• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

ಫಾತಿಮಾ by ಫಾತಿಮಾ
January 25, 2022
in ಅಭಿಮತ, ದೇಶ, ವಿಶೇಷ
0
ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ
Share on WhatsAppShare on FacebookShare on Telegram

ಪಶ್ಚಿಮ ಬಂಗಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ನಾಡ ಹಬ್ಬ ದುರ್ಗಾ ಪೂಜೆಯು ಲೈಂಗಿಕ ಕಾರ್ಯಕರ್ತರ ಮನೆಯ ಬಾಗಿಲಿನಿಂದ ಮಣ್ಣನ್ನು ಸಂಗ್ರಹಿಸದೆ ಪೂರ್ಣವಾಗುವುದಿಲ್ಲ. ಆದರೆ ಆ ಸಮುದಾಯವನ್ನು ಇಷ್ಟು ವರ್ಷಗಳಲ್ಲೂ ದುರ್ಗಾ ಪೂಜೆಯ ಆಚರಣೆಯಲ್ಲಿ ಅಕ್ಷರಶಃ ಹೊರಗಿಡಲಾಗಿದೆ. ದೇಶ ವಿದೇಶಗಳಿಂದ ಆಗಮಿಸುವ ಭಕ್ತರು, ಕುತೂಹಲಿಗಳು ಪೂಜೆಯಲ್ಲಿ ಭಾಗವಹಿಸಬಹುದಾದರೂ ಶುದ್ಧತೆ ಮತ್ತು ಮಲಿನತೆಯ ಕಲ್ಪನೆಯನ್ನು ಮುಂದಿಟ್ಟುಕೊಂಡು ಅಮಾನವೀಯವಾಗಿ ಒಂದಿಡೀ ಸಮುದಾಯವನ್ನೇ ಹೊರಗಿಡಲಾಗುತ್ತಿತ್ತು.

ADVERTISEMENT

ಆದರೆ, 2014ರಲ್ಲಿ ಏಷ್ಯಾದ ಅತಿದೊಡ್ಡ ಕೆಂಪು-ದೀಪ ಪ್ರದೇಶ ಎಂದು ಪರಿಗಣಿಸಲಾದ ಕೋಲ್ಕತ್ತಾದಲ್ಲಿರುವ ಜಿಲ್ಲೆ ಸೋನಾಗಚಿ ಜಿಲ್ಲೆ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಅಲ್ಲಿನ ‘ದರ್ಬಾರ್ ಮಹಿಳಾ ಸಮನ್ವಯ ಸಮಿತಿ’ (DMSC) 65,000 ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರೊಂದಿಗೆ ತನ್ನದೇ ಆದ ಪೂಜೆಯನ್ನು ಆಯೋಜಿಸಲು ನಿರ್ಧರಿಸಿತು. ಸ್ಥಳೀಯ ಪೋಲೀಸರಿಂದ ವಿರೋಧ ವ್ಯಕ್ತವಾಯಿತು. ಆಗ ಸಮಿತಿ ಕೋಲ್ಕತ್ತಾ ಹೈಕೋರ್ಟ್ ಅನ್ನು ಸಂಪರ್ಕಿಸಿತು. ಅದು ಅವರಿಗೆ ಪೆಂಡಲ್ ನಿರ್ಮಿಸಲು ಅನುಮತಿ ನೀಡಿತು.

“ಇದು ನಮ್ಮ ಸದಸ್ಯರಿಗೆ ಸಿಕ್ಕ ನೈತಿಕ ವಿಜಯವಾಗಿದೆ” ಎಂದು ದರ್ಬಾರ್ ಕಾರ್ಯದರ್ಶಿ ಭಾರತಿ ಡೇ ಅವರು ಅಂದು Rediff.com ಗೆ ತಿಳಿಸಿದ್ದರು. “ನಮ್ಮದು ಇತರ ವೃತ್ತಿಗಳಂತೆಯೇ ಒಂದು ವೃತ್ತಿ ಮತ್ತು ಸಮಾಜ ನಮ್ಮನ್ನು ಈಗ ಅಂಗೀಕರಿಸಲೇಬೇಕು” ಎಂದಿದ್ದರು.

