ರಾಷ್ಟ್ರಧ್ವಜದ ಕುರಿತು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಹೇಳಿಕೆಗಳಿಗೂ ಪಕ್ಷಕ್ಕೂ ಯಾವ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ನಾನು ಅವರಿಗೆ ಖುದ್ದಾಗಿ ಕರೆ ಮಾಡಿ ಸೂಕ್ಷ್ಮವಾಗಿ ಹೇಳಿದ್ದೇನೆ. ರಾಷ್ಟ್ರ ಧ್ವಜ್ವವನ್ನು ನಾವು ಎಲ್ಲರು ಸಹ ಗೌರವಿಸಬೇಕು. ಇಂತಹ ಹೇಳಿಕೆಗಳನ್ನು ನೀಡಿದರೆ ಪಕ್ಷ ಸಹಿಸುವುದಿಲ್ಲ. ನಾವು ರಾಷ್ಟ್ರೀಯವಾದಿಗಳು ಸಂವಿಧಾನ ಮತ್ತು ಕಾನೂನನ್ನು ರಕ್ಷಿಸುತ್ತೇವೆ ಇಂತಹ ಬೇಜವಾಬ್ದಾರಿ ಹೆಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ.
ಫೆಬ್ರವರಿ 9ರಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಮುಂದೊಂದು ದಿನ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು.
ಈ ಹಿಂದೆ ನಾವು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿತ್ತೇವೆ ಎಂದು ಹೇಳಿದಾಗ ಜನರು ನಗುತ್ತಿದ್ದರು. ಆದರೆ, ನಾವು ಈಗ ಅದನ್ನು ನಿರೂಪಿಸಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಶ್ರೀರಾಮನ ರಥದ ಮೇಲೆ ಕೇಸರಿ ಧ್ವಜವಿತ್ತು. ಆಗ ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜ ಇತ್ತೇ. ಈಗ ತ್ರಿವರ್ಣ ಧ್ವಜ ನಮ್ಮ ರಾಷ್ಟ್ರ ಧ್ವಜವಾಗಿದೆ. ಈ ದೇಶದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದಕ್ಕೆ ಗೌರವವನ್ನು ನೀಡಬೇಕು ಎಂದು ಹೇಳಿದ್ದರು.