೂರು ತರಾಟೆಗೆ ತೆಗೆದುಕೊಂಡರು. ಹಾಗೇ ಪ್ರತಿಭಟನೆ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರನಡೆದರು. 

ಪ್ರೋಟೋಕಾಲ್ ಪಾಲಿಸದ ಅಧಿಕಾರಿಗಳು - ಈಶ್ವರಪ್ಪ ಸಭೆ ವೇಳೆ ರೊಚ್ಚಿಗೆದ್ದ ಬಿಜೆಪಿ  ಎಂಎಲ್‌ಸಿ  Ayanur Manjunath

ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ ಹಾಗೂ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನಕುಮಾರ್ ಕೂಡ ಸಭೆಯಿಂದ ಹೊರ ನಡೆದರು.“ನಾವೂ ಶಾಸಕರಲ್ಲವೇನು? ಅಲ್ಲ ಅಂದರೆ, ಯಾರು ನಾವು? ಮಷ್ಕಿರಿ ಮಾಡ್ತೀರಾ? ಜನರನ್ನು ಕರೆದುಕೊಂಡು ನಿಮ್ಮ ಕಚೇರಿಗೆ ಬಂದು ಗಲಾಟೆ‌ ಮಾಡಿದರೆ ಗೊತ್ತಾಗುತ್ತದೆ ನಾವೇನು ಅಂತ. ನಾವು ಶಾಸಕರಲ್ಲವೋ, ಹೌದೋ ಎಂದು ಈ ಸಭೆಗೆ ಹೇಳಿ ಜಿಲ್ಲಾಧಿಕಾರಿಗಳೇ.. ನಾವು ಮೂರು ಜನರು ಶಾಸಕರಲ್ಲವೋ ? ಪ್ರೋಟೋಕಾಲ್ ಪಾಲನೆ ಮಾಡಬೇಕಾಗಿದ್ದು ಯಾರು? ಯಾಕೆ ನೀವು ಪ್ರೋಟೋ ಕಾಲ್  ಪಾಲನೆ ಮಾಡಲ್ಲ? ಏನು ಕಾರಣ? ಹೇಳಿ” ಎಂದು ಆಯನೂರು ಮಂಜುನಾಥ್ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು.

ಬಳಿಕ ಸಚಿವ ಈಶ್ವರಪ್ಪ ಆಯನೂರು ಸೇರಿದಂತೆ ಮೂವರು ವಿಧಾನಪರಿಷತ್ ಸದಸ್ಯರನ್ನು ಸಮಾಧಾನ ಪಡಿಸಿ, ಇನ್ನು ಮುಂದೆ ಹೀಗಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.

ವಾಸ್ತವವಾಗಿ ಸಭೆಗೆ ಆಹ್ವಾನ ನೀಡಿಲ್ಲ ಎಂಬುದು ತತಕ್ಷಣದ ಕಾರಣವಾದರೂ ಯಡಿಯೂರಪ್ಪ ಆಪ್ತರಾದ ಆಯನೂರು ಮಂಜುನಾಥ್ ಅವರು ಸಚಿವ ಈಶ್ವರಪ್ಪ ಎದುರೇ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದರ ಹಿಂದೆ ವಿಧಾನಸಭೆ, ವಿಧಾನಪರಿಷತ್, ರಾಜ್ಯ ಸಭೆ, ಲೋಕಸಭೆ ಸೇರಿ ನಾಲ್ಕು ಸದನಗಳಲ್ಲೂ ಸದಸ್ಯರಾಗಿ ಅನುಭವಿಯಾಗಿರುವ ಮತ್ತು ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರೂ ತಮಗೆ ಪ್ರತಿ ಬಾರಿ ಸಂಪುಟದ ಅವಕಾಶ ಬಂದಾಗೆಲ್ಲಾ ಅಡ್ಡಗಾಲಾಗುತ್ತಿರುವ ಈಶ್ವರಪ್ಪ ವಿರುದ್ಧದ ಆಕ್ರೋಶ ಹೀಗೆ ಸ್ಫೋಟಗೊಂಡಿದೆ ಎಂದೇ ಈ ಘಟನೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಕಿಡಿ ಹೊತ್ತಿರುವ ಈ ಅಸಮಾಧಾನ ಮುಂದಿನ ದಿನಗಳಲ್ಲಿ ಪಡೆಯುವ ಸ್ವರೂಪ ಕುತೂಹಲ ಕೆರಳಿಸಿದೆ.

Tags: BJPಆಯನೂರು ಮಂಜುನಾಥ್ಎಸ್ ರುದ್ರೇಗೌಡಕೆ ಎಸ್ ಈಶ್ವರಪ್ಪಕೋವಿಡ್-19ಪ್ರಸನ್ನಕುಮಾರ್ಬಿ ಎಸ್ ಯಡಿಯೂರಪ್ಪಬಿಜೆಪಿಶಿವಮೊಗ್ಗ
Previous Post

2022ರ ಉತ್ತರ ಪ್ರದೇಶ ಚುನಾವಣೆ ಗೆಲುವಿಗೆ “ಬೂತ್ ವಿಜಯ ಅಭಿಯಾನ” ಯೋಜನೆ ರೂಪಿಸಿದ ನಡ್ಡಾ

Next Post

ನ್ಯಾಯಾಧೀಶರ ನೇಮಕ ವಿಳಂಬ: ಇಲ್ಲೂ ಸಂಘ ಸಿದ್ಧಾಂತಿಗಳಿಗೆ ಮೋದಿ ಸರ್ಕಾರ ಕಾಯುತ್ತಿದೆಯೇ?

Related Posts

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

by ಪ್ರತಿಧ್ವನಿ
April 29, 2026
0

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
Next Post
ನ್ಯಾಯಾಧೀಶರ ನೇಮಕ ವಿಳಂಬ: ಇಲ್ಲೂ ಸಂಘ ಸಿದ್ಧಾಂತಿಗಳಿಗೆ ಮೋದಿ ಸರ್ಕಾರ ಕಾಯುತ್ತಿದೆಯೇ?

ನ್ಯಾಯಾಧೀಶರ ನೇಮಕ ವಿಳಂಬ: ಇಲ್ಲೂ ಸಂಘ ಸಿದ್ಧಾಂತಿಗಳಿಗೆ ಮೋದಿ ಸರ್ಕಾರ ಕಾಯುತ್ತಿದೆಯೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada