Mysore :ಇಂದು ಇಡಿ (ED) ಕಚೇರಿಗೆ ಮುಡಾ ಪ್ರಕರಣದ ಆರೋಪಿ ದೇವರಾಜ್ ಆಗಮಿಸಿದ್ದಾರೆ. ಕಳೆದ ವಾರ ಅಕ್ಟೋಬರ್ 19ರಂದು ದೇವರಾಜ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಈ ದಾಳಿಯ ವೇಳೆ ಕೆಸರೆ ಗ್ರಾಮದ ಜಮೀನಿನ ದಾಖಲೆಗಳ ಬಗ್ಗೆ ದೇವರಾಜ್ ಮನೆಯಲ್ಲಿ ತಡರಾತ್ರಿವರೆಗೂ ತಲಾಶ್ ಮಾಡಲಾಗಿತ್ತು. ಆ ವೇಳೆ ಮನೆಯಲ್ಲಿ ಕೆಲವು ದಾಖಲೆಗಳು ಸಿಕ್ಕಿವೆ ಅಂತ ಹೇಳಲಾಗಿತ್ತು.
ಸಿಎಂ ಸಿದ್ದರಾಮಯ್ಯ (Cm siddaramaiah) ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ (MUDA)ಲೋಕಾಯುಕ್ತದಲ್ಲಿ ದಾಖಲಾದ ಎಫ್.ಐ.ಆರ್ (FIR) ನಾಲ್ಕನೇ ಆರೋಪಿ ದೇವರಾಜ್ ಜಾಮೀನು ಮಾರಾಟ ಮಾಡಿದ್ದರು.ಹೀಗಾಗಿ ದೇವರಾಜ್ ಗೆ ಇವತ್ತು ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿತ್ತು. ಇ.ಡಿ ನೋಟಿಸ್ ಹಿನ್ನೆಲೆ ಇವತ್ತು ವಿಚಾರಣೆ ಆಗಮಿಸಿದ್ದಾರೆ. ಆದರೆ ವಿಚಾರಣೆ ಮಾಡಬೇಕಿದ್ದ ಅಧಿಕಾರಿ ಇನ್ನೂ ಕಚೇರಿಗೆ ಬಂದಿಲ್ಲ.
ಇದರ ಜೊತೆಗೆ ವಿಚಾರಣೆಗೆ ಗಂಗಾರಾಜು ಸೇರಿ ಮೂರು ಜನ ಆಮಗಿಸಿದ್ದು, ಸದ್ಯ ಮೂವರ ವಿಚಾರಣೆ ಮಾಡಬೇಕಿದ್ದ ಅಧಿಕಾರಿ ಇನ್ನು ಕಚೇರಿಗೆ ಬಂದಿಲ್ಲ. Bangalore
ಹೀಗಾಗಿ ಇಡಿ ಅಧಿಕಾರಿಗಾಗಿ ಮೂವರು ಕಾದು ಕುಳಿತಿದ್ದಾರೆ.ಇದೇ ವೇಳೆ ದೇವರಾಜ್ ಹಾಗೂ ಮೈಸೂರು ಮುಡಾ ವಿಶೇಷ ತಹಶೀಲ್ದಾರ್ ರಾಜಶೇಖರ್ ಕೂಡ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.