1995 ರಲ್ಲಿ ದರ್ಬಾರ್ ಪ್ರಾರಂಭವಾದಾಗಿನಿಂದಲೂ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮತ್ತು 1956 PITA ಕಾಯ್ದೆ, ಲೈಂಗಿಕ ಕೆಲಸವನ್ನು ಕಾನೂನುಬದ್ಧಗೊಳಿಸುವಿಕೆಗಾಗಿ ಕೆಲಸ ಮಾಡುತ್ತಿದೆ. ದರ್ಬಾರಿನ ಅವಿರತ ಶ್ರಮದಿಂದಾಗಿ ಲೈಂಗಿಕ ಕಾರ್ಯಕರ್ತರ ಸಮುದಾಯವು ಮತದಾರರ ಗುರುತಿನ ಚೀಟಿಗಳು, ಬ್ಯಾಂಕ್ ಖಾತೆಗಳು, ಆರೋಗ್ಯ ವಿಮೆಯನ್ನು ಪಡೆದುಕೊಂಡಿದೆ ಮತ್ತು ಲೈಂಗಿಕ ಕಾರ್ಯಕರ್ತರ ಭಾರತದ ಮೊದಲ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ. ಕ್ರೀಡಾ ಅಕಾಡೆಮಿ, ಶಾಲೆಗಳು, ನೃತ್ಯ, ನಾಟಕ ಮತ್ತು ಸಂಗೀತ ಮುಂತಾದ ವಿವಿಧ ಕ್ರ.ಗಳ ಮೂಲಕ ಲೈಂಗಿಕ ಕಾರ್ಕಕರ್ತರ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಾಗಿದೆ.

ಈ ಸಮಯದಾಯದ ದರ್ಬಾರ್ ಆರಂಭಿಸುವುದರಿಂದ ಹಿಡಿದು ಅವರ ಹಕ್ಕುಗಳನ್ನು ಅವರಿಗೆ ಒದಗಿಸಿಕೊಡುವವರೆಗೆ ಒಂದು ಶಕ್ತಿಯಾಗಿ ಕೆಲಸ ಮಾಡಿದವರು ಸಾರ್ವಜನಿಕ ಆರೋಗ್ಯ ವಿಜ್ಞಾನಿ ಡಾ. ಸ್ಮರಾಜಿತ್ ಜನಾ.

ಡಾ ಜನಾ ಅವರು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ 1952 ರಲ್ಲಿ ಜನಿಸಿದರು. “ಅವರು ತಮ್ಮ ಸೇವೆಯ ಆರಂಭಿಕ ವರ್ಷಗಳಿಂದಲೂ ಸಾರ್ವಜನಿಕ ಆರೋಗ್ಯದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಇದಕ್ಕಾಗಿಯೇ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪಶ್ಚಿಮ ಬಂಗಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತು ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ವೈದ್ಯಕೀಯ ಸ್ವಯಂಸೇವಕರಾಗಿದ್ದರು” ಎಂದು ಡಾ ಜನಾ ಅವರ ಬಗ್ಗೆ ಮಾಹಿತಿ ನೀಡುತ್ತಾರೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿನಿ ಮತ್ತು ಡಾ ಜನಾ ಅವರ ಮಗಳಾಗಿರುವ ಸಮಿತಾ.

MD ಪದವಿಯ ನಂತರ ಅವರ ಮೊದಲು ನೌಕರರ ರಾಜ್ಯ ವಿಮಾ ನಿಗಮದ (ESIC) ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ನಂತರ ಅವರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹೈಜೀನ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಔದ್ಯೋಗಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

