ಇತ್ತೀಚೆಗೆ ದೇಶದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ, ಕಳೆದ ಒಂದು ದಶಕಗಳ ಅವಧಿಯಲ್ಲಿ ಇಷ್ಟೊಂದು ವಿಪರೀತವಾದ ತಾಪಮಾನವನ್ನ ಕಂಡಿಲ್ಲ ಅಂತ ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ಹವಮಾನ ಇಲಾಖೆಯ ವರದಿಗಳು ಕೂಡ ಇವೆ.
ಹೆಚ್ಚು ಓದಿದ ಸ್ಟೋರಿಗಳು
ಇದು ತಾಪಮಾನ ಏರಿಕೆಯ ಕತೆಯಾದ್ರೆ, ವಿಪರೀತ ಧಗೆಯಿಂದಾಗಿ ಅಂತರ್ಜಲದ ಮಟ್ಟವೂ ಕೂಡ ದೇಶದಲ್ಲಿ ಕಡಿಮೆಯಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಗಳು ಕೂಡ ಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ದೇಶದ ಹಲವೆಡೆ ನೀರಿಗೆ ಹಾಹಾಕಾರ ಎದ್ದದೆಅದರಲ್ಲೂ ಮಹಾರಾಷ್ಟ್ರದ ಕೆಲವೊಂದು ಹಳ್ಳಿಗಳಲ್ಲಿ ನೀರಿಗಾಗಿ ಎದ್ದಿರುವ ಹಾಹಾಕಾರ ಅಷ್ಟಿಷ್ಟಲ್ಲ.

ಆದ್ರೆ ಈ ಬಾರಿ ಇದೇ ಮಹಾರಾಷ್ಟ್ರದಲ್ಲಿ ನೀರಿಗಾಗಿ ವಿಪರೀತ ಸಮಸ್ಯೆಗಳು ತಲೆದೂರಿವೆ ಅದರಲ್ಲೂ ಕೆಲವೊಂದು ಹಳ್ಳಿಗಳಲ್ಲಿ ನೀರಿಗಾಗಿ ಎದ್ದಿರುವ ಹಾಹಾಕಾರದಿಂದ ಮುಂದೆ ನಮ್ಮ ಜೀವನ ಹೇಗಪ್ಪ ಅಂತ ಪರದಾಡುವ ಹಾಗಾಗಿದೆ. ಮಹಾರಾಷ್ಟ್ರದ ಇನ್ನೂ ಕೆಲವೊಂದು ಹಳ್ಳಿಗಳಲ್ಲಿ ಮಹಿಳೆಯರು ಬೃಹತ್ ಬಾವಿಗಳ ಒಳಗೆ ಇಳಿದು ನೀರನ್ನ ಶೇಖರಿಸುತ್ತಿರುವ ದೃಶ್ಯಗಳು ಕಂಡು ಬಂದಿದ್ದವು.
ಇನ್ನು ಇದು ಮಹಾರಾಷ್ಟ್ರದ ಸಮಸ್ಯೆ ಆದ್ರೆ ಕರ್ನಾಟಕದಲ್ಲೂ ಬಿಸಿಲಿನ ಝಳದಿಂದ ಜನರು ಪರದಾಡುವ ಹಾಗಾಗಿದೆ. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯ ದರ್ಶನವಾಗುತ್ತಿದೆ. ಹಾಗಂತ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ತಪಾಮಾನ ಬಾಗಲಕೋಟೆಯಲ್ಲಿ ದಾಖಲಾಗಿದೆ.
ಇನ್ನು ಕರ್ನಾಟಕದ ಕಾಶ್ಮೀರ ಅಂತ ಕರೆಯಿಸಿಕೊಳ್ಳುವ ಕೊಡಗಿನಲ್ಲೂ ತಪಮಾನದ ಏರಿಕೆ ಕಂಡಿದೆ. ಅಷ್ಟು ಮಾತ್ರವಲ್ಲದೆ ಕಳೆದ ಒಂದು ತಿಂಗಳ ಹಿಂದೆ ಕೊಡಗಿನಲ್ಲಿ ಕೂಡ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಅನ್ನೋ ವರದಿಗಳು ಬಂದಿದ್ದವು. ಇನ್ನು ಕೊಡಗಿನ ಗೋಣಿಕೊಪ್ಪ ಹಾಗೂ ಮೈಸೂರಿನ ತಾಪಮಾನ ಕಳೆದ ಎರಡು – ಮೂರು ವರ್ಷಗಳಿಂದ ಒಂದೇ ರೀತಿಯಾಗಿದೆ. ಸದ್ಯದ ಮಟ್ಟಿಗೆ ಕೊಡಗಿನಲ್ಲಿ ಮಳೆರಾಯನ ದರ್ಶನದಿಂದ ಈ ಸಮಸ್ಯೆ ಬಗೆ ಹರಿದಿದೆ.
ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿ ಮಾತ್ರ ಈಗ ನೀರಿಗೆ ಅಕ್ಷರಶಃ ಬರ ಉಂಟಾಗಿದ್ದು ನೀರಿಗಾಗಿ ಅಲ್ಲಿನ ಜನ ಬೃಹತ್ ಬಾವಿಯ ಒಳಗೆ ಇಳಿಯುತ್ತಿರೋದು ನಿಜಕ್ಕೂ ಬೇಸರದ ಸಂಗತಿ.