ದೇಶದಲ್ಲಿ ದಿನದಿಂದ ಕೋವಿಡ್ ಹಾಗೂ ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿರುವ ಚುನಾವಣಾ ಆಯೋಗವು ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಚುನಾವಣೆ ನಡೆಯುವ ಪಂಚರಾಜ್ಯಗಳಲ್ಲಿ ಜನವರಿ ೨೨ ವರೆಗೂ ಯಾವುದೇ ಚುನಾವಣಾ ಸಮಾವೇಶಗಳ್ನು ಆಯೋಜಿಸಬಾರದು ಎಂದು ಸೂಚಿಸಿದೆ. ಈವರೆಗೂ ಜನವರಿ ೧೫ ವರೆಗೂ ಇದ್ದ ಅವಧಿಯನ್ನು ಮತ್ತೆ ಏಳು ದಿನಕ್ಕೆ ವಿಸ್ತರಿಸಿದೆ.
ಅದಾಗ್ಯೂ ಒಳಾಂಗಣ ಸಭೆಗಳಿಗೆ ಶೇ.50ರಷ್ಟು ಆಸನ ಭರ್ತಿಯೊಂದಿಗೆ ಅವಕಾಶವನ್ನ ನೀಡಲಾಗಿದೆ. ಎಲ್ಲಾ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯೋಗ ಸೂಚಿಸಿದೆ.
ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ, ಚುನಾವಣೆ ನಡೆಯುವ ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯದ ಆರೋಗ್ಯ ಇಲಾಖೆಯ ಮುಖ್ಯಕಾರ್ಯದರ್ಶಿಗಳೊಂದಿಗೆ ಸರಣಿ ಸಭೆ ನಡೆಸಿದ ಆಯೋಗ ಕೋವಿಡ್ ಸ್ಥಿತಿಗತಿ ಕುರಿತು ಅವಲೋಕಿಸಿ ತನ್ನ ನಿರ್ಧಾರವನ್ನ ಪ್ರಕಟಿಸಿದೆ.