• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಚುನಾವಣಾ ಭ್ರಷ್ಟಾಚಾರ ವ್ಯವಸ್ಥೆಗಂಟಿದ ವ್ಯಾಧಿ

ಪ್ರತಿಧ್ವನಿ by ಪ್ರತಿಧ್ವನಿ
May 8, 2024
in ಅಂಕಣ
0
Share on WhatsAppShare on FacebookShare on Telegram

—–ನಾ ದಿವಾಕರ——
ಭ್ರಷ್ಟ ಸಂತತಿಯ ಮೂಲ ಇರುವುದು ಬಂಡವಾಳಶಾಹಿ ಕಾರ್ಪೋರೇಟ್‌ ಮಾರುಕಟ್ಟೆಯಲ್ಲಿ

ADVERTISEMENT

(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಮೇ 2024)

ಮೂಲತಃ ಭ್ರಷ್ಟಾಚಾರ ಎಂಬ ಚಟುವಟಿಕೆ ಮಾನವ ಸಮಾಜದ ವ್ಯಾವಹಾರಿಕ ಸಂಬಂಧಗಳ ಮೂಲಕ ಸೃಷ್ಟಿಯಾಗುವ ಒಂದು ಸಾಮಾಜಿಕ-ಆರ್ಥಿಕ ವಿದ್ಯಮಾನ. ಉತ್ಪಾದನೆಯ ನೆಲೆಗಳಿಂದ ಹಿಡಿದು ಉತ್ಪಾದಿತ ಸರಕುಗಳು ಕಟ್ಟಕಡೆಯ ಗ್ರಾಹಕ ವ್ಯಕ್ತಿಯನ್ನು ತಲುಪುವವರೆಗೂ ವ್ಯಾಪಿಸುವ ಹಣಕಾಸು ವ್ಯವಹಾರವು ನಡುನಡುವೆ ತನ್ನದೇ ಆದ ಕವಲುಗಳನ್ನು ಸೃಷ್ಟಿಸಿಕೊಳ್ಳುತ್ತಾ, ಉತ್ಪಾದಿಸುವವರು-ಉತ್ಪಾದನೆಯ ಫಲಾನುಭವಿಗಳು ಹಾಗೂ ಇವರಿಬ್ಬರ ನಡುವೆ ಇರುವ ಮಧ್ಯವರ್ತಿಗಳನ್ನು ತನ್ನದೇ ಆದ ಚೌಕಟ್ಟಿನಲ್ಲಿ ಬಂಧಿಸುತ್ತಾ ಹೋಗುತ್ತದೆ. ಇದನ್ನು ಆರ್ಥಿಕ ಪರಿಭಾಷೆಯಲ್ಲಿ ಮಾರುಕಟ್ಟೆ ಎನ್ನುತ್ತೇವೆ. ಈ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲೆಂದೇ ಔದ್ಯೋಗಿಕ ಮತ್ತು ಔದ್ಯಮಿಕ ಜಗತ್ತು ತನ್ನದೇ ಆದ ಸಾಮಾಜಿಕ ವಲಯಗಳನ್ನು ರೂಪಿಸಿಕೊಂಡು, ಅದರೊಳಗಿನ ಜನರ ಜೀವನ, ಜೀವನೋಪಾಯ ಹಾಗೂ ಬದುಕಿನ ಮಾರ್ಗಗಳನ್ನು ನಿರ್ದೇಶಿಸುತ್ತಿರುತ್ತದೆ.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉತ್ಪಾದನೆಯ ಸಾಧನಗಳ ಮೇಲೆ ನಿಯಂತ್ರಣ ಸಾಧಿಸುವ ಔದ್ಯೋಗಿಕ-ಔದ್ಯಮಿಕ ಜಗತ್ತು ತಳಮಟ್ಟದವರೆಗೂ ಸಮಾಜದ ಬೇಕು ಬೇಡಗಳನ್ನು ನಿರ್ಧರಿಸಲೆಂದೇ ಸಂವಹನ ಮಾಧ್ಯಮಗಳನ್ನು, ತಂತ್ರಜ್ಞಾನಾಧಾರಿತ ಸಾಧನಗಳನ್ನೂ ಬಳಸಿಕೊಳ್ಳುತ್ತಿರುವುದನ್ನು ಡಿಜಿಟಲ್‌ ಯುಗದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ವರ್ತಮಾನ ಡಿಜಿಟಲ್‌ ಯುಗದಲ್ಲಿ ಸಾಮಾನ್ಯ ಮನುಷ್ಯನ ನಿತ್ಯಬದುಕಿನ ಅವಶ್ಯಕತೆಗಳನ್ನೂ ಸಹ ಅಮೆಜಾನ್‌ ನಂತಹ ಡಿಜಿಟಲ್‌ ಪ್ಲಾಟ್‌ಫಾರ್ಮಗಳು ನಿರ್ಧರಿಸುತ್ತವೆ. ಈ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ಸಾಮಾಜಿಕ ಮಾಧ್ಯಮಗಳನ್ನು, ಉದಾಹರಣೆಗೆ ಫೇಸ್‌ಬುಕ್‌, ಯು ಟ್ಯೂಬ್‌, ಟ್ವಿಟರ್-ಎಕ್ಸ್, ಮುಂತಾದವುಗಳನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆ ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತದೆ.

