ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿಯನ್ನು ಕಣ್ತುಂಬಿಕೊಳ್ತಿದ್ದ ಕನ್ನಡನಾಡಿನ ಜನತೆ, ಇವತ್ತು ಕಣ್ತುಂಬಿಕೊಂಡು ಭಾರದ ಮನಸ್ಸಿನಿಂದ ಶಿವಣ್ಣನಿಗೆ ಬೀಲ್ಕೊಟ್ಟಿದ್ದಾರೆ. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಶಿವಣ್ಣನಿಗೆ ಕ್ಯಾನ್ಸರ್ ಅನ್ನೋ ಮಹಾಮಾರಿಗೆ ತುತ್ತಾಗಿದ್ದು, ಆಪರೇಷನ್ ಮಾಡಿಸುವ ಸಲುವಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಕನ್ನಡ ಚಿತ್ರರಂಗದ ಎನರ್ಜಿ ಬೂಸ್ಟರ್ ರೀತಿ ಖುಷ್ ಖುಷ್ ಆಗಿ ನಡೆದುಕೊಳ್ತಿದ್ದ ಶಿವಣ್ಣ, ಇವತ್ತು ಅನಾರೋಗ್ಯದಿಂದ ಅಮೆರಿಕಕ್ಕೆ ತೆರಳುವಾಗ ಭಾವನಾತ್ಮಕವಾಗಿ ಕಣ್ತುಂಬಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಶಿವಣ್ಣ, ಬೈರತಿ ರಣಗಲ್ ಸಿನಿಮಾ ಬಿಡುಗಡೆ ಬಳಿಕ ಮಡದಿ ಹಾಗು ಮಗಳ ಜೊತೆಗೆ ಅಮೆರಿಕಕ್ಕೆ ತೆರಳಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ಶಿವಣ್ಣನಿಗೆ ಡಿಸೆಂಬರ್ 24ರಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ. ಆ ಬಳಿಕ ಒಂದು ತಿಂಗಳ ಕಾಲ ಅಮೆರಿಕದಲ್ಲೇ ವಿಶ್ರಾಂತಿ ಪಡೆಯಲಿರುವ ಶಿವರಾಜ್ ಕುಮಾರ್, ಜನವರಿ 25ರಂದು ತವರಿಗೆ ವಾಪಸ್ ಆಗಲಿದ್ದಾರೆ. ಕಿಚ್ಚ ಸುದೀಪ್, ಬಿಸಿ ಪಾಟೀಲ್, ವಿನೋದ್ ರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಶ್ರೀಮುತ್ತು ನಿವಾಸಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಶಿವಣ್ಣನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರು.
ನೂರಾರು ಅಭಿಮಾನಿಗಳ ಹಾರೈಕೆಯಿಂದ ಮನತುಂಬಿ ಬಂದಿದ್ದರಿಂದ ಶಿವಣ್ಣ ಕಣ್ಣೀರು ಹಾಕಿದ್ರು. ಸಾಕಷ್ಟು ಬಾರಿ ವಿದೇಶಗಳಿಗೆ ಪ್ರಯಾಣ ಮಾಡಿರುವ ಶಿವಣ್ಣನಿಗೆ, ಈ ಬಾರಿಯ ಅಮೆರಿಕ ಪ್ರವಾಸ ವಿಶೇಷ ಎನಿಸಿದ್ದು, ಎಲ್ಲರ ಅಭಿಮಾನದಿಂದ ಕಣ್ತುಂಬಿಕೊಂಡರು. ಮಾತಿನಲ್ಲಿ ಧೈರ್ಯವಾಗಿದ್ದೀನಿ, ಯಾವುದೇ ಭಯ ಇಲ್ಲ ಎಂದ ಶಿವಣ್ಣ, ಮಾತು ಮಾತಿನಲ್ಲೇ ಕಣ್ಣೀರಾದರು.
ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಡಾ.ಮುರುಗೇಶ್ ಆಪರೇಷನ್ ಮಾಡಲಿದ್ದಾರೆ. ಡಿಸೆಂಬರ್ 24ಕ್ಕೆ ಸರ್ಜರಿ ಆಗಲಿದ್ದು, ಜನವರಿ 25ಕ್ಕೆ ಕರುನಾಡಿಗೆ ಆಗಮಿಸಲಿದ್ದಾರೆ. ಮೂತ್ರಕೋಶದ ಸರ್ಜರಿಗೆ ಒಳಗಾದ ಬಳಿಕ ಅಮೆರಿಕದಲ್ಲೇ ವಿಶ್ರಾಂತಿ ಪಡೆಯಲು ನಿರ್ಧಾರ ಮಾಡಿದ್ದಾರೆ. ಸದ್ಯ ಶಿವಣ್ಣ ಅವ್ರ ಅರೋಗ್ಯ ಸ್ಥಿರವಾಗಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಮತ್ತೆ ಹೊಸ ಖದರ್ನಲ್ಲಿ ಬರ್ತೀನಿ ಅನ್ನೋದು ಶಿವಣ್ಣ ವಿಶ್ವಾಸ.. ಗೆದ್ದು ಬನ್ನಿ ಕರುನಾಡ ಚಕ್ರವರ್ತಿ ಅನ್ನೋದು PRATHIDVANI ಆಶಯ.