ಜಾರಿ ನಿರ್ದೇಶನಾಲಯವು ನಿನ್ನೆ ಹೆರಾಲ್ಡ್ ಹೌಸ್ನ ಒಂದು ಭಾಗಕ್ಕೆ ಬೀಗಮುದ್ರೆ ಹಾಕಿದ ಬೆನ್ನಲ್ಲೇ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಕರ್ನಾಟಕ ಮೂಲದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಅವರಿಗೂ ಸಮನ್ಸ್ ಜಾರಿ ಮಾಡಿದೆ.
‘ಯಂಗ್ ಇಂಡಿಯನ್’ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಹಾಜರಿರುವಂತೆ ಸಮನ್ಸ್ ಜಾರಿ ಮಾಡಿದೆ. ‘ನ್ಯಾಷನಲ್ ಹೆರಾಲ್ಡ್’ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿತು.
ಈ ಕಂಪನಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ನಿರ್ವಹಿಸುತ್ತಿದ್ದಾರೆ. ಹೆರಾಲ್ಡ್ ಹೌಸ್ನ 4ನೇ ಮಹಡಿಯಲ್ಲಿ ‘ಯಂಗ್ ಇಂಡಿಯನ್’ ಪ್ರಕಾಶನ ಸಂಸ್ಥೆಯ ಕಚೇರಿ ಇದೆ.
ಮೋಸದ ವಹಿವಾಟಿನಿಂದ ಯಂಗ್ ಇಂಡಿಯನ್ ಈ ಆಸ್ತಿಯನ್ನು ಸಂಪಾದಿಸಿದೆ ಎಂದು ಶಂಕೆ ವ್ಯಕ್ತಪಡಿಸಿರುವ ED, ಪ್ರತಿ ವಹಿವಾಟನ್ನೂ ಪರಿಶೀಲಿಸಿದೆ.. ಶೋಧ ಕಾರ್ಯಾಚರಣೆ ಮುಂದುವರಿಸುವ ನಿಟ್ಟಿನಲ್ಲಿ ‘ಯಂಗ್ ಇಂಡಿಯನ್’ ಸಂಸ್ಥೆಯ ಪದಾಧಿಕಾರಿ ಮಲ್ಲಿಕಾರ್ಜು ಖರ್ಗೆ ಅವರಿಗೆ ಸಮನ್ಸ್ ನೀಡಲಾಗಿದೆ.