ಮರುವಸಾಹತೀಕರಣದ ಹಾದಿಯಲ್ಲಿ

ನವ ಉದಾರವಾದಿ ಬಂಡವಾಳ ವ್ಯವಸ್ಥೆಯು ಅಪೇಕ್ಷಿಸುವ ನವ ವಸಾಹತೀಕರಣ ಪ್ರಕ್ರಿಯೆಗೆ ಪೂರಕವಾಗಿ, ಭಾರತದಂತಹ ದೇಶಗಳಲ್ಲಿ ಔದ್ಯಮಿಕ ವಲಯವನ್ನು ವಿಸ್ತರಿಸಲು ಒಂದು ಕಾರ್ಪೋರೇಟ್‌ ಸ್ನೇಹಿ ಆಳ್ವಿಕೆ ಅತ್ಯವಶ್ಯವಾಗಿರುತ್ತದೆ. ಭಾರತದಲ್ಲಿ ನವ ಉದಾರವಾದ ಪ್ರವೇಶಿಸಿದ್ದಕ್ಕೂ, ಈಗ ಹೆಚ್ಚು ಗಾಢವಾಗಿರುವ ಆಪ್ತ ಬಂಡವಾಳಶಾಹಿ (Croney capitalism) ಬೇರುಗಳನ್ನು ವಿಸ್ತರಿಸಿದ್ದಕ್ಕೂ ಸೂಕ್ಷ್ಮ ಸಂಬಂಧಗಳಿರುವುದನ್ನು 1980ರ ದಶಕದ ಇಂದಿರಾ-ರಾಜೀವ್‌, ತದನಂತರದ ನರಸಿಂಹರಾವ್‌ ಸರ್ಕಾರಗಳ ಆರ್ಥಿಕ ಸುಧಾರಣಾ ನೀತಿಗಳಲ್ಲಿ ಗುರುತಿಸಬಹುದು. ಆ ನಂತರ ಕೇಂದ್ರ-ರಾಜ್ಯಗಳಲ್ಲಿ ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳೂ ಪಕ್ಷಾತೀತವಾಗಿ ಇದೇ ಆರ್ಥಿಕತೆಯನ್ನೇ ಪೋಷಿಸುತ್ತಾ ಬಂದಿವೆ. ಈ ಚುನಾವಣೆಗಳಲ್ಲೂ ಸಹ ಎಡಪಕ್ಷಗಳನ್ನು ಹೊರತುಪಡಿಸಿ, ಯಾವುದೇ ಬಂಡವಾಳಿಗ ಪಕ್ಷಗಳೂ ಸಹ ನವ ಉದಾರವಾದ-ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ವಿರುದ್ಧ ಸೊಲ್ಲೆತ್ತುತ್ತಿಲ್ಲ ಎಂಬುದು ಗಮನಿಸತಕ್ಕ ಅಂಶ.

