ವಾರಕೆ ಒಮ್ಮೆಯಾದರೂ ತ್ವಚೆಗೆ ಮೊಟ್ಟೆಯ ಬಿಳಿಯ ಭಾಗವನ್ನು ಹಚ್ಚಿ ೨೦ ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡುವುದರಿಂದ ತ್ವಚೆಗೆ ಸಾಕಷ್ಟು ಪ್ರಯೋಜನಗಳಿವೆ.

ಚರ್ಮವನ್ನು ಬಿಗಿಗೊಳಿಸುತ್ತದೆ
ಮೊಟ್ಟೆಯ ಬಿಳಿಭಾಗವು ಪ್ರೋಟೀನ್ ಮತ್ತು ಕಾಲಜನ್ ಅನ್ನು ಹೊಂದಿರುತ್ತದೆ, ಇದು ಚರ್ಮವನ್ನು ಬಿಗಿಗೊಳಿಸಲು ಮುಖ್ಯವಾಗಿ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಪೋರ್ಸ್ ನ್ನು ಕಡಿಮೆ ಮಾಡುತ್ತದೆ
ಮೊಟ್ಟೆಯ ಬಿಳಿಭಾಗದ ಒಂದಿಷ್ಟು ಗುಣಗಳು ಪೋರ್ಸ್ ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಚರ್ಮವನ್ನು ಮೃದುಗೊಳಿಸುತ್ತದೆ.

ಮೊಡವೆ ಕಲೆಗಳನ್ನು ಶಮನಗೊಳಿಸುತ್ತದೆ
ಮೊಟ್ಟೆಯ ಬಿಳಿಭಾಗವು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ ಮತ್ತು ಮೊಡವೆ ಕಲೆಗಳನ್ನು ಮರೆಮಾಚಲು ಸಹಾಯ ಮಾಡುವ ಅಂಶ ಹೊಂದಿರುತ್ತದೆ.
ಚರ್ಮವನ್ನು ಹೈಡ್ರೇಟ್ ಮಾಡುತ್ತದೆ
ಮೊಟ್ಟೆಯ ಬಿಳಿಭಾಗವು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದ್ದು ಅದು ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ.