ಆಹಾರವನ್ನು ಸೇವಿಸುವಾಗ ಮಧ್ಯದಲ್ಲಿ ಮಧ್ಯದಲ್ಲಿ ಅಂದ್ರೆ ಆಗಾಗ ನೀರನ್ನು ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ. ಆದ್ರೆ ಕೆಲವರಂತೂ ಊಟ ಮಾಡುವಾಗ ಊಟಕ್ಕಿಂತ ಹೆಚ್ಚಾಗಿ ನೀರಿನ ಕುಡಿಯುತ್ತಾರೆ ಹಾಗೂ ಕೆಲವು ಮಕ್ಕಳು ತುತ್ತಿಗೊಮ್ಮೆ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ.. ಆದ್ರೆ ನಮ್ಮ ಹಿರಿಯರು ಹೇಳುವ ಪ್ರಕಾರ ಊಟ ಮಾಡುವ ಮಧ್ಯದಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳಿತ್ತಲ್ಲವೆಂದು. ಊಟದ ನಡುವೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.

ಜೀರ್ಣಕ್ರಿಯ ಸಮಸ್ಯೆ
ನೀರು ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳನ್ನು ದುರ್ಬಲಗೊಳಿಸುತ್ತದೆ, ಹಾಗೂ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದ ಬ್ಲೋಟಿಂಗ್ ಸಮಸ್ಯೆ , ಗ್ಯಾಸ್ ಮತ್ತು ಹೊಟ್ಟೆ ನೋವಿಗೂ ಕೂಡ ಕಾರಣವಾಗುತ್ತದೆ.

ಪೋಷಕಾಂಶಗಳ ಹೀರಿಕೊಳ್ಳುವಿಕೆ
ನಾವು ಸೇವಿಸುವ ಆಹಾರದಲ್ಲಿ ಅಗತ್ಯವಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಬೇಕು. ಆದರೆ ಊಟದ ನಡುವೆ ನೀರು ಕುಡಿಯುವುದರಿಂದ ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ.ಹಾಗೂ ನೀರು ಪ್ರೋಟೀನ್ ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದರಿಂದಾಗಿ ದೇಹವು ಅಗತ್ಯವಾದ ಅಮೈನೋ ಆಮ್ಲಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.
ಹೊಟ್ಟೆ ತುಂಬುತ್ತದೆ
ಊಟದ ಮದ್ಯ ಅತಿಯಾಗಿ ನೀರನ್ನು ಕುಡಿಯುವುದರಿಂದ ಬೇಗನೆ ಹೊಟ್ಟೆ ತುಂಬತ್ತದೆ ಹಾಗೂ ಊಟ ಸರಿಯಾಗಿ ಸೇರುವುದಿಲ್ಲ.

- ಜೀರ್ಣಕ್ರಿಯೆಗೆ ಸಹಾಯ ಮಾಡಲು ಊಟಕ್ಕೆ ಕನಿಷ್ಠ 30 ನಿಮಿಷಗಳ ಮೊದಲು ನೀರು ಕುಡಿಯುವುದು ಉತ್ತಮ
- ಪೌಷ್ಟಿಕಾಂಶಗಳ ಹೀರಿಕೊಳ್ಳುವಿಕೆ ಸಹಾಯ ಮಾಡಲು ಊಟದ ನಂತರ ನೀರು ಕುಡಿಯಿರಿ.