• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಾಣಿಜ್ಯ

ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿಗೂ ಕನ್ನ ಹಾಕಿದ ಮೋದಿ ಸರ್ಕಾರ

Any Mind by Any Mind
March 12, 2022
in ವಾಣಿಜ್ಯ
0
ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿಗೂ ಕನ್ನ ಹಾಕಿದ ಮೋದಿ ಸರ್ಕಾರ
Share on WhatsAppShare on FacebookShare on Telegram

ಕಾರ್ಮಿಕರ ಆತಂಕ ನಿಜವಾಗಿದೆ. ತಮ್ಮ ಭವಿಷ್ಯ ನಿಧಿಯ ಬಡ್ಡಿ ಮೇಲೂ ಮೋದಿ ಸರ್ಕಾರ ಕಣ್ಣು ಹಾಕಿದೆ ಎಂಬ ವಿಷಯ ಹಲವು ತಿಂಗಳ ಹಿಂದೆಯೇ ಕಾರ್ಮಿಕರಿಗೆ ತಿಳಿದಿತ್ತು. ಆದರೆ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಆದರೀಗ ಅಧಿಕೃತವಾಗಿ ದೃಢಪಟ್ಟಿದೆ. 2021-22 ನೇ ಸಾಲಿಗೆ ಕಾರ್ಮಿಕರ ಭವಿಷ್ಯ ನಿಧಿಯ ಮೇಲಿನ ಬಡ್ಡಿಯನ್ನು ಶೇ.8.5ರಿಂದ  8.1ಕ್ಕೆ ತಗ್ಗಿಸಲಾಗಿದೆ. ಅಂದರೆ, ಬಡ್ಡಿ ರೂಪದ ಆದಾಯದಲ್ಲಿ ಶೇ.5ರಷ್ಟು ನಷ್ಟವಾಗಲಿದೆ.

ADVERTISEMENT

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರ ಭವಿಷ್ಯ ನಿಧಿಯ ಬಡ್ಡಿದರವನ್ನು ಸತತವಾಗಿ ಕಡಿತ ಮಾಡುತ್ತಲೇ ಬರಲಾಗಿದೆ. ಈಗ ನಿಗಧಿ ಮಾಡಿರುವ ಬಡ್ಡಿದರವು ಒಂದು ದಶಕದಲ್ಲೇ ಅತಿ ಕನಿಷ್ಠ ಮೊತ್ತದ ಬಡ್ಡಿಯಾಗಿದೆ.

ಮೇಲ್ನೋಟಕ್ಕೆ ಶೇ.0.4ರಷ್ಟು ಬಡ್ಡಿಯನ್ನು ಕಡಿತ ಮಾಡಲಾಗಿದೆ ಎಂದು ಅನಿಸಿದರೂ, ದೀರ್ಘಕಾಲದಲ್ಲಿ ಈ ಕಡಿತದಿಂದಾಗಿ ಕಾರ್ಮಿಕರಿಗೆ ಭಾರಿ ನಷ್ಟವಾಗಲಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ಇದರಿಂದ ಭಾರೀ ಲಾಭವೂ ಆಗಲಿದೆ. 

ಕಾರ್ಮಿಕರ ಭವಿಷ್ಯ ನಿಧಿಯ ಬಡ್ಡಿಯನ್ನು ಕೇಂದ್ರ ಹಣಕಾಸು ಸಚಿವಾಲಯವೇ ನಿಯಂತ್ರಿಸುತ್ತದೆ. ಕಾರ್ಮಿಕರ ಭವಿಷ ನಿಧಿ ಸಂಘಟನೆ (ಇಪಿಎಫ್ಒ) ಆಡಳಿತ ಮಂಡಳಿಯು ಹಣಕಾಸು ಸಚಿವಾಲಯದ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತದೆ.

2021-22ನೇ ಸಾಲಿನ ಭವಿಷ್ಯ ನಿಧಿ ಬಡ್ಡಿ ನಿರ್ಧರಿಸುವ ಸಲುವಾಗಿ ಮಾರ್ಚ್ 12ರಂದು ಸಭೆ ಸೇರಿದ್ದ ಇಪಿಎಫ್ಒ ಆಡಳಿತ ಮಂಡಳಿ ಶೇ.8.1ರಷ್ಟಕ್ಕೆ ನಿಗದಿ ಮಾಡಿದೆ. 2020-21ನೇ ಸಾಲಿನಲ್ಲಿ ಕೂಡ ಬಡ್ಡಿದರವು ಶೇ.8.5ರಷ್ಟಿತ್ತು.

