ನ್ಯಾಷನಲ್ ಹೆರಾಲ್ಡ್ ಹಗರನಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೀನಿಯಾ ಗಾಂಧಿ ಹಾಗು ಸಂಸದ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಕಯದ(ED) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು ಇದು ಸೇಡಿನ ರಾಜಕೀಯ ಎಂದು ಕಿಡಿಕಾರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಾಗಿ ನೋಡಿಸ್ ನೀಡುತ್ತದೆ ಇದು ನನ್ನಗೆ ವಿಚಿತ್ರ ಎನ್ನಿಸುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಯಾವುದೇ ಹಣವಿಲ್ಲದ ವಿಚಿತ್ರ ಹಣ ವರ್ಗಾವರಣೆಯ ಪ್ರಕರಣವಾಗಿದೆ. ಇದೊಂದು ಟೊಳ್ಳು ಪ್ರಕರಣ ನಾವು ಇದನ್ನು ಎದುರಿಸುತ್ತೇವೆ ಇದು ಬಿಜೆಪಿ ನಡೆಸುತ್ತಿರುವ ಸೇಡಿನ ರಾಜಕೀಯದ ಒಂದು ಭಾಗ ಎಂದು ಆರೋಪಿಸಿದ್ದಾರೆ.
ಸೋನಿಯಾ ಗಾಂಧಿರನ್ನು ಜೂನ್ 8ರ ಒಳಗಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ರಾಹುಲ್ ಗಾಂಧಿ ಹೊರದೇಸಕ್ಕೆ ಹೋಗಿರುವ ಕಾರಣ ಸ್ವಲ್ಪ ಕಾಲಾವಕಾಶ ನೀಡಬಹುದು ಎಂದು ಹೇಳಿದ್ದಾರೆ.
ಮುಂದುವರೆದು, ನಮ್ಮ ನಾಯಕರುಗಳು ಧೈರ್ಯವಾಗಿ ವಿಚಾರಣೆಗೆ ಹಾಜರಾಗುತ್ತಾರೆ ಹೆದರಿಕೊಂಡು ಓಡಿ ಹೋಗುವ ಜಾಯಮಾನ ನಮ್ಮದಲ್ಲ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಕಾರ್ತಿ ಚಿದಂಬರಂ ರಾಜಖೀಯವಾಗಿ ಪ್ರತಿಪಕ್ಷಗಳಿಗೆ ಯಾವ ರೀತಿ ಕಿರುಕುಳ ನೀಡಬೇಕೋ ಗೆಸ್ಟಾಪೋ ಅದನ್ನು ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.












