• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿರುದ್ಯೋಗ ಬಿಕ್ಕಟ್ಟು: 6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಅರ್ಜಿ.!

ಪ್ರತಿಧ್ವನಿ by ಪ್ರತಿಧ್ವನಿ
February 23, 2023
in Top Story, ದೇಶ
0
ನಿರುದ್ಯೋಗ ಬಿಕ್ಕಟ್ಟು: 6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಅರ್ಜಿ.!
Share on WhatsAppShare on FacebookShare on Telegram

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಕೈಗನ್ನಡಿ ಎಂಬಂತೆ ಮಧ್ಯಪ್ರದೇಶದಲ್ಲಿ 6000 ಹುದ್ದೆಗಳಿಗೆ 12 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ವಿಪರ್ಯಾಸವೆಂದರೆ, ಕೇವಲ ಪದವಿ ಬೇಕಾಗುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಲ್ಲಿ ಡಾಕ್ಟರೇಟ್‌ ಪಡೆದವರು, ಇಂಜಿನಿಯರ್‌ ಗಳು, ವಿಜ್ಞಾನದಲ್ಲಿ ಸ್ನಾತಕೋತ್ರ ಪದವಿ ಹೊಂದಿದವರೂ ಸೇರಿದ್ದಾರೆ.

ADVERTISEMENT

 ಇಂಜಿನಿಯರ್‌ಗಳು ಮತ್ತು ಡಾಕ್ಟರೇಟ್ ಹೊಂದಿರುವವರು ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮಧ್ಯಪ್ರದೇಶದಲ್ಲಿ ಸರಿಸುಮಾರು 6,000 ಪಟ್ವಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ರಾಜ್ಯದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಗಂಭೀರ ಬೆಳಕು ಚೆಲ್ಲಿದೆ.

ಪಟ್ವಾರಿ ಹುದ್ದೆ ಎಂದರೆ ಭೂ ಕಂದಾಯ ಅಧಿಕಾರಿಯಾಗಿದ್ದು, ಅರ್ಜಿ ಸಲ್ಲಿಸಲು ಪದವಿ ಸಾಕಾಗುತ್ತದೆ. ಆದರೆ, ಇಂಜಿನಿಯರಿಂಗ್, ವಿಜ್ಞಾನ ಮತ್ತು MBA ಪದವೀಧರರಂತಹ ಉನ್ನತ ಪದವಿಗಳನ್ನು ಹೊಂದಿರುವ ಅನೇಕ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಪಟ್ವಾರಿ ಹುದ್ದೆಗಳಿಗೆ ಮಾರ್ಚ್ 15 ರಂದು ಪರೀಕ್ಷೆಯನ್ನು ನಿಗದಿಪಡಿಸಲಾಗಿದ್ದು, ಎರಡು ಅವಧಿಗಳಲ್ಲಿ ನಡೆಯಲಿದೆ. ರಾಜ್ಯವು 2017-18 ರಲ್ಲಿ ಪಟ್ವಾರಿ ಉದ್ಯೋಗಗಳಿಗೆ ಕೊನೆಯ ಬಾರಿ ಪರೀಕ್ಷೆಗಳನ್ನು ನಡೆಸಿತ್ತು. ಈ ವರ್ಷ‌ ಬಂದ 12.79 ಲಕ್ಷ ಅಭ್ಯರ್ಥಿಗಳಲ್ಲಿ 1,000 ಮಂದಿ ಡಾಕ್ಟರೇಟ್, 85,000 ಇಂಜಿನಿಯರಿಂಗ್ ಪದವಿ, 1 ಲಕ್ಷ ಎಂಬಿಎ ಪದವೀಧರರು, ಸುಮಾರು 1.8 ಲಕ್ಷ ಮಂದಿ ಕಲೆ ಮತ್ತು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ.

ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ಮಧ್ಯಪ್ರದೇಶದ ನಿರುದ್ಯೋಗ ದರವು 1.9 ಪ್ರತಿಶತದಷ್ಟು ಕಡಿಮೆ ರಾಜ್ಯಗಳಲ್ಲಿದ್ದರೂ, ಪಟ್ವಾರಿ ಉದ್ಯೋಗಗಳಿಗೆ ಹೆಚ್ಚಿನ ಸಂಖ್ಯೆಯ ಅರ್ಜಿ ಬಂದಿರುವುದು ಚಿಂತಿಸಬೇಕಾದ ಕಾರಣವನ್ನು ಹುಟ್ಟುಹಾಕಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿರುದ್ಯೋಗ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಶಿಕ್ಷಕರು, ಪಟ್ವಾರಿ, ಪೋಲಿಸ್ – ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸರ್ಕಾರಿ ಉದ್ಯೋಗಗಳು ಮತ್ತು ಉದ್ಯಮಶೀಲತೆಗಳಲ್ಲಿ ಉದ್ಯೋಗವನ್ನು ಹುಡುಕಲು ಜನರಿಗೆ ಸಹಾಯ ಮಾಡುವಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ.” ಎಂದು ಅವರು ಹೇಳಿದ್ದಾರೆ.

ಆದರೆ, ಮಧ್ಯಪ್ರದೇಶದ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಮಾತನಾಡಿ, ‘ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಶಿವರಾಜ್ ಸರ್ಕಾರ ವಿಫಲವಾಗಿದೆ ಎಂಬುದನ್ನು ಅಪಾರ ಸಂಖ್ಯೆಯ ಅರ್ಜಿದಾರರು ತೋರಿಸುತ್ತಿದ್ದಾರೆ ಎಂದಿದ್ದಾರೆ.

Previous Post

ಸದನದಲ್ಲಿನ ತಮ್ಮ ಕೊನೆಯ ಭಾಷಣದಲ್ಲಿ ಯಡಿಯೂರಪ್ಪ ಭಾವುಕ

Next Post

ಮಂಡ್ಯ: ವ್ಯಕ್ತಿಯ ಭೀಕರ ಹತ್ಯೆ- ಮೃತದೇಹ ತುಂಡರಿಸಿ ನಾಲೆಗೆ ಎಸೆದ ಹಂತಕರು

Related Posts

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !
Top Story

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

by ಪ್ರತಿಧ್ವನಿ
May 15, 2026
0

ಬೆಂಗಳೂರು : ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

Read moreDetails
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ

May 15, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
Next Post
ಮಂಡ್ಯ: ವ್ಯಕ್ತಿಯ ಭೀಕರ ಹತ್ಯೆ- ಮೃತದೇಹ ತುಂಡರಿಸಿ ನಾಲೆಗೆ ಎಸೆದ ಹಂತಕರು

ಮಂಡ್ಯ: ವ್ಯಕ್ತಿಯ ಭೀಕರ ಹತ್ಯೆ- ಮೃತದೇಹ ತುಂಡರಿಸಿ ನಾಲೆಗೆ ಎಸೆದ ಹಂತಕರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada