ಮಳೆ ಬಂದ ಪರಿಣಾಮ ಬನಶಂಕರಿ 3 ನೇ ಹಂತದ ಟಿ.ಜಿ ಲೇಔಟ್ ನಲ್ಲಿ ಬೆಂಗಳೂರು ಜಲಮಂಡಳಿ ಅವರು ಕಾಮಗಾರಿ ನಡೆಸಲು ಚರಂಡಿಯ ಪೈಪ್ ಲೈನ್ ರಿಪೇರಿ ಮಾಡಲು ತೆಗೆದ ಪರಿಣಾಮ ರಸ್ತೆಯ ತುಂಬಾ ಮೋರಿ ನೀರು ಉಕ್ಕಿ ಹರಿದ ಪರಿಣಾಮ ಮನೆಯ ಒಳಗೆ ನೀರು ಹರಿದು ನಾಗರೀಕರು ಪರದಾಟ ಮಾಡುವಂತೆ ಆಯಿತು .
ರಾಜರಾಜೇಶ್ವರಿ ನಗರ ಮತ್ತು ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮಧ್ಯೆ ಇರುವ ರಸ್ತೆಯು ಹೊಸಕೇರಿಹಳ್ಳಿಯ ದತ್ತಾತ್ರೇಯ ದೇವಾಲಯದ ಸಮೀಪದಲ್ಲಿ ಹಾಗೂ ಗುರುದತ್ತ ಬಡಾವಣೆಯ ರಾಜ ಕಾಲುವೆಯ ಹಿಂಬದಿಯಲ್ಲಿ ಬರುತ್ತದೆ ಆದರೆ ಇಲ್ಲಿನ ನಾಗರೀಕರ ಬದುಕು ಅನಾಥವಾಗಿದೆ ಎನ್ನುತ್ತಾರೆ ಶ್ರೀಮತಿ ಶ್ಯಾಮಲಾ ಅವರು ಮಾತನಾಡುತ್ತ 2020 ರಿಂದ ಈ ಸಮಸ್ಯೆ ಅನುಭವಿಸುತ್ತಾ ಇದ್ದೇವೆ ಎಂದರೆ ಕಲ್ಪನಾ ರವರು ಪತ್ರಿಕೆ ಜೊತೆ ಮಾತನಾಡುತ್ತ ನಾಗರೀಕರ ಸಮಸ್ಯೆ ಕೇಳಲು ಆರ್ ಅಶೋಕ್ ಅವರು ಬರುತ್ತಿಲ್ಲ ಹಾಗೂ ಮುನಿರತ್ನ ಅವರು ಬರುತ್ತಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋರಾಗಿ ಮಳೆ ಬಂದ ಪರಿಣಾಮವಾಗಿ ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತ ವಾಯಿತ್ತು , ಹಾಗೂ ಜಲಮಂಡಳಿ ಅವರು ಚರಂಡಿ ಅಗೆದು ಪೈಪ್ ಲೈನ್ ನ ಪೈಪು ಅನ್ನು ಹಾಗೆಯೇ ರಸ್ತೆಯ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ ಬಿಟ್ಟ ಪರಿಣಾಮ ಕಳೆದ 10 ದಿನಗಳಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಯ ಕಿರಿ ಕಿರಿ ಬೇರೆ ಎನ್ನುತ್ತಾರೆ ಸ್ಥಳಿಯ ನಾಗರೀಕರಾದ ವಿಜಯ್ ಕುಮಾರ್ .
ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ ಎನ್ನುತ್ತಾರೆ ಸ್ಥಳಿಯ ನಾಗರೀಕರಾದ ಅಶೋಕ್ ರೆಡ್ಡಿ, ಅಪಾಯ ಸಂಭವಿಸುವ ಮುನ್ನ ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರಾದ ಅಶೋಕ್ ರೆಡ್ಡಿ , ಅನಿಲ್ ಕುಮಾರ್ , ರಾಜೇಶ್ ,ವಿಜಯಕುಮಾರ್ ,ಗಿರೀಶ್ ಮತ್ತು ,ನರಸಿಂಹಯ್ಯ , ಶ್ರೀಮತಿ ಶ್ಯಾಮಲಾ , ಕಲ್ಪನಾ ಇನ್ನೂ ಅನೇಕ ಸ್ಥಳೀಯರು ಅಗ್ರಹಿಸಿದ್ದಾರೆ .
ಚಿತ್ರ – ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