ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆ ನಂತರ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಂಶಾಡಳಿತ ರಾಜಕಾರಣದ ವಿರುದ್ದ ದಿಟ್ಟ ಹೋರಾಟವನ್ನ ಮುಂದುವರೆಸಬೇಕಿದೆ ಬಿಜೆಪಿ ವಂಶ ರಾಜಕಾರಣ/ ಕುಟುಂಬ ರಾಜಕಾರಣದ ವಿರುದ್ದವಿದೆ ಎಂದು ಸಾಬೀತು ಪಡಿಸಲು ಉಪಚುನಾವಣೆ ಹಾಗೂ ಚುನಾವಣೆಗಳಲ್ಲಿ ಹಲವಾರು ಶಾಸಕ/ಸಂಸದರ ಮಕ್ಕಳಿಗೆ ಟಿಕೆಟ್ಅನ್ನು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮೋದಿ ವಂಶಾಡಳಿತ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವ ಕಾರಣ ಅದರ ವಿರುದ್ದ ಹೋರಾಡುವಂತೆ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಪಕ್ಷದ ಶಾಸಕರು ಹಾಗೂ ಸಂಸದರ ಮಕ್ಕಳಿಗೆ ಟಿಕೆಟ್ ಸಿಗದಿದ್ದಕ್ಕೆ ಅವರೆ ಕಾರಣ ಎಂದು ಮೋದಿ ಒತ್ತಿ ಹೇಳಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ The Kashmir files ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇಂತಹ ಚಿತ್ರಗಳಿಗೆ ಇನ್ನು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಸಭೆಯಲ್ಲಿ ಹೇಳಿದ್ದಾರೆ.

ಸಭೆಯ ನಂತರ ಮಾತನಾಡಿದ ಸಂಸದ ಮನೋಜ್ ತಿವಾರಿ ಬಿಜೆಪಿ ಅಭ್ಯರ್ಥಿಗಳಿಗೆ ಯಾವ ಬೂತ್ಗಳಲ್ಲಿ ಕಡಿಮೆ ಮತಗಳನ್ನು ಪಡೆದಿದ್ದಾರೋ ಅಂತಹ 100 ಬೂತ್ಗಳನ್ನು ಗುರುತಿಸಿ ಲೋಪದೋಷಗಳನ್ನು ಸರಿಪಡಿಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಮತ್ತು ಪ್ರಧಾನಿ ಚುನಾವಣೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಸದರಿಗೂ ಅಭಿನಂದನೆಯನ್ನ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ ಸಭೆಯಲ್ಲಿ ಮೋದಿ ಹಾಗೂ ನಡ್ಡಾಗೆ ಬಿಜೆಪಿ ಸಂಸದರು ಸನ್ಮಾನಿಸಿದರು.