• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆರ್ಥಿಕ ಸಮೀಕ್ಷೆ: ಅಂಕಿಅಂಶ ಹೇಳುವುದೊಂದು, ವಿಶ್ಲೇಷಣೆಯ ಚಿತ್ರಣ ಮತ್ತೊಂದು!

ಕೆ.ಪಿ ಸುರೇಶ್‌ ಕಂಜರ್ಪಣೆ by ಕೆ.ಪಿ ಸುರೇಶ್‌ ಕಂಜರ್ಪಣೆ
January 31, 2022
in ದೇಶ
0
ಆರ್ಥಿಕ ಸಮೀಕ್ಷೆ: ಅಂಕಿಅಂಶ ಹೇಳುವುದೊಂದು, ವಿಶ್ಲೇಷಣೆಯ ಚಿತ್ರಣ ಮತ್ತೊಂದು!
Share on WhatsAppShare on FacebookShare on Telegram

ನಾಳೆಯ ಬಜೆಟ್ಟಿನಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದು ಒಂದು ಊಹೆಯ ಜೂಜು ಎಂದು ಅನ್ನಿಸುವುದು ಈ ಬಾರಿಯ ಆರ್ಥಿಕ ಸರ್ವೇ ನೋಡಿದಾಗ.  ಕೃಷಿಯಂಥಾ ಕ್ಷೇತ್ರದ ರೋಗನಿದಾನ (ಡಯಾಗ್ನೋಸ್ಟಿಕ್‌) ವರದಿ ಇಲ್ಲಿದೆ.

ADVERTISEMENT

 ಈ ವರದಿ ಈ ಬಾರಿ ಮುಖ್ಯ ಆರ್ಥಿಕ ಸಲಹೆಗಾರರಿಲ್ಲದೇ ಸರಕಾರದ  ಖಾಯಂ ಆರ್ಥಿಕ ಸಮಿತಿಯ ಮೂಲಕ ಸಾದರ ಪಡಿಸಲಾಗಿದೆ. ಆದ್ದರಿಂದಲೇ ಈ ಹಿಂದಿನ ವರದಿಗಳಲ್ಲಿದ್ದ ಸ್ವಾಯತ್ತ ವಿಶ್ಲೇಷಣೆಯ ಛಾಯೆ ಇದರಲ್ಲಿಲ್ಲ. ಸರಕಾರದ  ಘೋಷಣೆಗಳು – ಸಮರ್ಥನೆಗಳನ್ನು ಹಾಗೆ ಹಾಗೆಯೇ ಈ ಸರ್ವೇ ಬಳಸಿಕೊಂಡು ಒಂದು ರೋಸೀ ಪಿಕ್ಷರ್‌ ನ್ನು ಕೊಡಲು ನೋಡಿದೆ. ಆದರೆ  ಈ ಸರ್ವೇಯರುಗಳ ದುರಾದೃಷ್ಟಕ್ಕೆ ಅವರಲ್ಲಿರುವ ಅಂಕಿ-ಅಂಶಗಳು ಚಿತ್ರಗಳು ಬೇರೆಯೇ ಚಿತ್ರ ನೀಡುತ್ತಿವೆ. ಇದು ಒಂದರ್ಥದಲ್ಲಿ ಡಯಾಗ್ನೋಸ್ಟಿಕ್‌ ರಿಪೋರ್ಟ್‌ ರೋಗಿಯ ಸ್ಥಿತಿ ಗಂಭೀರ ಎಂದು ಹೇಳುತ್ತಿದ್ದಾಗ ವೈದ್ಯನೊಬ್ಬ ಪರವಾಗಿಲ್ಲ ನೋ ಪ್ರಾಬ್ಲೆಂ ಎಂದು ಹುಸಿ ಭರವಸೆ ನೀಡಿದಂತಿದೆ.

 ಆಹಾರ ಉತ್ಪಾದನೆಯ ವಿವರ ನೋಡಿ: ಭತ್ತ ಗೋಧಿ ಬಿಟ್ಟರೆ ಉಳಿದ  ಧಾನ್ಯಗಳು ( ಸಿರಿಧಾನ್ಯ, ಜೋಳ ಇತ್ಯಾದಿ) ಉತ್ಪಾದನೆ ಗಮನಾರ್ಹ ಹೆಚ್ಚಳವಾಗಿಯೇ ಇಲ್ಲ. ನೆನಪಿಡಿ, ಇವೆಲ್ಲ ಬಹುತೇಕ ಮಳೆ ಆಶ್ರಿತ ಪ್ರದೇಶದ ಬೆಳೆಗಳು . ಅದೇ ರೀತಿ ಕಾಳುಗಳು, ಎಣ್ಣೆ ಬೀಜ ಮತ್ತು ಹತ್ತಿ ಉತ್ಪಾದನೆಯಲ್ಲಿ ಬಹುತೇಕ ಸ್ಥಾಗಿತ್ಯ ಕಂಡು ಬರುತ್ತದೆ.

ಇದು ದಟ್ಟವಾಗಿ ಕಾಣಿಸುವುದು  ಖಾದ್ಯ ತೈಲ ಕ್ಷೇತ್ರದಲ್ಲಿ.  ಮೋದಿ ಪದಗ್ರಹಣ ಕಾಲಕ್ಕಿಂತ ಹಿಂದಿನ ವರ್ಷ  ಇದ್ದ  ಎಣ್ಣೆ ಕಾಳು ಉತ್ಪಾದನೆಯ  ಶೇ. ೧೦ರಷ್ಟು ಮಾತ್ರಾ ಹೆಚ್ಚುವರಿ ಉತ್ಪಾದನೆ ಕಳೆದ ಏಳು ವರ್ಷಗಳಲ್ಲಾಗಿದೆ.  ಆದರೆ  ಖಾದ್ಯ ತೈಲದ ಆಮದು ಶೇ. ೨೦ರಷ್ಟು ಹೆಚ್ಚಾಗಿದೆ.

ಇದು ಇನ್ನಷ್ಟು ಢಾಳಾಗಿ ಕಾಣಿಸುವುದು ತಾಳೆ ಎಣ್ಣೆಯ ಆಮದಿನಲ್ಲಿ. ವರ್ಷಕ್ಕೆ ೮೮ ಲಕ್ಷ ಟನ್ನಿನಷ್ಟು ತಾಳೆ ಎಣ್ಣೆ ಆಮದಾಗುತ್ತಿದೆ. ಅಂದರೆ ಸುಮಾರು ೯೮%.

ಈ ದುರ್ದಮ  ಸ್ಥಿತಿಯಲ್ಲಿ ಕೃಷಿ ಕ್ಷೇತ್ರ ಇರುವುದನ್ನು ಸ್ಪಷ್ಠವಾಗಿ ತೋರಿಸುವುದು  ಈ ಕ್ಷೇತ್ರದಲ್ಲಿ ಸೃಷ್ಟಿಯಾದ ಬಂಡವಾಳದ ವಿವರ.  ೨೦೧೧-೧೨ರ ವೇಳೆಗೆ ( ಅಂದರೆ ಯು.ಪಿ.ಎ. ಕಾಲದಲ್ಲಿ!) ಈ ಬಂಡವಾಳ ಸೃಷ್ಟಿಯ ಪ್ರಮಾಣ  ೧೮.೨% ಇದ್ದರೆ ಚೌಕಿದಾರನ ರಾಜ್ಯಭಾರದ ಏಳನೆಯವರ್ಷ ೧೫.೯ಕ್ಕೆ ಇಳಿದಿದೆ. ಸರಕಾರದ ಹೂಡಿಕೆ ೨.೭ ಇದೆ, ಅಷ್ಟೇ.

ಇದರ ಮುಂದುವರಿಕೆಯಾಗಿ ರೈತರ ಆದಾಯ ಮೂಲದ ವಿವರ ನೋಡಿದರೆ ದಿಗಿಲಾಗುತ್ತದೆ. ಚೌಕಿದಾರನ ಘೋಷಣೆ ಪ್ರಕಾರ ಈ ವರ್ಷ ರೈತರ ಆದಾಯ ದ್ವಿಗುಣ ಆಗಬೇಕು. ಆದರೆ  ರೈತನ ಆದಾಯದಲ್ಲಿ ಕೃಷಿಯ ಪಾಲು ಇಳಿದು ಕೂಲಿ ಮೂಲಕ ಹುಟ್ಟುವ ಆದಾಯ ಹೆಚ್ಚಿದೆ. ಚೌಕಿದಾರ ರಾಜ್ಯಭಾರ ಶುರು ಮಾಡುವಾಗ ಕೃಷಿಯಿಂದ ರೈತನ ಆದಾಯ ೪೮% ( ಸುಮಾರಾಗಿ ಅರ್ಧಕ್ಕರ್ಧ ಆದಾಯ)  ಇತ್ತು. ಈಗ ಅದು ೩೭%ಕ್ಕೆ ಇಳಿದಿದೆ. ಕೂಲಿಯಿಂದ ಹುಟ್ಟಿದ ಆದಾಯ ೩೨% ಇದ್ದದ್ದು ೪೦% ಕ್ಕೆ ಏರಿದೆ!!

ಈ ದುಸ್ಥಿತಿ ಸುಧಾರಿಸುವ ಲಕ್ಷಣ ಇದೆಯೇ? ಇದು ಮೂಲತಃ ನೀರಿನ ಲಭ್ಯತೆ/ ಉತ್ತಮ ಮಳೆ ಮೇಲೆ ನಿಂತಿದೆ. ನಮ್ಮಲ್ಲಿ ಶೇ. ೪೯ರಷ್ಟು ನೀರಾವರಿ ಪ್ರದೇಶ ಇದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಈ ಅಂಕಿಅಂಶ ಅದೆಷ್ಟು ಹಾದಿ ತಪ್ಪಿಸುವ ಲೆಕ್ಕ ಎಂದರೆ ಈ ೪೯%ದಲ್ಲಿ ಶೇ. ೪೦ರಷ್ಟು ಕಾಲುವೆ ನೀರಾವರಿ, ಉಳಿದ ೬೦ ಶೇ. ಅಂತರ್ಜಲ ಎಂದು ಸರಕಾರವೇ  ಹೇಳಿದೆ.  ಕಣ್ಣಿಗೆ ಕಾಣದ , ಯಾವ ನಿಯಂತ್ರಣವೂ ಇಲ್ಲದ ಅಂತರ್ಜಲದ ಬಳಕೆಯನ್ನು ಬಿಡುಬೀಸಾಗಿ ಹರಿಯುವ ಕಾಲುವೆ ನೀರಾವರಿ ಜೊತೆ ಸೇರಿಸಿದರೆ ಏನರ್ಥ? ಈ ನೀರಾವರಿ ರೈತರ ಅನುಕರಣೆಯ ಮೋಹಕ್ಕೆ ಬಿದ್ದ ಬೋರವೆಲ್‌ ರೈತರು ವರ್ಷ ವರ್ಷ ನೀರು ಪೋಲು ಮಾಡುತ್ತಾ ನೀರೇ ಖಾಲಿಯಾಗುವ ಅಪಾಯದಲ್ಲಿದ್ದಾರೆ.

 ಈ ಕೆಳಗಿನ ಚಿತ್ರ ನೋಡಿ. ನೀರಿನ ಲಭ್ಯತೆಯ ಒತ್ತಡ ಎಷ್ಟಿದೆಯೆಂದರೆ ಬಹುತೇಕ ಭಾರತ ನೀರಿನ ಕೊರತೆ ಅನುಭವಿಸುತ್ತಿದೆ.

 ಮುಂದಿನ ವರ್ಷಗಳಲ್ಲಿ ಇದು ಕೃಷಿ ಉತ್ಪಾದನೆಯ ಮೇಲೆ ಬೀರುವ ಪರಿಣಾಮ ಎಂತಾದ್ದಿರಬಹುದು ಎಂದು ಹೇಳಲು ಬ್ರಹ್ಮಾಂಡ ಜೋಯಿಸರು ಬೇಕಾಗಿಲ್ಲ!

ಈ ಕೆಂಪು ಚಿತ್ರ ಕಂಡರೆ ಚೌಕಿದಾರನ ಭಕ್ತರು ಕಮ್ಯುನಿಸ್ಟರ ಹಾವಳಿ ಎಂದು ಹೇಳಲೂಬಹುದು. ಆದರೆ ಈ ಅಪಾಯದ ಚಿಹ್ನೆಯ ಭಾರತವನ್ನು ಸುಜಲಾ, ಶ್ಯಾಮಲ, ಬಣ್ಣಕ್ಕೆ ಬದಲಾಯಿಸಲು ಪ್ರಾಮಾಣಿಕ ಬದ್ಧತೆ ಬೇಕು. ಅದಾನಿ, ಅಂಬಾನಿ ಕೈಲಿ ಇದು ಸಾಧ್ಯವಾಗದು. ಹೆಚ್ಚೆಂದರೆ ಅವರು ಹಸಿರು ಪೈಂಟ್‌ ಬಳಿಯಬಹುದು,!!

