ಮುಂಬರುವ ಐಪಿಎಲ್ ಟೂರ್ನಮೆಂಟ್‌ನ ಬೌಲಿಂಗ್ ಕೋಚ್ ಆಗಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ ನೇಮಕಗೊಂಡಿದ್ದಾರೆ.
ಹಾಲಿ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ವೈಯಕ್ತಿಕ ಕಾರಣಗಳಿಂದಾಗಿ ಒಂದು ವರ್ಷಗಳ ಕಾಲ ತಂಡದಿಂದ ದೂರ ಉಳಿಯುವುದಾಗಿ ಹೇಳಿದ ನಂತರ ಡ್ವೇನ್ ಬ್ರಾವೋರನ್ನು ತಂಡದ ಆಡಳಿತ ಮಂಡಳಿ ನೂತನ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
ಇತ್ತೀಚಿಗೆ ಬಿಡುಗಡೆಯಾದ ಐಪಿಎಲ್ ಆಟಗಾರರ ರಿಟೇನ್ ಪಟ್ಟಿಯಲ್ಲಿ ಡ್ವೇನ್ ಬ್ರಾವೋರನ್ನು ಸಿಎಸ್‌ಕೆ ತಂಡದಿಂದ ಕೈ ಬಿಡಲಾಗಿತ್ತು ತಂಡದ ಈ ನಿರ್ಧಾರದ ಬೆನ್ನಲ್ಲೇ ಬ್ರಾವೋ ಐಪಿಎಲ್‌ಗೆ ನಿವೃತ್ತಿಯನ್ನ ಘೋಷಿಸಿದ್ದರು.
ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಬ್ರಾವೋ ಇಷ್ಟು ದಿನ ನಾನು ಆಟಗಾರನಾಗಿದವನು ಈಗ ಕೋಚ್ ಆಗುತ್ತಿದ್ದೇನೆ. ನಾನು ಆಡುತ್ತಿದ್ದಾಗ ಬೌಲರ್‌ಗಳ ಜೊತೆಹೆಚ್ಚು ಕೆಲಸ ಮಾಡಿದ್ದೇನೆ. ಒಂದೇ ಒಂದು ವ್ಯತ್ಯಾಸವೆಂದರೆ ನಾನು ಇನ್ನು ಮೈದಾನದಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳುವುದಿಲ್ಲ. ನಾನು ಐಪಿಎಲ್ ಇತಿಹಾಸದ ಭಾಗವಾಗಿದ್ದಕ್ಕೆ ಹೆಚ್ಚು ಸಂತಸವಿದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
161 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಬ್ರಾವೋ 23.82ರ ಸರಾಸರಿಯಲ್ಲಿ 183 ವಿಕೆಟ್‌ಗಳನ್ನ ಕಬಳಿಸಿದ್ದಾರೆ ಮತ್ತು 29.57ರ ಸರಾಸರಿಯಲ್ಲಿ 1560 ರನ್ ಗಳಿಸಿದ್ದಾರೆ.