ಮುಡಾದಲ್ಲಿ (MUDA) ಅಕ್ರಮ ನಿವೇಶನ ಹಂಚಿಕೆ ಕೇಸ್ ನಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದ RTI ಕಾರ್ಯಕರ್ತ ಗಂಗರಾಜುಗೆ (Gangaraju) ವಿಚಾರಣೆಗೆ ಹಾಜರಾಗುವಂತೆ ED ನೋಟಿಸ್ ನೀಡಿದೆ.

ಈ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳ ಸಮೇತ ಇಂದು ಬೆಂಗಳೂರಿನ ED ಕಚೇರಿಗೆ ಬರಲು ಸೂಚಿಸಿದೆ. ಆದರೆ ಯಾವ ವಿಚಾರಕ್ಕೆ ನೋಟಿಸ್ ನೀಡಲಾಗಿದೆ ಎಂಬುದರ ಬಗ್ಗೆ ED ಮಾಹಿತಿ ನೀಡಿಲ್ಲ.
ಮುಡಾ ಹಿನಕಲ್ ನಿವೇಶನ ಹಂಚಿಕೆ ಅಕ್ರಮ ಸೇರಿ ಹಲವು ದೂರು ನೀಡಿದ್ದೆ. ಹೀಗಾಗಿ ED ಸಮನ್ಸ್ ನೀಡಿರಬಹುದು. ಲೋಕಾಯುಕ್ತ (Lokayukta) ಅಧಿಕಾರಿಗಳ ತನಿಖೆ ಬಹಳ ಸೀಮಿತವಾಗಿದೆ. EDಯಿಂದ ಮಾತ್ರ ಈ ಹಗರಣದ ಸಂಪೂರ್ಣ ತನಿಖೆ ಸಾಧ್ಯ. ಎಲ್ಲಾ ದಾಖಲೆ ಕೊಡುತ್ತೇನೆ ಎಂದು ಗಂಗರಾಜು ಹೇಳಿದ್ದಾರೆ.