ಕಳೆದ ಮೂರು ದಶಕಗಳ ಬಲಪಂಥೀಯ ರಾಜಕಾರಣ ಮತ್ತು ಆರ್ಥಿಕ ಸುಧಾರಣೆಗಳ ನಡುವಿನ ಸಂಬಂಧವನ್ನು ಗಮನಿಸಿದರೆ, ಪರಸ್ಪರ ಪೂರಕವಾದ ಬಲಿಷ್ಠ ಸರ್ಕಾರವೊಂದು ಆಳ್ವಿಕೆಯಲ್ಲಿರಬೇಕಾದ ಅವಶ್ಯಕತೆಯನ್ನೂ ಗುರುತಿಸಬಹುದು. 1980ರ ದಶಕದವರೆಗೂ ಭಾರತದಲ್ಲಿ ಪ್ರಚಲಿತವಾಗಿದ್ದ ಮೌಲ್ಯಾಧಾರಿತ ರಾಜಕಾರಣ ಈ ಮೂರು ದಶಕಗಳಲ್ಲಿ ಇತಿಹಾಸದ ತೊಟ್ಟಿಯ ಪಾಲಾಗಿದ್ದು, ಆಳ್ವಿಕೆಯ ಕೇಂದ್ರಗಳು ಹೆಚ್ಚು ಹೆಚ್ಚು ಅಪಾರದರ್ಶಕವಾಗುತ್ತಿರುವುದನ್ನೂ ಗಮನಿಸಬಹುದು. ಆಪ್ತ ಬಂಡವಾಳಶಾಹಿಯಲ್ಲಿ(Croney capitalism) ʼಆಪ್ತರುʼ ಅದಲುಬದಲಾಗುತ್ತಿದ್ದಾರೆಯೇ ಹೊರತು, ಮಾರುಕಟ್ಟೆ ಮೂಲತಃ ತನ್ನ ಸ್ವರೂಪವನ್ನು ಉಳಿಸಿಕೊಂಡೇ ಬಂದಿದೆ. ಔದ್ಯಮಿಕ ವಲಯ ಅಧಿಕಾರ ಕೇಂದ್ರಗಳಿಗೆ ಹತ್ತಿರವಾಗುತ್ತಾ, ದೇಶದ ಉತ್ಪಾದನೆಯ ಸಂಪನ್ಮೂಲಗಳನ್ನು, ಸಾಧನಗಳನ್ನು ಹಾಗೂ ಉತ್ಪಾದಿತ ಸರಕುಗಳ ಸಂಗ್ರಹ-ವಿತರಣೆಯನ್ನೂ ತನ್ನ ಸಾಮ್ರಾಜ್ಯದ ಒಂದು ಭಾಗವಾಗಿ ವಿಸ್ತರಿಸುತ್ತಾ ಬಂದಿರುವುದನ್ನು ಈ ಅವಧಿಯಲ್ಲಿ ಗುರುತಿಸಲು ಸಾಧ್ಯ.

ಪ್ರತಿಯೊಂದು ಚುನಾವಣೆಯಲ್ಲೂ ನಾವು ಸಾಮಾನ್ಯವಾಗಿ ಕಾಣುವ ʼ ಭ್ರಷ್ಟ ಅಭ್ಯರ್ಥಿಗಳು ʼ ಮೂಲತಃ ಈ ವ್ಯವಸ್ಥೆಯನ್ನು, ವಿವಿಧ ಬಂಡವಾಳಿಗ (Bourgeous) ಪಕ್ಷಗಳ ಬ್ಯಾನರ್‌ ಅಡಿ ಪ್ರತಿನಿಧಿಸುತ್ತಾರೆ. ಪ್ರಸ್ತುತ ಲೋಕಸಭಾ ಚುನಾವಣೆಗಳ ಮೊದಲ ಹಂತದಲ್ಲೇ 450 ಕೋಟ್ಯಧಿಪತಿಗಳು ಕಣದಲ್ಲಿರುವುದು ಇದನ್ನೇ ಸೂಚಿಸುತ್ತದೆ. ಈ ಅಭ್ಯರ್ಥಿಗಳು ಮತಗಳಿಕೆಗಾಗಿ ಸಾಮಾನ್ಯ ಜನತೆಗೆ ನೀಡುವ ಪ್ರತಿಯೊಂದು ನಯಾಪೈಸೆಯ ಮೂಲವನ್ನೂ ಔದ್ಯಮಿಕ ಬಂಡವಾಳದ ಕೂಪಗಳಲ್ಲಿ ಕಾಣಬಹುದು. ಮತದಾರರು ಇದಕ್ಕಾಗಿ “ ಬಾಯಿಬಿಟ್ಟು ಕುಳಿತಿರುತ್ತಾರೆ ” ಎನ್ನುವುದು ಅರ್ಧಸತ್ಯ. ಮಾರುಕಟ್ಟೆ ಆರ್ಥಿಕತೆಯೇ ಸೃಷ್ಟಿಸುವ ನಿರುದ್ಯೋಗ, ಬೆಲೆ ಏರಿಕೆ, ಬಡತನ ಮತ್ತು ಹಸಿವೆ, ಸಾಮಾಜಿಕ ಪಿರಮಿಡ್ಡಿನ ತಳದಲ್ಲಿರುವವರ ಕೊಳ್ಳುವ ಶಕ್ತಿಯನ್ನು ಕುಂಠಿತಗೊಳಿಸಿರುತ್ತದೆ. ಈ ಸ್ತರದಲ್ಲಿಯೇ ಅಭ್ಯರ್ಥಿಗಳು ಹಣ-ವಸ್ತು ಹಂಚುವ ಮೂಲಕ, ಮತಗಳಿಸಲು ಪ್ರಯತ್ನಿಸುತ್ತಾರೆ. ಹೀಗೆ ಹಣ ಪಡೆಯುವ ಮತದಾರರನ್ನು ಅವಿವೇಕಿಗಳು ಎನ್ನುವುದಾದರೆ, ಭ್ರಷ್ಟ ಮಾರುಕಟ್ಟೆಯನ್ನು ಪೋಷಿಸುವ ಕಲಿತವರು-ಬಲಿತವರು ಇನ್ನೂ ದೊಡ್ಡ ಅವಿವೇಕಿಗಳು, ಅಲ್ಲವೇ ?

ಡಿಜಿಟಲ್‌ ಮಾರುಕಟ್ಟೆ ಮತ್ತು ರಾಜಕೀಯ

ನವ ಉದಾರವಾದದ ನಾಲ್ಕನೆಯ ಹಂತದಲ್ಲಿರುವ ನವ ಭಾರತ ಡಿಜಿಟಲ್‌ ಯುಗವನ್ನು ಪ್ರವೇಶಿಸುತ್ತಿದ್ದು, ಬಂಡವಾಳಶಾಹಿಯ ರೂಪಾಂತರವಾಗಿ ತಂತ್ರಜ್ಞಾನ ಮಾರುಕಟ್ಟೆ ಮತ್ತು ಬಂಡವಾಳವು ದೇಶದ ಆರ್ಥಿಕತೆಯನ್ನು ನಿರ್ದೇಶಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಕ್ರಿಯೆಯನ್ನೇ ನಿಯಂತ್ರಿಸಲೆತ್ನಿಸುವ ಕಾರ್ಪೋರೇಟ್‌ ಬಂಡವಾಳ ಮತ್ತು ಔದ್ಯಮಿಕ ಹಿತಾಸಕ್ತಿಗಳು ನೇಪಥ್ಯದಲ್ಲಿ ನಿಂತು ರಾಜಕೀಯ ಫಲಾಕಾಂಕ್ಷಿಗಳನ್ನು ಸೃಷ್ಟಿಸುತ್ತವೆ. ಹಾಗಾಗಿಯೇ ಚುನಾವಣೆಗಳಲ್ಲಿ ಕೋಟ್ಯಂತರ ರೂಗಳ ಬಂಡವಾಳ ಅವ್ಯಾಹತವಾಗಿ, ಯಾವುದೇ ಕಾನೂನು ನಿರ್ಬಂಧಗಳಿಲ್ಲದೆ ಹರಿದಾಡುತ್ತದೆ. ಸಂಸತ್ತಿಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ ಗೆಲ್ಲಬೇಕಾದರೆ ಕನಿಷ್ಠ 50 ಕೋಟಿ ರೂ ಖರ್ಚಾಗುತ್ತದೆ ಎನ್ನುವುದು ಅನಧಿಕೃತವಾಗಿ ಸ್ವೀಕೃತವಾಗಿರುವ ವಿಚಾರ. ಒಂದು ಕೊಡು-ಕೊಳ್ಳುವಿಕೆಯ ಪ್ರಕ್ರಿಯೆಯಾಗಿ ರೂಪುಗೊಳ್ಳುವ ಅಧಿಕಾರ ರಾಜಕಾರಣದಲ್ಲಿ ಉದ್ಯಮಗಳು ರಾಜಕೀಯ ಆಶ್ರಯ ಪಡೆದರೆ, ರಾಜಕಾರಣವು ಉದ್ಯಮದ ಛಾಯೆಯಲ್ಲಿ ಮುನ್ನಡೆಯುತ್ತದೆ. ಚುನಾವಣಾ ಬಾಂಡ್‌ ಹಿಂದಿರುವ ವಹಿವಾಟುಗಳು ಇದನ್ನೇ ಬಿಂಬಿಸುತ್ತವೆ.

ರಾಜಕೀಯ ಎಂದರೆ ಅಂತಿಮವಾಗಿ ಅಧಿಕಾರ ಹಿಡಿಯುವುದೇ ಆಗಿರುವುದರಿಂದ, ಔದ್ಯಮಿಕ ಹಿತಾಸಕ್ತಿಗಳನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಅಭ್ಯರ್ಥಿಗಳು ತಮ್ಮದೇ ಆದ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಿನ ಸಾಂಸ್ಥಿಕ ಆವರಣಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಾರೆ. ವರ್ತಮಾನದ ರಾಜಕಾರಣದಲ್ಲಿ ಗಣಿಗಾರಿಕೆ, ರಿಯಲ್‌ ಎಸ್ಟೇಟ್‌, ಕನ್ವೆನ್‌ಷನ್‌ ಹಾಲ್‌, ಮದುವೆ ಛತ್ರಗಳು, ವೈದ್ಯಕೀಯ-ಇಂಜಿನಿಯರಿಂಗ್‌ ಕಾಲೇಜು, ಕಾರ್ಪೋರೇಟ್‌ ಆಸ್ಪತ್ರೆ, ಶಾಲಾ ಕಾಲೇಜುಗಳು, ಪೆಟ್ರೋಲ್‌ ಬಂಕ್‌,ಡೀಮ್ಡ್‌ ವಿಶ್ವವಿದ್ಯಾಲಯಗಳು ಹೀಗೆ ವಿವಿಧ ಔದ್ಯಮಿಕ ಮಾರ್ಗಗಳಲ್ಲಿ ವ್ಯಕ್ತಿಗತ ನೆಲೆಯಲ್ಲಿ ಅಥವಾ ಕೌಟುಂಬಿಕ ನೆಲೆಯಲ್ಲಿ ವ್ಯವಹಾರ ನಡೆಸುವ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ಇಲ್ಲಿ ಗಮನಿಸಬೇಕಿದೆ. ಈ ʼ ರಾಜಕೀಯೋದ್ಯಮಿಗಳೇ ʼ ಅಧಿಕಾರ ಕೇಂದ್ರಗಳನ್ನು ಆಕ್ರಮಿಸಲು, ತನ್ಮೂಲಕ ತಮ್ಮ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸಲು, ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಾರೆ. ಇಲ್ಲಿ ಉದ್ಯಮಿಗೆ ರಾಜಕೀಯ ಎನ್ನುವುದು ಸುರಕ್ಷಿತ ಆಶ್ರಯತಾಣವಾದಂತೆಯೇ (Safe haven) ಪ್ರತಿಯೊಂದು ಚುನಾವಣೆಯೂ ಚಿಮ್ಮುಹಲಗೆಯಾಗುತ್ತದೆ.

ಈ ಅಕ್ರಮ-ಭ್ರಷ್ಟ ಆಶ್ರಯತಾಣಗಳ ಮೇಲೆ ನಿಗಾವಹಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುತ್ತದೆ. ಚುನಾವಣಾ ಬಾಂಡ್‌ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ರಾಜಕೀಯ ದೇಣಿಗೆ ನೀಡುವ ಉದ್ಯಮಿಗಳಿಗೆ ವಾಮಮಾರ್ಗಗಳು ಲಭ್ಯವಿರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಮಟ್ಟಿಗೆ ಇದು ಉತ್ತಮ ಆಲೋಚನೆ. ಆದರೆ ಯಾವ ಉದ್ಯಮಿ ಯಾವ ಪಕ್ಷಕ್ಕೆ, ಯಾವ ಕಾರಣಗಳಿಗಾಗಿ, ಯಾವ ರೀತಿಯ ಲಾಭಗಳಿಸಲು, ಎಷ್ಟು ಗುತ್ತಿಗೆ ಪಡೆಯಲು ಎಷ್ಟು ದೇಣಿಗೆ ನೀಡುತ್ತಾನೆ ಎನ್ನುವುದು ಗೋಪ್ಯವಾಗಿಯೇ ಉಳಿಯುತ್ತಿತ್ತು. Thanks to Supreme Court ಈ ಯೋಜನೆಯನ್ನು ಅಸಾಂವಿಧಾನಿಕ ಎಂದು ಗುರುತಿಸಲಾಗಿದ್ದು, ಈಗ ದೇಣಿಗೆಯ ಹಿಂದಿನ ಫಲಾನುಭವಿ ಉದ್ಯಮಿಗಳು ಹಾಗೂ ಇದರ ಮೂಲಕ ತಮ್ಮ ಧನಭಂಡಾರವನ್ನು ಹೆಚ್ಚಿಸಿಕೊಳ್ಳುವ ರಾಜಕೀಯ ಪಕ್ಷಗಳು ಬಯಲಾಗುತ್ತಿದ್ದಾರೆ. ಈ ಯೋಜನೆಯಿಂದಾಚೆಗೂ ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹಲವು ವಿಧಾನಗಳನ್ನು ಮಾರುಕಟ್ಟೆಯೇ ರೂಪಿಸಿರುತ್ತದೆ. ಇದು ಅನಧಿಕೃತವಾಗಿ ಕಪ್ಪುಹಣವನ್ನು ಬಿಳಿಯಾಗಿಸುವ ಕುಲುಮೆಗಳನ್ನೂ ಸೃಷ್ಟಿಸುತ್ತದೆ. ಇದನ್ನು ನಿಗ್ರಹಿಸುವ ಅಧಿಕಾರ ಮತ್ತು ಜವಾಬ್ದಾರಿ ಚುನಾವಣಾ ಆಯೋಗದ್ದು.

ಭ್ರಷ್ಟತೆಯೆಂಬ ಆಲದ ಬಿಳಲುಗಳು

ಈ ರೀತಿಯಲ್ಲಿ ಅತ್ಯುನ್ನತ ಅಧಿಕಾರ ಕೇಂದ್ರಗಳಿಂದ ಗ್ರಾಮ/ಮಂಡಲ ಪಂಚಾಯತಿಯವರೆಗೂ ವಿಸ್ತರಿಸುವ ಬಂಡವಾಳದ ವಿಶಾಲ ಬಾಹುಗಳು, ತಳಮಟ್ಟದಿಂದಲೇ ರಾಜಕೀಯವನ್ನು ಪ್ರವೇಶಿಸುತ್ತವೆ. ಅಧಿಕಾರ ಕೇಂದ್ರಗಳಿಗೆ ನಿಕಟವಾಗಿರುವುದು, ಆಡಳಿತ ವ್ಯವಸ್ಥೆಯ ಸಾಂಸ್ಥಿಕ ನೆಲೆಗಳಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಅಧಿಕಾರಶಾಹಿಯ ಸಾಂಗತ್ಯವನ್ನು ಕಾಪಾಡಿಕೊಳ್ಳುವುದು ಯಾವುದೇ ಆಧುನಿಕ ಉದ್ಯಮಿಯ ತಂತ್ರಗಾರಿಕೆಯಾಗಿರುತ್ತದೆ. ಒಂದು ಸಣ್ಣ ಪಟ್ಟಣದಿಂದ ದೇಶದ ರಾಜಧಾನಿಯವರೆಗೂ ಈ ಸೂತ್ರ-ಸಂಬಂಧಗಳನ್ನು ವಿವಿಧ ಸ್ತರಗಳಲ್ಲಿ ಗುರುತಿಸಬಹುದು. ಈ ಸ್ತರಗಳಲ್ಲಿ ಕಾಲಕಾಲಕ್ಕೆ ನಡೆಯುವ ಪ್ರಜಾಸತ್ತಾತ್ಮಕ ಚುನಾವಣೆಗಳು ಔದ್ಯಮಿಕ ವಲಯದ ದೃಷ್ಟಿಯಿಂದ ಮಾರುಕಟ್ಟೆ ವಿಸ್ತರಣೆಯ ರಾಜಕೀಯ ಮಾರ್ಗವಾಗಿ ಪರಿಣಮಿಸುತ್ತವೆ. ಹಾಗಾಗಿಯೇ ಜಿಲ್ಲಾ ಪಂಚಾಯತ್‌, ಕಾರ್ಪೋರೇಷನ್‌, ಪುರಸಭೆ, ವಿಧಾನಸಭೆ, ಲೋಕಸಭೆ ಹೀಗೆ ವಿವಿಧ ಸ್ತರಗಳ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಔದ್ಯಮಿಕ ಹಿತಾಸಕ್ತಿಯ ನೆರಳಲ್ಲೇ ನಡೆಯುತ್ತದೆ. ಗೆಲ್ಲುವ ಕುದುರೆ ಎನ್ನುವುದಕ್ಕಿಂತಲೂ ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿರುವ ಅಭ್ಯರ್ಥಿಗಳು ಇಲ್ಲಿ ಫಲಾಕಾಂಕ್ಷಿಗಳೂ, ಫಲಾನುಭವಿಗಳೂ ಆಗಿಬಿಡುತ್ತಾರೆ. ಇಲ್ಲಿ ಪ್ರಾಮಾಣಿಕತೆ, ಪಕ್ಷನಿಷ್ಠೆ, ಸಂವಿಧಾನಬದ್ಧತೆ ಎಲ್ಲವೂ ಗೌಣವಾಗಿಬಿಡುತ್ತವೆ.

ಈ ಔದ್ಯಮಿಕ ರಾಜಕಾರಣ ಮತ್ತು ರಾಜಕೀಯ ಉದ್ಯಮದ ನಡುವೆ ವಿಜೃಂಭಿಸುವ , ವರ್ತಮಾನ ಭಾರತದಲ್ಲಿ ವಿಜೃಂಭಿಸಿ ಮೆರೆಯುತ್ತಿರುವ ಎಲ್ಲ ರೀತಿಯ ಸುಳ್ಳುಗಳಿಗೂ ಇದೇ ಔದ್ಯಮಿಕ ಸಾಮ್ರಾಜ್ಯದ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಅತ್ಯುತ್ತಮ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಆಳ್ವಿಕೆಯ ಅಭಿರುಚಿಗೆ ವ್ಯತಿರಿಕ್ತವಾದ ಸಾಮಾಜಿಕ ತಾಣಗಳು, ಸಂವಹನ ಮಾಧ್ಯಮಗಳು ಸಹಜವಾಗಿಯೇ ಮಾರುಕಟ್ಟೆಯಲ್ಲಿ ಸೋತುಹೋಗುತ್ತವೆ. ಅಥವಾ ಈಗಾಗಲೇ ಮಾರುಕಟ್ಟೆಯಲ್ಲಿ ಬಲಿಷ್ಠವಾಗಿರುವ ಔದ್ಯಮಿಕ ಸಾಮ್ರಾಜ್ಯವೊಂದು ಇಂತಹ ಸಣ್ಣಪುಟ್ಟ ಯು ಟ್ಯೂಬ್‌ಗಳನ್ನೂ ಸಹ ಆಪೋಷನ ತೆಗೆದುಕೊಳ್ಳುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಮಾಧ್ಯಮ ಲೋಕದಲ್ಲಿ ಹೀಗೆ ಕಾರ್ಪೋರೇಟ್‌ ಮಾರುಕಟ್ಟೆಯ ವಶವಾಗಿರುವ ನೂರಾರು ಸುದ್ದಿವಾಹಿನಿಗಳನ್ನು ಗುರುತಿಸಬಹುದು. ಎನ್‌ಡಿಟಿವಿ ಇತ್ತೀಚಿನ ನಿದರ್ಶನ. ಈ ಸಿಕ್ಕುಗಳಿಗೆ ಸಿಲುಕಲು ಇಚ್ಚಿಸದ ಮಾಧ್ಯಮಗಳನ್ನು ಮಾರುಕಟ್ಟೆಯೇ ಮೂಲೆಗುಂಪುಮಾಡುತ್ತದೆ. ಟಿಆರ್‌ಪಿ ಎಂಬ ಅಸ್ತ್ರ ಇರುವುದೇ ಈ ಉದ್ದೇಶಕ್ಕಾಗಿ.

ನಾಗರಿಕರ ಜವಾಬ್ದಾರಿ

ಈ ಸನ್ನಿವೇಶದಲ್ಲೇ ಪ್ರಜ್ಞಾವಂತ ನಾಗರಿಕರು ಚುನಾವಣಾ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಈ ಭ್ರಷ್ಟತೆಯ ಬೇರುಗಳು ಆಳಕ್ಕೆ ಇಳಿದಷ್ಟೂ ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗುತ್ತಾ ಹೋಗುತ್ತವೆ ಎಂಬ ಆತಂಕ ಈ ದೇಶದ ಒಂದು ವರ್ಗದ ಜನರನ್ನಾದರೂ ಕಾಡುತ್ತಲೇ ಇದೆ. ಈ ವಿಷಮ ಸನ್ನಿವೇಶದಲ್ಲೂ ಸಹ ಪ್ರಾಮಾಣಿಕ ಪತ್ರಿಕಾಧರ್ಮ ಎಂಬ ಒಂದು ಉದಾತ್ತ ಚಿಂತನೆಗೆ ನವ ಭಾರತದಲ್ಲಿ ಅವಕಾಶ ಇರುವುದು ಸಮಾಧಾನಕರ ಅಂಶ. ಈ ಪತ್ರಿಕಾಧರ್ಮವನ್ನು ವಿಸ್ತರಿಸುವ ಕೆಲಸವನ್ನು ಕೆಲವು ಮಾಧ್ಯಮಗಳಾದರೂ ಮಾಡುತ್ತಿವೆ, ಮಾಡಬೇಕಿದೆ. ಪ್ರಜಾಪ್ರಭುತ್ವದ ಕಾಳಜಿಯೇ ಪ್ರಶ್ನಾರ್ಹವಾಗುತ್ತಿರುವ ಸಂದರ್ಭದಲ್ಲಿ ಭಾರತ ಮತ್ತೊಂದು ಚುನಾವಣೆಯನ್ನು ಎದುರಿಸುತ್ತಿದೆ. ಸಾಂಸ್ಥಿಕ ನೆಲೆಯಲ್ಲಿ ಲಭ್ಯವಿರುವ ಚಿಕಿತ್ಸಕ ಮಾದರಿಗಳು ಭಾರತದ ಪ್ರಜಾಪ್ರಭತ್ವದಲ್ಲಿ ಇನ್ನೂ ಉಸಿರಾಡುತ್ತಿರುವುದು ಆಶಾದಾಯಕ.

ಅಂತಿಮವಾಗಿ ಪ್ರಜಾಪ್ರಭುತ್ವ ಎನ್ನುವುದೇ ಪ್ರಜೆಗಳ ಆಳ್ವಿಕೆಯ ಒಂದು ನೆಲೆ. ಇಲ್ಲಿ ಕಟ್ಟಕಡೆಯ ವ್ಯಕ್ತಿಯೂ ತನ್ನದೇ ಆದ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಅವಕಾಶಗಳನ್ನು ಹೊಂದಿರುವುದು ಸಹಜ. ಈ ಜವಾಬ್ದಾರಿಯನ್ನು ಮರೆತವರಿಗೆ ನೆನಪಿಸುವುದು, ನಿರ್ಲಕ್ಷಿಸಿದವರನ್ನು ಬಡಿದೆಬ್ಬಿಸುವುದು, ಅಲ್ಲಗಳೆಯುವರಿಗೆ ಬುದ್ಧಿ ಹೇಳುವುದು, ನಿರಾಕರಿಸಿದವರಿಗೆ ಹಾದಿ ತೋರಿಸುವುದು ಮಾಧ್ಯಮದ ಬಹುದೊಡ್ಡ ಜವಾಬ್ದಾರಿ. ಕಾರ್ಪೋರೇಟ್‌ ನಿಯಂತ್ರಿತ ಮಾಧ್ಯಮಗಳು ಈ ಜವಾಬ್ದಾರಿಯನ್ನು ಹೊರುವುದಿಲ್ಲ. ಸ್ವತಂತ್ರ-ಸ್ವಾಯತ್ತ ಮಾಧ್ಯಮಗಳು ಹೊರಬೇಕಿದೆ. ಈ ಜವಾಬ್ದಾರಿಯನ್ನು ಅರಿತೇ ರಾಜಕೀಯ-ಚುನಾವಣಾ ಭ್ರಷ್ಟಾಚಾರ, ಭ್ರಷ್ಟ ರಾಜಕಾರಣ ಹಾಗೂ ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳದ ಸೂತ್ರಗಳನ್ನು ಭೇದಿಸಬೇಕಿದೆ. ಇದು ಪ್ರಜ್ಞಾವಂತ, ಜವಾಬ್ದಾರಿಯುತ ನಾಗರಿಕರ ಆದ್ಯತೆಯಾಗಬೇಕಿದೆ.
-೦-೦-೦-

Tags: Congress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಈ ಜಿಲ್ಲೆಗಳಿಗೆ ಎಚ್ಚರಿಕೆ; ವ್ಯಾಪಕ ಮಳೆಯಾಗುವ ಮುನ್ಸೂಚನೆ

Next Post

ರೇವಣ್ಣಗೆ ಜೈಲಾ ಅಥವಾ ಬೇಲಾ ?! ಕಿಡ್ನಾಪ್ ಕೇಸ್‌ನಲ್ಲಿ ರಿಲೀಫ್ ಸಿಗುತ್ತಾ ?!

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
3 ದಿನದಿಂದ ಕಣ್ಮರೆಯಾಗಿದ್ದ ರೇವಣ್ಣ ಇಂದು ಅರೆಸ್ಟ್ ! ದೇವೇಗೌಡರ ನಿವಾಸದಲ್ಲೇ ಬಂಧಿಸಿದ ಎಸ್.ಐ.ಟಿ ಟೀಮ್ ! 

ರೇವಣ್ಣಗೆ ಜೈಲಾ ಅಥವಾ ಬೇಲಾ ?! ಕಿಡ್ನಾಪ್ ಕೇಸ್‌ನಲ್ಲಿ ರಿಲೀಫ್ ಸಿಗುತ್ತಾ ?!

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada