ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ಚುನಾವಣಾ ಎದುರಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಬಿಜೆಪಿ ಚುನಾವಣಾ ಕಾರ್ಯಗಳನ್ನು ಶುರು ಮಾಡಿದೆ. ಈಗಾಗಲೇ ಕಾಂಗ್ರೆಸ್ ಹಾಗು ಜೆಡಿಎಸ್ ವಿರುದ್ಧ ಬಿಜೆಪಿ ಆರೋಪಗಳ ಸುರಿ ಮಳೆಯನ್ನೇ ಸುರಿಸುತ್ತಿದೆ. ಅಷ್ಟೇಋ ಅಲ್ಲದೆ ಸ್ವತಃ ಬಿಜೆಪಿ ಚಾಣಕ್ಯ ಅಮಿತ್ ಷಾ, ರಾಜ್ಯದಲ್ಲಿ ಚುನಾವಣಾ ಱಲಿಗಳನ್ನು ಆರಂಭ ಮಾಡಿದ್ದಾರೆ. ಕೇಂದ್ರದಿಂದ ಸ್ಪಷ್ಟ ಮಾಹಿತಿ ರಾಜ್ಯ ಸರ್ಕಾರಕ್ಕೆ ಬಂದಿತ್ತು. ಈ ತಿಂಗಳ ಮಧ್ಯಾಂತರದಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿದ್ದು, ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಂದೇಶ ಬಂದಿದೆ ಎನ್ನಲಾಗಿದೆ. ಶೀಘ್ರದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಕ್ಯಾಬಿನೆಟ್ ವಿಸ್ತರಣೆಯನ್ನು ತಡೆ ಹಿಡಿಯಲಾಗಿದೆ.
ಈಶ್ವರಪ್ಪ, ಜಾರಕಿಹೊಳಿ, ಯೋಗೇಶ್ವರ್ಗೆ ಕಹಿ..!
ಬೆಳಗಾವಿಯ ವಿಧಾನಸಭಾ ಅಧಿವೇಶನ ಆರಂಭ ಆಗ್ತಿದ್ದ ಹಾಗೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅನ್ನೋ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಅಧಿವೇಶನ ಬಹಿಷ್ಕಾರ ಹಾಕಿದ್ರು. ಜೊತೆಗೆ ಮತ್ತೋರ್ವ ಅತೃಪ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಬೆಂಗಳೂರಿಗೆ ಬಂದಿದ್ದ ಕೆ.ಎಸ್ ಈಶ್ವರಪ್ಪ, ಸ್ವಪಕ್ಷದ ವಿರುದ್ಧವೇ ಸುದ್ಧಿಗೋಷ್ಠಿ ಹಮ್ಮಿಕೊಂಡಿದ್ದರು. ಆದರೆ ಮಧ್ಯದಲ್ಲಿ ಈಶ್ವರಪ್ಪ ಹಾಗು ರಮೇಶ್ ಜಾರಕಿಹೊಳಿಗೆ ಕರೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದ್ರು. ಆದಷ್ಟು ಬೇಗ ದೆಹಲಿಗೆ ಭೇಟಿ ಕೊಟ್ಟು ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದು ಹಿರಿಯ ನಾಯಕರನ್ನ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ದೆಹಲಿ ಬೇಟಿ ಬೇರೆಯದ್ದೇ ಸಂದೇಶ ಕೊಟ್ಟು ವಾಪಸ್ ಕಳುಹಿಸಿದೆ.
ಅಧಿವೇಶನದ ನಡುವೆ ದಿಢೀರ್ ದಿಲ್ಲಿ ಭೇಟಿ, ಚುನಾವಣಾ ಸಂದೇಶ..!
ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ವಿಧೇಯಕದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಧ್ಯದಲ್ಲೇ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗರಂ ಕೂಡ ಆಗಿದ್ದರು. ಎಸ್ಸಿ ಎಸ್ಟಿ ವಿಧೇಯಕ ಚರ್ಚೆ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಇಲ್ಲದಿದ್ದರೆ ಸರಿಯಲ್ಲ ಎನ್ನುವ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಸ್ಪೀಕರ್ ಅವರ ಒಪ್ಪಿಗೆ ಪಡೆದೇ ದೆಹಲಿ ಪಗ್ರವಾಸ ಕೈಗೊಂಡಿದ್ದರು ಎನ್ನುವುದು ಗೊತ್ತಾಯ್ತು. ದೆಹಲಿ ಭೇಟಿ ನೀಡಿದ್ದು ಯಾಕೆ..? ಯಾರನ್ನು ಭೇಟಿಯಾದರು..? ದೆಹಲಿ ಭೇಟಿ ಸಂದರ್ಭದಲ್ಲಿ ಭೇಟಿ ಮಾಡಿದ್ದು ಯಾರನ್ನು..? ಯಾಕೆ..? ಅಷ್ಟೊಂದು ಆತುರಾತುರವಾಗಿ ದೆಹಲಿಗೆ ಭೇಟಿ ನೀಡಿದ್ದು ಯಾಕೆ..? ಎನ್ನುವ ಪ್ರಶ್ನೆ ಎದುರಾದಾಗ ಸಿಗುವ ಉತ್ತರ ಅವಧಿಪೂರ್ವ ಚುನಾವಣೆ. ಮೇ ಅಂತ್ಯಕ್ಕೆ ಚುನಾವಣಾ ಫಲಿತಾಂಶ ಬರಬೇಕಿತ್ತು. ಆದರೆ ಏಪ್ರಿಲ್ನಲ್ಲೇ ಚುನಾವಣಾ ಪ್ರಕ್ರಿಯೆ ಮುಗಿಯುವ ಮಾಹಿತಿ ಸಿಗುತ್ತಿದೆ.
ಬಿಜೆಪಿ ಹೈಕಮಾಂಡ್ ನಿರ್ಧಾರದ ಹಿಂದಿನ ರಹಸ್ಯವೇನು..?
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಆದರೂ ಮುಂದಿನ 5 ತಿಂಗಳುಗಳ ಕಾಲ ಚುನಾವಣೆಗೆ ಕಾಲಾವಕಾಶ ನೀಡಿದರೆ ವಿರೋಧ ಪಕ್ಷಗಳು ಮತ್ತಷ್ಟು ಆಡಳಿತ ವಿರೋಧಿ ಅಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಬಿಜೆಪಿ ಸರ್ಕಾರ ಸಮಯ ಕೊಟ್ಟಷ್ಟು ಮತ್ತಷ್ಟು ಕೆಳಕ್ಕೆ ಕುಸಿಯುವ ಸಾಧ್ಯತೆಗಳೇ ಹೆಚ್ಚಿರುವ ಕಾರಣಕ್ಕೆ ಚುನಾವಣೇ ಘೋಷಚಣೆ ಮಾಡುವುದೇ ಉತ್ತಮ ಎನ್ನುವ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಇದೇ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕದೆ ನೇರವಾಗಿ ಚುನಾವಣೆ ಹೋಗುವಂತೆ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾರ್ಗದರ್ಶನ ಕೊಟ್ಟಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಆದರೆ ಮತ್ತಷ್ಟು ಬಿರುಕುಗಳು ಉಂಟಾಗುವ ಸಾಧ್ಯತೆಗಳಿದ್ದು, ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಹೆಚ್ಚು ಮಾಡಿಕೊಳ್ಳುವ ಬದಲು, ಇರುವ ಸಮಯದಲ್ಲೇ ಆದಷ್ಟು ಶ್ರಮ ಹಾಕಿ ಹೆಚ್ಚು ಸ್ಥಾನ ಗೆಲ್ಲುವುದು ಬಿಜೆಪಿ ಲೆಕ್ಕಾಚಾರ.
ಕೃಷ್ಣಮಣಿ