ಗದಗ : ಅಳಿವಿನಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯೊಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶದ ಅಂಚಿನಲ್ಲಿರುವ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿದೆ. ಈ ಆಮೆಗೆ ವೈಜ್ಞಾನಿಕವಾಗಿ ಜಿಯೋಚಲೋನ್ ಎಲಗನ್ಸ್ ಎಂಬ ಹೆಸರಿದ್ದು ಈ ಆಮೆಗಳು 10 ಇಂಚುಗಳವರೆಗೆ ಬೆಳೆಯಬಲ್ಲವು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇವುಗಳ ದೇಹದ ಮೇಲೆ ನಕ್ಷತ್ರಾಕಾರದ ಗಾಢ ಬಣ್ಣದ ವಿನ್ಯಾಸವಿದ್ದು ಇವುಗಳನ್ನು ಮನೆಯಲ್ಲಿ ಸಾಕಿದರೆ ಸಂಪತ್ತು ವೃದ್ಧಿಸುತ್ತೆ ಎಂಬ ನಂಬಿಕೆ ಕೂಡ ಇದೆ. ಆದರೆ ಮನೆಯ ವಾತಾವರಣದಲ್ಲಿ ಈ ಆಮೆಗಳು ಬಹಳ ಸಮಯಗಳವರೆಗೆ ಬದುಕುವುದಿಲ್ಲ.
ಈ ಆಮೆಗಳನ್ನು ಕೆಲವರು ಚಿಪ್ಪು ಹಾಗೂ ಮಾಂಸದ ಆಸೆಗಾಗಿ ಬೇಟೆಯಾಡುತ್ತಾರೆ. ಇದೇ ಕಾರಣಕ್ಕೆ ಈ ಆಮೆಗಳು ಅಳಿನಂಚಿಗೆ ಸೇರಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.