“1992 ರಲ್ಲಿ, ನನ್ನ ತಂದೆ ಸಂಶೋಧಕರಾಗಿ ಕೆಲಸ ಮಾಡುವಾಗ ಲೈಂಗಿಕ ಕಾರ್ಯಕರ್ತರ ಮೊದಲ ಸಮೀಕ್ಷೆಯನ್ನು ನಡೆಸಿದರು” ಎಂದು ಸಮಿತಾ ಹೇಳುತ್ತಾರೆ. “ಅದು ಸಂಸ್ಥೆಯನ್ನು ಪ್ರಾರಂಭಿಸಲು ಅವರಿಗೆ ಸ್ಫೂರ್ತಿ ನೀಡಿತು. ಯಾವುದೇ ಸಾಮಾಜಿಕ ಅಥವಾ ಸಾಂಸ್ಕೃತಿಕ ಪೂರ್ವಾಗ್ರಹವಿಲ್ಲದೆ ಲೈಂಗಿಕ ಕೆಲಸವನ್ನು ಕಾನೂನುಬದ್ಧ ವೃತ್ತಿ ಎಂದು ಗುರುತಿಸುವ ಅಗತ್ಯವಿದೆ ಎನ್ನುವುದು ಅವರ ಪ್ರಮುಖ ಸಂಶೋಧನೆಗಳಲ್ಲಿ ಒಂದಾಗಿದೆ” ಎನ್ನುತ್ತಾರೆ ಸಮಿತಾ.

ದರ್ಬಾರ್ ರಚನೆಯು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಮಹತ್ವದ ಮೈಲಿಗಲ್ಲಾಯಿತು. ಯಾಕೆಂದರೆ ಆರೋಗ್ಯ ಸೇವೆಗಳು ಯಾವ ಅಡತಡೆಯೂ ಇಲ್ಲದೆ‌ ಲಭಿಸಲು ಇದರಿಂದ ಸಾಧ್ಯವಾಯಿತು. ಆದರೆ ವೈದ್ಯಕೀಯ ಸೇವೆ ಮತ್ತು ಸಲಹೆಗಳನ್ನು ಒದಗಿಸುವುದರಿಂದ ಮಾತ್ರ ಅವರ ಬದುಕಿನ‌ ಅಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ ಎನ್ನುವುದನ್ನು ಡಾ ಜನಾ ಬಹುಬೇಗ ಅರಿತಕೊಂಡರು.

ಅವರು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದರೆ, ಕಳಂಕ, ಕಡಿಮೆ ಸಾಮಾಜಿಕ ಸ್ಥಾನಮಾನ, ಅಧಿಕಾರಿಗಳ ಕಿರುಕುಳ ಮತ್ತು ಕ್ರಿಮಿನಲ್ ಗ್ಯಾಂಗ್‌ಗಳಿಂದ ಆಗುತ್ತಿರುವ ಹಿಂಸಾಚಾರವನ್ನು ನಿಲ್ಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ತಾಯಂದಿರ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದು ನಿರ್ಧರಿಸಿ ಬರುಯಿಪುರದಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಲು ದರ್ಬಾರ್‌ಗೆ ಸಹಾಯ ಮಾಡಿದರು ಮತ್ತು ಉಲ್ತದಂಗದಲ್ಲಿ ಇನ್ನೊಂದು ಶಾಲೆಯನ್ನು ಸ್ಥಾಪಿಸಿದರು. ಇದರಿಂದಾಗಿ ಮಕ್ಕಳು ಪರ್ಯಾಯ ವಾತಾವರಣದಲ್ಲಿ ಬೆಳೆಯುವ ಅವಕಾಶವನ್ನು ಪಡೆದುಕೊಂಡರು.

