
ಕೊಡಗು:ಪಿಕ್ ಅಪ್, ಲಘು ಟ್ರಕ್ ಚಾಲಕರ ಮನವಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಸ್ಪಂದಿಸಿ ಸಾಗಾಣಿಕೆ ಮತ್ತು ನಿರ್ವಹಣೆಗಾಗಿ ಅವಲಂಬಿತರಾಗಿರುವ ಪಿಕ್ ಅಪ್ ಮತ್ತು ಲಘು ಟ್ರಕ್ ಚಾಲಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಗೊಬ್ಬರ ಮತ್ತು ಖರೀದಿಸಲು ಪಟ್ಟಣ ಪ್ರದೇಶಗಳಿಗೆ ಹೋಗುವ ಸಂದರ್ಭದಲ್ಲಿ ಸಮಸ್ತ್ರಗಳನ್ನು ಧರಿಸಿಲ್ಲವೆಂದು ದಂಡ ವಿಧಿಸಿರುವ ಪ್ರಕರಣಗಳಿಂದ ರೈತರಿಗೆ ಮತ್ತು ಕಾಫಿ ತೋಟದ ಮಾಲೀಕರಿಗೆ ತೊಂದರೆಯಾಗುತ್ತಿತ್ತು.
ಶ್ರೀ ಎ ಎಸ್ ಪೊನ್ನಣ್ಣ ಅವರು ಪ್ರಸ್ತಾವನೆಯನ್ನು ಮಾನ್ಯ ಸಾರಿಗೆ ಸಚಿವರಿಗೆ ಭೇಟಿ ಮಾಡಿ ಸಲ್ಲಿಸಿದರು. ಅವರ ನಿರಂತರ ಪ್ರಯತ್ನದಿಂದ ಸಮವಸ್ತ್ರ ಧರಿಸುವುದರಿಂದ ವಿನಾಯಿತಿ ನೀಡಿ ಸರ್ಕಾರಿ ಆದೇಶವಾಗಿದೆ.ಕೊಡಗು ಜಿಲ್ಲೆಯ ರೈತರಿಗೆ ಮತ್ತು ಕೃಷಿ ಉತ್ಪನ್ನ ಪದಾರ್ಥಗಳನ್ನು ಸಾಗಣಿಕೆ ಮಾಡುವ ಚಾಲಕರಿಗೆ ಇದರಿಂದ ಅನುಕೂಲವಾಗಲಿದೆ.