–

Tags: ೨೦೨೨ ಕೇಂದ್ರ ಬಜೆಟ್BJPCongress PartyCovid 19ಆರ್ಥಿಕ ಸಮೀಕ್ಷೆಕರೋನಾಕೃಷಿಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ವಾಹನ ಸವಾರರಿಗೆ ಸದ್ಯಕ್ಕೆ ರಿಲೀಫ್ : ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ ಗೆ ನಿರ್ಬಂಧ

Next Post

ಕಾಂಗ್ರೆಸ್‌ ಸಂಪರ್ಕದಲ್ಲಿರುವ BJP ನಾಯಕರು | ಈ ಊಹಾಪೋಹ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಸಚಿವ ಆನಂದ್‌ ಸಿಂಗ್‌

Related Posts

ಗ್ರಾಹಕರೇ ಎಚ್ಚರ..! ದೆಹಲಿಯ ಓಖ್ಲಾ ಸಬ್ಜಿ ಮಂಡಿಯಲ್ಲಿ ಬರೋಬ್ಬರಿ 508 KG ನಕಲಿ ಪನೀರ್‌ ಪತ್ತೆ
Top Story

ಗ್ರಾಹಕರೇ ಎಚ್ಚರ..! ದೆಹಲಿಯ ಓಖ್ಲಾ ಸಬ್ಜಿ ಮಂಡಿಯಲ್ಲಿ ಬರೋಬ್ಬರಿ 508 KG ನಕಲಿ ಪನೀರ್‌ ಪತ್ತೆ

by ಪ್ರತಿಧ್ವನಿ
August 25, 2026
0

ನವದೆಹಲಿ: ರಕ್ಷಾ ಬಂಧನ ಸೇರಿದಂತೆ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ನಗರದ ಮುಖ್ಯ ಮಾರುಕಟ್ಟೆಗಳಲ್ಲಿ ಆಹಾರ ಗುಣಮಟ್ಟದ ಪರೀಕ್ಷೆ ನಡೆಸಿದೆ. ಈ...

Read moreDetails
ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ ಕೇಸ್‌: ₹30,000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ ಪತ್ತೆ..!

ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದ ಕೇಸ್‌: ₹30,000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ ಪತ್ತೆ..!

August 24, 2026
ಒಂದೇ ಪಕ್ಷಕ್ಕಾಗಿ 5 ದಶಕಗಳ ನಿಷ್ಠಾವಂತ ಸೇವೆ: ಕೆ.ಜೆ ಜಾರ್ಜ್ ರಾಜಕೀಯ ಜೀವನದ ಸಿಂಹಾವಲೋಕನ

ಒಂದೇ ಪಕ್ಷಕ್ಕಾಗಿ 5 ದಶಕಗಳ ನಿಷ್ಠಾವಂತ ಸೇವೆ: ಕೆ.ಜೆ ಜಾರ್ಜ್ ರಾಜಕೀಯ ಜೀವನದ ಸಿಂಹಾವಲೋಕನ

August 24, 2026
ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ತಮಿಳುನಾಡು ಸರ್ಕಾರದ ಬ್ರೇಕ್?

ಪರಂದೂರು ವಿಮಾನ ನಿಲ್ದಾಣ ಯೋಜನೆಗೆ ತಮಿಳುನಾಡು ಸರ್ಕಾರದ ಬ್ರೇಕ್?

August 24, 2026
ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ

ಕಾವೇರಿ ನೀರು ಹಂಚಿಕೆ ವಿವಾದ: ಮತ್ತೆ ವಿಚಾರಣೆ ಮುಂದೂಡಿಕೆ..!

August 24, 2026
Next Post
ಕಾಂಗ್ರೆಸ್‌ ಸಂಪರ್ಕದಲ್ಲಿರುವ BJP ನಾಯಕರು | ಈ ಊಹಾಪೋಹ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಸಚಿವ ಆನಂದ್‌ ಸಿಂಗ್‌

ಕಾಂಗ್ರೆಸ್‌ ಸಂಪರ್ಕದಲ್ಲಿರುವ BJP ನಾಯಕರು | ಈ ಊಹಾಪೋಹ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಸಚಿವ ಆನಂದ್‌ ಸಿಂಗ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada