ಸೀಸನ್ 11 ರ ಕನ್ನಡ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್ ರನ್ನ ಅರೆಸ್ಟ್ ಮಾಡಿದ್ದಾರೆ.
ಈ ರೀತಿ ಧಿಡೀರ್ ಡೋನ್ ಪ್ರತಾಪ್ ಅರೆಸ್ಟ್ ಆಗೋದಕ್ಕೆ ಡ್ರೋನ್ ಪ್ರತಾಪ್ ನಡೆಸಿರೋ ಸೈನ್ಸ್ ಎಕ್ಸ್ ಪೆರಿಮೆಂಟ್ ಕಾರಣವಾಗಿದೆ.

ಪ್ರಯೋಗದ ಹೆಸರಿನಲ್ಲಿ ಡೋನ್ ಪ್ರತಾಪ್ ಕೃಷಿ ಹೊಂಡದ ನೀರಿಗೆ ಸೋಡಿಯಂ ಮೆಟಲ್ ಬಿಸಾಡಿ ದೊಡ್ಡ ಬ್ಲಾಸ್ಟ್ ಮಾಡಿದ್ದರು, ಸಾಲದೆಂಬಂತೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದ್ರೆ ಈ ವಿಡಿಯೋ ನೋಡಿದ ಪರಿಸರ ಪ್ರೇಮಿಗಳು ಡೋನ್ ಪ್ರತಾಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಎಕ್ಸ್‌ಪೆರಿಮೆಂಟ್ ಮೂಲಕ ಪ್ರತಾಪ್ ಸಮಾಜಕ್ಕೆ ತಪ್ಪು ಸಂದೇಶ ನೀಡ್ತಿದ್ದಾರೆ ಅಂತ ಸಾರ್ವಜನಿಕರು, ಸಂಶೋಧಕರು ಗರಂ ಕಿಡಿ ಕಾರಿದ್ದಾರೆ.
ಹೀಗಾಗಿ ತುಮಕೂರು ಜಿಲ್ಲೆಯ ಮಿಡಿಗೇಶಿ ಪೊಲೀಸ್ರು ಡೋನ್ ಪ್ರತಾಪ್ ವಿರುದ್ಧ BNS Act ಸೆ. 288 & ಸ್ಪೋಕಟ ವಸ್ತುಗಳ ಕಾಯ್ದೆ ಸೆ. 3ರ ಅಡಿ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.