
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಲಾಗಿದೆ. ಪೊಲೀಸರ ಗುಂಡೇಟಿಗೆ ಆರೋಪಿ ಜೀವ ಖಲ್ಲಾಸ್ ಆಗಿದೆ. ಬಿಹಾರ ಮೂಲದ ರಿತೇಶ್ ಕುಮಾರರ್ನನ್ನು ಎನ್‌ಕೌಂಟರ್ ಮಾಡಲಾಗಿದೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ತಾರಿಹಾಳ ಅಂಡರ್ಪಾಸ್ ಬಳಿ ರಿತೇಶ್ ಎನ್‌ಕೌಂಟರ್ ನಡೆದಿದೆ. ಮನೆ ಅಂಗಳದಲ್ಲಿ ಆಟ ಆಡ್ತಿದ್ದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದ ಪಾಪಿ, ಅತ್ಯಾಚಾರ ಮಾಡಿ ಕೊಂದಿದ್ದ ಅನ್ನೋ ಆರೋಪ ಎದುರಾಗಿತ್ತು. ಆರೋಪಿಯನ್ನು ಎನ್‌ಕೌಂಟರ್ ಮಾಡುವಂತೆ ಪಟ್ಟು ಹಿಡಿದ್ದ ಜನ, ಪ್ರತಿಭಟನೆ ಮಾಡಿದ್ದರು. ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗ್ತಿದ್ದಾಗ ಎನ್‌ಕೌಂಟರ್ ಮಾಡಲಾಗಿದೆ.

ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿದ್ದು, ಬೇರೆ ಕಡೆಯೂ ಕೃತ್ಯ ಎಸಗಿದ್ದಾನಾ..? ಅಂತ ತನಿಖೆ ಮಾಡ್ತಿದ್ದೇವೆ. ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ, ಅನುಚಿತ ವರ್ತನೆ ಹಿನ್ನೆಲೆ ಫೋಸ್ಕೋ ಕೇಸ್ ಹಾಕಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ. ಆತ ಮೃತಪಟ್ಟಿರುವುದಾಗಿ ಕಿಮ್ಸ್ ವೈದ್ಯರು ಖಚಿತ ಮಾಡಿದ್ದಾರೆ. ಆರೋಪಿ ಜೀವ ಉಳಿಸಲು ಕಿಮ್ಸ್ಗೆ ದಾಖಲಿಸಲಾಗಿತ್ತು. ಇಂತಹ ವೇಳೆ ಪೊಲೀಸರ ಆತ್ಮರಕ್ಷಣೆಯೂ ಮುಖ್ಯ ಎಂದಿದ್ದಾರೆ.

ಪೊಲೀಸರಿಗೆ ಹಲ್ಲೆ ಮಾಡಿದ್ದಕ್ಕೆ ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪಿಎಸ್ಐ ಅನ್ನಪೂರ್ಣ ಫೈರಿಂಗ್ ಮಾಡಿದ್ದು, ತಾರಿಹಾಳ ಅಂಡರ್ಪಾಸ್ ಬಳಿ ಫೈರಿಂಗ್ ನಡೆದಿದೆ. ಕಾಲು ಮತ್ತು ಬೆನ್ನಿಗೆ ಶೂಟ್ ಮಾಡಿದ್ದಾರೆ ಪಿಎಸ್ಐ. ಗಾಳಿಯಲ್ಲಿ ಗುಂಡು ಹಾರಿಸಿದರೂ ಪರಾರಿಗೆ ಯತ್ನ ಮಾಡಿದ್ದಾನೆ. ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಕಲ್ಲು ತೂರಿದ್ದ. 2-3 ತಿಂಗಳಿಂದ ತಾರಿಹಾಳದ ಬಳಿ ವಾಸವಿದ್ದ ಎನ್ನಲಾಗಿದೆ. 35 ವರ್ಷದ ರಿತೇಶ್, ಬಿಹಾರದ ಪಾಟ್ನಾದವನು ಅನ್ನೋದು ತಿಳಿದು ಬಂದಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಹಂತಕ ರಿತೇಶ್ ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಪೊಲೀಸ್ ಕಮಿಷನರ್‌ಗೆ ಪ್ರತಿಭಟನಾಕಾರರು ಜೈಕಾರ ಕೂಗಿದ್ದಾರೆ. ‘ಆರೋಪಿ ಎನ್‌ಕೌಂಟರ್ ಮಾಡಿದ್ದು ಸರಿ ಇದೆ’ ‘ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ಜೈಕಾರ ಕೂಗಿದ್ದಾರೆ. ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪುಟ್ಟ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣ, ಬಾಲಕಿ ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಣ್ಣೀರು ಹಾಕಿದ್ದು, ನನಗೆ ನನ್ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳ ನೆನಪಾಗ್ತಾರೆ. ದುಡಿದು ತಿನ್ನುವ ಕುಟುಂಬ, ಸರ್ಕಾರ ಆ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ಪರಿಹಾರ ನೀಡಲಿ ಎಂದು ಆಗ್ರಹ ಮಾಡಿದರು. ಮೃತ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾಹಿತಿ ನೀಡಿದ್ದು, ಸಿಎಂ ನಿರ್ದೇಶನದ ಮೇರೆಗೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ಸ್ಲಂ ಬೋರ್ಡ್ನಿಂದ ಒಂದು ಮನೆ ಹಸ್ತಾಂತರಕ್ಕೂ ನಿರ್ಧಾರ ಮಾಡಲಾಗಿದೆ ಎಂದು ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಘೋಷಣೆ ಮಾಡಿದ್ದಾರೆ.