• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಲಕಿ ಕೊಂದವನ ಎನ್​ಕೌಂಟರ್.. ಸರ್ಕಾರದಿಂದ 10 ಲಕ್ಷ, ಒಂದು ಮನೆ ಪರಿಹಾರ

ಕೃಷ್ಣ ಮಣಿ by ಕೃಷ್ಣ ಮಣಿ
April 14, 2025
in Top Story, ಕರ್ನಾಟಕ, ಶೋಧ
0
ಬಾಲಕಿ ಕೊಂದವನ ಎನ್​ಕೌಂಟರ್.. ಸರ್ಕಾರದಿಂದ 10 ಲಕ್ಷ, ಒಂದು ಮನೆ ಪರಿಹಾರ
Share on WhatsAppShare on FacebookShare on Telegram


ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಂದ ಪಾಪಿಯನ್ನು ಎನ್​ಕೌಂಟರ್ ಮಾಡಲಾಗಿದೆ. ಪೊಲೀಸರ ಗುಂಡೇಟಿಗೆ ಆರೋಪಿ ಜೀವ ಖಲ್ಲಾಸ್ ಆಗಿದೆ. ಬಿಹಾರ ಮೂಲದ ರಿತೇಶ್‌‌ ಕುಮಾರರ್​ನನ್ನು‌‌‌ ಎನ್​ಕೌಂಟರ್ ಮಾಡಲಾಗಿದೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ತಾರಿಹಾಳ ಅಂಡರ್​ಪಾಸ್​ ಬಳಿ ರಿತೇಶ್‌ ಎನ್‌ಕೌಂಟರ್‌ ನಡೆದಿದೆ. ಮನೆ ಅಂಗಳದಲ್ಲಿ ಆಟ ಆಡ್ತಿದ್ದ ಮಗುವನ್ನು ಕಿಡ್ನ್ಯಾಪ್​ ಮಾಡಿದ್ದ ಪಾಪಿ, ಅತ್ಯಾಚಾರ ಮಾಡಿ ಕೊಂದಿದ್ದ ಅನ್ನೋ ಆರೋಪ ಎದುರಾಗಿತ್ತು. ಆರೋಪಿಯನ್ನು ಎನ್​ಕೌಂಟರ್​ ಮಾಡುವಂತೆ ಪಟ್ಟು ಹಿಡಿದ್ದ ಜನ, ಪ್ರತಿಭಟನೆ ಮಾಡಿದ್ದರು. ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗ್ತಿದ್ದಾಗ ಎನ್​ಕೌಂಟರ್​ ಮಾಡಲಾಗಿದೆ.

ADVERTISEMENT

ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿದ್ದು, ಬೇರೆ ಕಡೆಯೂ ಕೃತ್ಯ ಎಸಗಿದ್ದಾನಾ..? ಅಂತ ತನಿಖೆ ಮಾಡ್ತಿದ್ದೇವೆ. ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ, ಅನುಚಿತ ವರ್ತನೆ ಹಿನ್ನೆಲೆ ಫೋಸ್ಕೋ ಕೇಸ್ ಹಾಕಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ. ಆತ ಮೃತಪಟ್ಟಿರುವುದಾಗಿ ಕಿಮ್ಸ್ ವೈದ್ಯರು ಖಚಿತ ಮಾಡಿದ್ದಾರೆ. ಆರೋಪಿ ಜೀವ ಉಳಿಸಲು ಕಿಮ್ಸ್​ಗೆ ದಾಖಲಿಸಲಾಗಿತ್ತು. ಇಂತಹ ವೇಳೆ ಪೊಲೀಸರ ಆತ್ಮರಕ್ಷಣೆಯೂ ಮುಖ್ಯ ಎಂದಿದ್ದಾರೆ.

