ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನದಟ್ಟಣೆಯಿಂದ ರಾಜಧಾನಿಯ ವಾತಾವರಣ ಹಾಳಾಗುತ್ತಿದೆ. ಇಂಥ ಸಮಸ್ಯೆಗಳ ಬಗ್ಗೆ ಸರ್ಕಾರ ಕೊಂಚ ಗಮನಹರಿಸಿದ್ದು, ವಾಯುಮಾಲಿನ್ಯ ತಡೆಯಲು ಇದೀಗ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ.
ಸಿಲಿಕಾನ್ ಸಿಟಿಯಲ್ಲಿ ವಾಯುಮಾಲಿನ್ಯದ ಬಗ್ಗೆ ಕೇಳುವುದೇ ಬೇಡ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನದಟ್ಟಣೆಯಿಂದ ವಾತಾವರಣ ಹಾಳಾಗುತ್ತಿದೆ. ಇಂಥ ಸಮಸ್ಯೆಗಳ ಬಗ್ಗೆ ಸರ್ಕಾರ ಕೊಂಚ ಗಮನಹರಿಸಿದ್ದು, ವಾಯುಮಾಲಿನ್ಯ ತಡೆಯಲು ಇದೀಗ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸರ್ಕಾರ ಮುಕ್ತ ಅವಕಾಶ ಕಲ್ಪಿಸುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜಧಾನಿಯಲ್ಲಿ ಎಲೆಕ್ಟ್ರಿಕಲ್ ತರುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದು ಬೆಳಗ್ಗೆ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 90 ಎಲೆಕ್ಟ್ರಿಕ್ ಬಸ್ ಹಾಗೂ 265 ಬಿಎಸ್-6 ಡೀಸೆಲ್ ಬಸ್ ಗಳನ್ನು ಲೋಕಾರ್ಪಣೆಗೊಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಈ ಮಾತನಾಡಿ, ನಮ್ಮ ಸಾರಿಗೆ ಸಂಸ್ಥೆ ಮುಂದುವರೆಯಬೇಕು. ಇದರ ಪುನಶ್ಚೇತನ ಮಾಡಲು ಸಮಿತಿ ರಚಿಸಿದ್ದೇವೆ. ಆರ್ಥಿಕ ಸ್ವಾವಲಂಬನೆ ಆಗಬೇಕು. ಶ್ರೀ ನಿವಾಸಮೂರ್ತಿ ಅವರ ನೇತೃತ್ವದಲ್ಲಿ ಹೊಸ ಸ್ವರೂಪದಲ್ಲಿ ಕೆಲಸವಾಗುತ್ತಿದೆ. ಇವತ್ತು 90 ಬಸ್ ಗಳನ್ನು ಉದ್ಘಾಟಿಸಿದ್ದೇವೆ. ಪರಿಸರ ಮಾಲಿನ್ಯವೂ ಇದರಿಂದ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಇವತ್ತು ರಾಜ್ಯಕ್ಕೆ ಮಹತ್ತರ ದಿನ. ದೇಶ ಬದಲಾವಣೆ ಆಗುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಮುಖ್ಯ ಮಂತ್ರಿ ಬದಲಾವಣೆ ತರುತ್ತಿದ್ದಾರೆ. ಪರಿಸರ ಉಳಿಸಲು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳ ಲೋಕಾರ್ಪಣೆ ಆಗುತ್ತಿರುವುದು ಖುಷಿಯ ವಿಚಾರ ಎಂದು ಸಾರಿಗೆ ಸಚಿವ ಶ್ರೀ ರಾಮುಲು ಹೇಳಿದರು.

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ
ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಪರಿಚಯವಾಗಿದೆ. 90 ಎಲೆಕ್ಟ್ರಿಕ್ ಬಸ್ ಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ತಯಾರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಟ್ರೋ ಪ್ರಯಾಣಿಕರಿಗೆ ಮೊದಲ ಹಾಗೂ ಕೊನೆಯ ಸ್ಥಳ ತಲುಪಲು ಅನುಕೂಲವಾಗುವಂತೆ ಮೆಟ್ರೋ ಫೀಡರ್ ಸಾರಿಗೆಗಳಾಗಿ ಇವು ಕಾರ್ಯಾ ನಿರ್ವಹಿಸಲಿವೆ.
ಸದರಿ ಬಸ್ ಗಳು ಹವಾನಿಯಂತ್ರಣ ರಹಿತವಾಗಿದ್ದು, 33 ಆಸನಗಳನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವೆಹಿಕಲ್ ಟ್ರೇಕಿಂಗ್ ಯುನಿಟ್, ಸಿಸಿಟಿವಿ, ತುರ್ತು ಪ್ಯಾನಿಕ್ ಬಟನ್ ಮತ್ತು ಎಲ್ ಇಡಿ ಮಾರ್ಗ ಫಲಕಗಳನ್ನು ಬಸ್ ಗಳಲ್ಲಿ ಅಳವಡಿಸಲಾಗಿದೆ. ಈ ಬಸ್ ಗಳನ್ನು ಒಂದೂವರೆ ಗಂಟೆ ಚಾರ್ಜ್ ಮಾಡಿದರೆ ಸಾಕು 180 ಕಿ.ಮೀ ಸಂಚರಿಸಲಿವೆ.
ಎಲೆಕ್ಟ್ರಿಕ್ ಬಸ್ ಗಳ ನಿಯೋಜನೆಗೆ ಬೆಂಗಳೂರು ಸ್ಮಾರ್ಟ್ ಸಿಟಿಯಿಂದ 50 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಭಾರತ ಸರಕಾರದ ಅಂಗಸಂಸ್ಥೆ, ವಿದ್ಯುತ್ವ ವ್ಯಾಪಾರ ನಿಗಮ ನಿಯಮಿತದವರು ಬಸ್ ಗಳನ್ನು ಹತ್ತು ವರ್ಷದ ಅವಧಿಗೆ ಕಾಂಟ್ರ್ಯಾಕ್ಟ್ ಆಧಾರದಲ್ಲಿ ಸೇವೆಗೆ ನೀಡಲಿದ್ದಾರೆ.
ತಲಾ 30 ಬಸ್ ಗಳು ಕೆಂಗೇರಿ ಘಟಕ, ಯಶವಂತಪುರ ಘಟಕ ಹಾಗೂ ಕೆ. ಆರ್ ಪುರಂ ಘಟಕಗಳಮ್ಮಿ ಈ ಬಸ್ ಗಳು ಚಲಿಸಲಿವೆ. ಉಳಿದ 40 ಬಸ್ಸ್ ಗಳು ಜನವರಿ ತಿಂಗಳ ಒಳಗೆ ಕಾರ್ಯಾಚರಣೆಗೆ ಲಭ್ಯವಾಗಲಿದೆ.
ಹೊಸ ವರ್ಷನ್ ಬಿಎಸ್ 6 ಗೂ ಸಿಕ್ತು ಚಾಲನೆ
ದೇಶದಲ್ಲೇ ಮೊದಲ BS6 ಇಂಜಿನ್ ಡೀಸೆಲ್ ಬಸ್ಗಳಿಗೂ ಇಂದು ಚಾಲನೆ ಸಿಕ್ಕಿದೆ. ಬಿಎಸ್ 6 ಡೀಸೆಲ್ ಬಸ್ ಗಳನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪರಿಚಯ ಮಾಡಲಾಗಿದ್ದು, ಪರಿಸರ ಮಾಲಿನ್ಯ ಕಡಿಮೆ ಇರುವ, ಅತಿ ಕಡಿಮೆ ಹೊಗೆ ಹೊರಸೂಸುವ ಬಸ್ ಆಗಿದೆ. ಈ ಬಸ್ನಲ್ಲಿ ಕೂಡ 33 ಆಸನಗಳ ವ್ಯವಸ್ಥೆ ಇದೆ. ಇದು ಈ ಹಿಂದೆ ತಯಾರಿಸಿದ ಎಲೆಕ್ಟ್ರಿಕ್ ವಾಹನಗಳ ನಂತರದ ವರ್ಷನ್ ಆಗಿದ್ದು, ಹೊಸ ತಂತ್ರಜ್ಞಾನಗಳ ಶೈಲಿಯಿಂದ ಈ ವಿನೂತನ ಬಿಎಸ್ 6 ಬಸ್ ಗೆ ಚಾಲನೆ ನೀಡಲಾಗಿದೆ. ಇದನ್ನು ಕೇವಲ ಡೀಸೆಲ್ ಮೂಲಕವೇ ಓಡಿಸಬಹುದಾಗಿದ್ದು, ಇದರಲ್ಲಿಯೂ ಸಿಸಿ ಕ್ಯಾಮೆರಾ, ಸ್ಟಾಪ್ ಬಟಮ್ , ಸೆನ್ಸಾರ್ ಗಳಿದ್ದು, ಪ್ರಯಾಣಿಕರಿಗೆ ಸುಲಭವಾಗಿ ತೆರಳಬಹುದು.
