ನೇರಳೆ, ಹಸಿರು , ಕೆಂಪು ಬಣ್ಣದ ತರಕಾರಿಗಳ ಹಾಗೆ ಬಿಳಿ ಬಣ್ಣದ ತರಕಾರಿ ಹಾಗೂ ಹಣ್ಣುಗಳು ಸಾಕಷ್ಟಿವೆ. ದಿನನಿತ್ಯದಲ್ಲಿ ನಾವು ಇವುಗಳನ್ನ ಸೇವಿಸುತ್ತೇವೆ ಕೂಡ.ಇರುಳ್ಳಿ , ಬೆಳ್ಳುಳ್ಳಿ, ಮೂಲಂಗಿ,ಮಾರ್ಶ್ರೂಮ್ ಹೀಗೆ ಸಾಕಷ್ಟಿವೆ.. ಇವುಗಳಲ್ಲಿ ಪೌಷ್ಟಿಕಾಂಶಗಳ ಜೊತೆಗೆ ಸಾಕಷ್ಟು ಹೆಲ್ತ್ ಬೆನಿಫಿಟ್ಸ್ ಇವೆ, ಆ ಬಗ್ಗೆ ಇಲ್ಲಿದೆ ಮಾಹಿತಿ.

ಕ್ಯಾನ್ಸರ್ ತಡೆಗಟ್ಟುತ್ತದೆ
ಬಿಳಿ ಬಣ್ಣದ ತರಕಾರಿಗಳು ಅಂದ್ರೆ ಈರುಳ್ಳಿ ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವುದರಿಂದ ಹಾಗೂ ನಾವು ಸೇವಿಸುವುದರಿಂದ ಕ್ಯಾನ್ಸರ್ ಅಂತಹ ಮಾರಕ ಕಾಯಿಲೆಗಳನ್ನು ತಡೆಗಟ್ಟುವುದಕ್ಕೆ ಸಹಾಯಕಾರಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಿಳಿಯ ತರಕಾರಿಗಳು ಅದರಲ್ಲೂ ಮಶ್ರೂಮ್ ಅಂತಹ ಪದಾರ್ಥಗಳಲ್ಲಿ ಬೀಟಾ-ಗ್ಲುಕನ್‌ನಲ್ಲಿ ಸಮೃದ್ಧವಾಗಿವೆ, ಇದು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಸೋಂಕಿಗೆ ಹಾಗೂ ದೇಹದಲ್ಲಿ ಆದಂತಹ ಇನ್ಫೆಕ್ಷನ್ ಅನ್ನ ತಡೆಗಟ್ಟಲು ಸಹಾಯಕಾರಿಯಾಗುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು
ಬಿಳಿ ತರಕಾರಿಗಳು ವಿಟಮಿನ್ ಸಿ ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯ ಆರೋಗ್ಯ
ಹೆಚ್ಚು ಜನಕ್ಕೆ ಜೀರ್ಣಕ್ರಿಯೆ ಸಮಸ್ಯೆಗೆ ಇರುತ್ತದೆ ಇದರಿಂದ ಕಾನ್ಸ್ಟಿಪೇಶನ್ ಕೂಡ ಹೆಚ್ಚಾಗುತ್ತದೆ ಹಾಗಾಗಿ ಬಿಳಿಯ ಬಣ್ಣದ ತರಕಾರಿಗಳನ್ನು ಸೇವಿಸುವುದು ಉತ್ತಮ. ಇದರಲ್ಲಿ ಪ್ರಿಬಯಾಟಿಕ್ಸ್ ಫೈಬರ್ ಹೆಚ್ಚಿರುತ್ತದೆ , ಇದು ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.