ಪೊಲೀಸರಿಗೆ ಹಲ್ಲೆ ಮಾಡಿದ್ದಕ್ಕೆ ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪಿಎಸ್​ಐ ಅನ್ನಪೂರ್ಣ ಫೈರಿಂಗ್ ಮಾಡಿದ್ದು, ತಾರಿಹಾಳ ಅಂಡರ್​ಪಾಸ್​ ಬಳಿ ಫೈರಿಂಗ್ ನಡೆದಿದೆ. ಕಾಲು ಮತ್ತು ಬೆನ್ನಿಗೆ ಶೂಟ್ ಮಾಡಿದ್ದಾರೆ ಪಿಎಸ್​ಐ. ಗಾಳಿಯಲ್ಲಿ ಗುಂಡು ಹಾರಿಸಿದರೂ ಪರಾರಿಗೆ ಯತ್ನ ಮಾಡಿದ್ದಾನೆ. ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಕಲ್ಲು ತೂರಿದ್ದ. 2-3 ತಿಂಗಳಿಂದ ತಾರಿಹಾಳದ ಬಳಿ ವಾಸವಿದ್ದ ಎನ್ನಲಾಗಿದೆ. 35 ವರ್ಷದ ರಿತೇಶ್​, ಬಿಹಾರದ ಪಾಟ್ನಾದವನು ಅನ್ನೋದು ತಿಳಿದು ಬಂದಿದೆ ಎಂದು ಕಮಿಷನರ್​ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಹಂತಕ ರಿತೇಶ್ ಎನ್‌‌ಕೌಂಟರ್‌‌‌‌ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಪೊಲೀಸ್ ಕಮಿಷನರ್‌‌ಗೆ ಪ್ರತಿಭಟನಾಕಾರರು ಜೈಕಾರ ಕೂಗಿದ್ದಾರೆ. ‘ಆರೋಪಿ ಎನ್‌‌ಕೌಂಟರ್‌‌‌‌‌ ಮಾಡಿದ್ದು ಸರಿ ಇದೆ’ ‘ಎನ್‌ಕೌಂಟರ್‌‌‌‌ ಮಾಡಿದ ಪೊಲೀಸರಿಗೆ ಜೈಕಾರ ಕೂಗಿದ್ದಾರೆ. ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

N ShashiKumar : ಆರೋಪಿಯ ಹಿನ್ನಲೆ ಏನಾದರು ಗೊತ್ತಾಗಿದ್ಯಾ ಸರ್​​ #pratidhvani

ಪುಟ್ಟ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣ, ಬಾಲಕಿ ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಣ್ಣೀರು ಹಾಕಿದ್ದು, ನನಗೆ ನನ್ ಮನೆಯಲ್ಲಿ ಮಕ್ಕಳು, ‌ಮೊಮ್ಮಕ್ಕಳ ನೆನಪಾಗ್ತಾರೆ. ದುಡಿದು ತಿನ್ನುವ ಕುಟುಂಬ, ಸರ್ಕಾರ ಆ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ಪರಿಹಾರ ನೀಡಲಿ ಎಂದು ಆಗ್ರಹ ಮಾಡಿದರು. ಮೃತ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ವಿಧಾನ‌ ಪರಿಷತ್ ಮುಖ್ಯ ಸಚೇತಕ ಸಲೀಂ‌ ಅಹ್ಮದ್ ಮಾಹಿತಿ ನೀಡಿದ್ದು, ಸಿಎಂ ನಿರ್ದೇಶನದ‌ ಮೇರೆಗೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ ಸ್ಲಂ ಬೋರ್ಡ್​ನಿಂದ ಒಂದು ಮನೆ ಹಸ್ತಾಂತರಕ್ಕೂ ನಿರ್ಧಾರ ಮಾಡಲಾಗಿದೆ ಎಂದು ಸ್ಲಂ‌ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಘೋಷಣೆ ಮಾಡಿದ್ದಾರೆ.

Tags: 2022 hubballi riot casehubali dharwad murder casehubbali 5 years girl incidenthubbali murderHubballihubballi 5 years girl incidenthubballi 5 years girls incident newshubballi casehubballi clashhubballi college campus murder casehubballi girl incidenthubballi incidenthubballi latest newshubballi murderhubballi murder casehubballi newshubballi riot casehubballi riotshubballi today incidenthubballi today news
Previous Post

ನಮ್ಮೊಳಗಿನ ಅಂಬೇಡ್ಕರ್‌   ಆಳಕ್ಕಿಳಿಯುವುದು ಎಂದು ?

Next Post

EVM ನಂಬಲು ಅಸಾಧ್ಯ ಎಂದ ಅಮೆರಿಕ.. ನಮ್ಮದು ಸೇಫ್​ ಅಂತಿದೆ ಭಾರತ..

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
EVM ನಂಬಲು ಅಸಾಧ್ಯ ಎಂದ ಅಮೆರಿಕ.. ನಮ್ಮದು ಸೇಫ್​ ಅಂತಿದೆ ಭಾರತ..

EVM ನಂಬಲು ಅಸಾಧ್ಯ ಎಂದ ಅಮೆರಿಕ.. ನಮ್ಮದು ಸೇಫ್​ ಅಂತಿದೆ ಭಾರತ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada