ಮೈಸೂರಿನಲ್ಲಿ (Mysuru) ಕೆಲವು ದಿನಗಳ ಹಿಂದೆ ಅತಿ ದೊಡ್ಡ ಡ್ರಗ್ಸ್ ಜಾಲ (Drug mafia) ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ಯದುವೀರ್ ಒಡೆಯರ್ (Yaduveer odeyar) ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಡ್ರಗ್ಸ್ ಪ್ರಕರಣವನ್ನ ಮಹಾರಾಷ್ಟ್ರ ಪೋಲಿಸರು ಬಂದು ಭೇದಿಸಿರುವುದು ನೋಡಿದರೆ ನಮ್ಮ ರಾಜ್ಯದ ಪೋಲಿಸ್ ವ್ಯವಸ್ಥೆ ಯಾವ ರೀತಿ ಇದೆ ಎಂದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿರುವ ಆಡಳಿತ ಪಕ್ಷ ಇದರ ಬಗ್ಗೆ ಗಮನಹರಿಸಬೇಕು. ನಾನು ಕೇಂದ್ರದ ಪ್ರತಿನಿಧಿ ನಾನು ಇದರ ಬಗ್ಗೆ ಎಲ್ಲಾ ಗಮನಹರಿಸಲಿಕ್ಕೆ ಆಗಲ್ಲ.ಸ್ಥಳೀಯ ಶಾಸಕರು ನಮ್ಮ ಬಗ್ಗೆ ಟೀಕೆ ಮಾಡೋದು ಬಿಟ್ಟು ಇಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಮನವಹಿಸಬೇಕು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಹೇಳಿದ್ದಾರೆ.

ಇದೇ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು,ಕಾನೂನಿನ ಮುಂದೆ ಎಲ್ಲರು ಸಮಾನರು.ಯಾರೇ ಆದರೂ ತಲೆಬಾಗಲೇ ಬೇಕು. ಒಬ್ಬ ಸಂತ್ರಸ್ತ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ. ನ್ಯಾಯಾಲಯದ ಆದೇಶವನ್ನ ಎಲ್ಲರೂ ಗೌರವಿಸಬೇಕು ಎಂದಿದ್ದಾರೆ.