ಕಡಿತವಾಗಿರುವ ಬಡ್ಡಿ ದರವು ಶೇ.0.4ರಷ್ಟಾದರೂ, ಕಾರ್ಮಿಕರಿಗೆ ದಕ್ಕುವ ಬಡ್ಡಿ ರೂಪದ ಆದಾಯದಲ್ಲಿ ಶೇ.5ರಷ್ಟು ನಷ್ಟವಾಗುತ್ತದೆ. ಮತ್ತು ಈ ನಷ್ಟವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಇಪಿಎಫ್ಒ ಸುಮಾರು 6 ಕೋಟಿ ಕಾರ್ಮಿಕರ ಭವಿಷ್ಯ ನಿಧಿಯ 15 ಲಕ್ಷ ಕೋಟಿ ರೂಪಾಯಿಗಳನ್ನು ನಿರ್ವಹಿಸುತ್ತದೆ. 

ಬಡ್ಡಿಕಡಿತದಿಂದ ಕೇಂದ್ರ ಸರ್ಕಾರಕ್ಕೆ 6,000 ಕೋಟಿ ಲಾಭ

15 ಲಕ್ಷ ಕೋಟಿ ರೂಪಾಯಿಗಳಿಗೆ ವಾರ್ಷಿಕ ಬಡ್ಡಿ ಶೇ.8.5ರಂತೆ 1,27,500 ಕೋಟಿ ರುಪಾಯಿಗಳಾಗುತ್ತದೆ. ಬಡ್ಡಿದರ ಶೇ.8.1ರಷ್ಟಕ್ಕೆ ತಗ್ಗಿಸಿದಾಗ ಬಡ್ಡಿ ಮೊತ್ತವು 121,500 ಕೋಟಿ ರುಪಾಯಿಗಳಿಗೆ ತಗ್ಗುತ್ತದೆ. ಬಡ್ಡಿದರ ತಗ್ಗಿಸಿರುವುದರಿಂದ ಕೇಂದ್ರ ಸರ್ಕಾರಕ್ಕೆ 6,000 ಕೋಟಿ ಲಾಭವಾದಂತಾಗುತ್ತದೆ.

6 ಕೋಟಿ ಕಾರ್ಮಿಕರಿಗೆ ದಕ್ಕಬೇಕಿದ್ದ ಈ 6000 ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದ ಪಾಲಾಗುತ್ತಿದೆ.

Tags: BJPCongress PartyCovid 19ಕರೋನಾಕಾರ್ಮಿಕರ ಭವಿಷ್ಯಕಾರ್ಮಿಕರ ಭವಿಷ್ಯ ನಿಧಿಕೇಂದ್ರ ಹಣಕಾಸು ಸಚಿವಾಲಯಕೋವಿಡ್-19ನಿಧಿ ಬಡ್ಡಿಬಿಜೆಪಿಮೋದಿ ಸರ್ಕಾರ
Previous Post

ಬೆಂಗಳೂರಿನ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರದಿಂದ ತಾರತಮ್ಯ: ರಾಮಲಿಂಗಾ ರೆಡ್ಡಿ

Next Post

Punjab ಗೆಲುವಿನ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ AAP ಮಾಸ್ಟರ್‌ ಪ್ಲಾನ್: Prithvi Reddyಯವರು ಹೇಳೊದೇನು?

Related Posts

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ
Top Story

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

by ಪ್ರತಿಧ್ವನಿ
May 14, 2026
0

ಬೆಂಗಳೂರು : ನವೀಕರಿಸಬಹುದಾದ ಇಂಧನ ವಲಯವು ವೇಗವಾಗಿ ಬೆಳೆಯುತ್ತಿದ್ದು, ಇದು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡಲ್) ದ ವ್ಯವಸ್ಥಾಪಕ...

Read moreDetails
ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

May 9, 2026
ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

May 5, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

April 25, 2026
Next Post
Punjab ಗೆಲುವಿನ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ AAP ಮಾಸ್ಟರ್‌ ಪ್ಲಾನ್: Prithvi Reddyಯವರು ಹೇಳೊದೇನು?

Punjab ಗೆಲುವಿನ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ AAP ಮಾಸ್ಟರ್‌ ಪ್ಲಾನ್: Prithvi Reddyಯವರು ಹೇಳೊದೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!