ಇದುವರೆಗೂ 150 ಬಸ್ಸ್ ಗಳು ಸರಬರಾಜಾಗಿದ್ದು, ಉಳಿದ ಬಸ್ಸ್ ಗಳು ಮುಂದಿನ ಫೆಬ್ರವರಿ ತಿಂಗಳ ಒಳಗೆ ಕಾರ್ಯಾಚರಣೆಗೆ ಲಭ್ಯವಾಗಿದೆ. ಸದರಿ ಬಸ್ಸ್ ಗಳು 41 ಆಸನಗಳು, ತುರ್ತು ಪ್ಯಾನಿಕ್ ಬಟನ್, ಹಿಂಬದಿ ಏರ್ ಸಸ್ಪೆನ್ಶನ್ ಮತ್ತು ಎಲ್ ಇ ಡಿ ಮಾರ್ಗ ಫಲಕಗಳನ್ನು ಹೊಂದಿದೆ.
ಮೆಟ್ರೋ ಸಂಚಾರದ ಅನುಭವ!
ಎಲೆಕ್ಟ್ರಿಕ್ ಬಸ್ ಗಳಲ್ಲಿ ಪ್ರಯಾಣಿಸುವುದೇ ಒಂದು ಸಂತಸದ ಅನುಭವ. ನಾವು ಸಾಮಾನ್ಯವಾಗಿ ಮೆಟ್ರೋ ಮೂಲಕ ಪ್ರಯಾಣಿಸುತ್ತೇವೆ. ಅತೀ ಕಡಿಮೆ ಸಮಯದಲ್ಲಿ ಬೇಗ ತಲುಪಬಹುದು ಎನ್ನುವ ಖುಷಿಯಿಂದ ಮೆಟ್ರೋ ಆಯ್ಕೆ ಮಾಡುತ್ತೇವೆ, ಆದರೆ ಇನ್ನು ಮುಂದೆ ಎಲೆಕ್ಟ್ರಿಕ್ ಬಸ್ ಗಳು ಮಟ್ರೋ ಸಂಚಾರದ ಅನುಭವ ನೀಡುತ್ತವೆ.
ಸ್ಮಾರ್ಟ್ ಸಿಟಿ ಅಡಿಯಲ್ಲಿ ರಾಜ್ಯ ಸರಕಾರ ಈ ಹಿಂದೆಯೂ ಅನೇಕ ಯೋಜನೆಗಳನ್ನು ತಂದಿದೆ. ಎಲೆಕ್ಟ್ರಿಕ್ ಸ್ಕೂಟಿ, ಬಸ್ ಗಳನ್ನು ಬಿಡುಗಡೆಗೊಳಿಸಲಾಗಿದೆ. ಪರಿಸರ ಮಾಲಿನ್ಯ ತಡೆಯುವ ದಷ್ಟಿಯಿಂದ ಜಾರಿಗೆ ತಂದ ಈ ಯೋಜನೆಗಳು ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗದೇ ಇರಲಿ.