ದರ್ಬಾರ್ ತನ್ನ ಕೆಲಸವನ್ನು ಪ್ರಾರಂಭಿಸಿದ ಹತ್ತು ವರ್ಷಗಳ ನಂತರ ಬಿಡುಗಡೆಯಾದ ಒಂದು ಅಧ್ಯಯನವು “ಭಾರತದಲ್ಲಿ, ಬಾಂಬೆ (ಮುಂಬೈ), ದೆಹಲಿ ಮತ್ತು ಚೆನ್ನೈನಲ್ಲಿ ಲೈಂಗಿಕ ಕಾರ್ಯಕರ್ತರಲ್ಲಿ HIV ಸೆರೋಪ್ರೆವೆಲೆನ್ಸ್ ದರವು 50-90% ರಷ್ಟಿದೆ. ಆದರೆ ಕೋಲ್ಕತ್ತಾದ ಲೈಂಗಿಕ ಕಾರ್ಯಕರ್ತರಲ್ಲಿ ಕೇವಲ 10% ರಷ್ಟು HIV ದರಗಳನ್ನು ಗಮನಿಸಲಾಗಿದೆ. ಕೋಲ್ಕತ್ತಾದಲ್ಲಿ 1992 ರಲ್ಲಿ 3% ರಷ್ಟಿದ್ದ ಕಾಂಡೋಮ್ ಬಳಕೆಯೂ 1999 ರಲ್ಲಿ 90% ಕ್ಕೆ ಏರಿದೆ” ಎಂದು ಹೇಳಿತ್ತು.

ಪ್ರಸ್ತುತ ದರ್ಬಾರ್ ಮಹಿಳಾ ಸಮನ್ವಯ ಸಮಿತಿಯು 19 ಸಮಾಜಗಳ ಒಂದು ಸಂಸ್ಥೆಯಾಗಿದೆ. ಇದು ಉಷಾ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನೂ ಒಳಗೊಂಡಿದೆ. ದಕ್ಷಿಣ ಏಷ್ಯಾದ ಅತಿ ದೊಡ್ಡ ಮತ್ತು ಲೈಂಗಿಕ ಕಾರ್ಯಕರ್ತೆಯರ ನೇತೃತ್ವದ ಮೊದಲ ಹಣಕಾಸು ಸಂಸ್ಥೆಯಾದ ಇದು ಗ್ಲೋಬಲ್ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕ್ ಪ್ರಾಜೆಕ್ಟ್ಸ್ (NSWP) ಅನ್ನೂ ನಡೆಸುತ್ತದೆ. ಅಮ್ರಾ ಪದಾಟಿಕ್ (ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಸಂಘ) ಕೋಮಲ್ ಗಂಧರ್ ಕಲಾವಿದರ ಸಮೂಹ) ಮಮತಾ ನೆಟ್‌ವರ್ಕ್ ಆಫ್ ಪಾಸಿಟಿವ್ ವುಮೆನ್ (HIV ಯೊಂದಿಗೆ ಬದುಕುತ್ತಿರುವ ಲೈಂಗಿಕ ಕಾರ್ಯಕರ್ತರ ಗುಂಪು) ಲೈಂಗಿಕ ಕಾರ್ಯಕರ್ತರ ಮಕ್ಕಳನ್ನು ಮುಖ್ಯವಾಹಿನಿಯ ಕ್ರೀಡೆಗಳಲ್ಲಿ ಸಂಯೋಜಿಸಲು ದರ್ಬಾರ್ ಸ್ಪೋರ್ಟ್ಸ್ ಅಕಾಡೆಮಿ ಮುಂತಾದ ಸಹ ಸಂಸ್ಥೆಗಳನ್ನೂ ಹೊಂದಿದೆ.

ಹಲವಾರು ಯೋಜನೆಗಳನ್ನು ಕೈಗೊಳ್ಳಲು ಡಾ ಜನಾ ಅವರೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಆಲ್ ಇಂಡಿಯಾ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕರ್ಸ್ ಅಧ್ಯಕ್ಷರಾಗಿರುವ 42 ವರ್ಷದ ಕುಸುಮ್ “ಡಾ. ಜನಾ ನೆಟ್‌ವರ್ಕ್ನ ಮುಖ್ಯ ಸಲಹೆಗಾರರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾವು ಸಮುದಾಯವನ್ನು ಬಲಪಡಿಸಲು, ನಮ್ಮ ಹಕ್ಕುಗಳನ್ನು ಪಡೆಯಲು, ಬೆಂಬಲವನ್ನು ಕಂಡುಕೊಳ್ಳಲು, ಸ್ಥಳೀಯ ಪೊಲೀಸರೊಂದಿಗೆ ಸಹಕಾರ ಕೋರಲು ಸಾಧ್ಯವಾಯಿತು. ನಾವು ರೆಡ್ ಲೈಟ್ ಏರಿಯಾಗಳಿಗೆ ಭೇಟಿ ನೀಡಿ ಅವರೊಂದಿಗೆ ಮಾತನಾಡುತ್ತೇವೆ, ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುತ್ತೇವೆ, ಮತ್ತು ಸಂಘಟನೆಗಳನ್ನು ಹೇಗೆ ರಚಿಸಿಕೊಳ್ಳಬೇಕು ಎಂದು ಮಾಹಿತಿ ನೀಡುತ್ತೇವೆ ” ಎಂದು ‘ದಿ ಬೆಟರ್ ಇಂಡಿಯಾ’ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಮೇ 2021 ರಲ್ಲಿ, ಡಾ ಜನಾ ಅವರು COVID-19 ಸಂಬಂಧಿತ ರೋಗಗಳಿಂದಾಗಿ 68 ನೇ ವಯಸ್ಸಿನಲ್ಲಿ ನಿಧನರಾದರು. ಅಂದಿನಿಂದ, ದರ್ಬಾರ್‌ನ ಕೆಲಸವು ನಿಂತಿದೆ ಎಂದು ಕುಸುಮ್ ಮತ್ತು ಸಮಿತಾ ಬೇಸರ ವ್ಯಕ್ತಪಡಿಸುತ್ತಾರೆ. “ಅವರ ನಿಧನದ ನಂತರ ನಮಗಿದ್ದ ದೊಡ್ಡ ಮಾರ್ಗದರ್ಶಕ ಪ್ರಜ್ಞೆ ಕಣ್ಮರೆಯಾದಂತಾಗಿದೆ” ಎಂದು ಕುಸುಮ್ ಹೇಳುತ್ತಾರೆ. ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವ ಸಮಿತಾ “ಎಲ್ಲಾ 19 ಸಮಾಜಗಳು ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನನ್ನ ತಂದೆ ಶ್ರಮಿಸಿದರು. ಅವರ ನಿಧನದ ನಂತರ, ಸಿಬ್ಬಂದಿ ಸಭೆಗಳು ಕಡಿಮೆಯಾಗಿವೆ” ಎನ್ನುತ್ತಾರೆ.

“ಸಮಸ್ಯೆಗಳು ಮತ್ತು ಸಂದರ್ಭಗಳು ಕಾಲಾನಂತರದಲ್ಲಿ ಬದಲಾಗಿವೆ, ಆದರೆ ನನ್ನ ತಂದೆ ಚಳುವಳಿ ಮತ್ತು ಸಮುದಾಯವು ಬದಲಾಗುತ್ತಿರುವ ಕಾಲಘಟ್ಟದೊಂದಿಗೆ ಬದಲಾಗುತ್ತಿರುವುದನ್ನು ಖಚಿತಪಡಿಸಿಕೊಂಡರು. 2019 ರಲ್ಲಿ, ಅವರು ಸಾಮಾನ್ಯ ಲೈಂಗಿಕ ಕಾರ್ಯಕರ್ತರ ಸಮುದಾಯದಲ್ಲಿ NRC ಮತ್ತು CAA ಯ ಪರಿಣಾಮಗಳನ್ನು ಚರ್ಚಿಸಲು ಹಲವಾರು ಸಭೆಗಳನ್ನು ಆಯೋಜಿಸಿದ್ದರು. ದರ್ಬಾರ್‌ನ ವಕಾಲತ್ತು ಪ್ರಯತ್ನಗಳು 2020 ರಲ್ಲಿ COVID ತಡೆಗಟ್ಟುವಿಕೆಗೆ ಸ್ಥಳಾಂತರಗೊಂಡವು. ಇಲ್ಲಿಯೂ ಸಹ, ಮೂರು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ದರ್ಬಾರ್ ಸದಸ್ಯರು ವೇಶ್ಯಾಗೃಹದ ಕೀಪರ್‌ಗಳೊಂದಿಗೆ ಚೌಕಾಶಿ ಮಾಡಲು ಸಹಾಯ ಮಾಡಿದರು. ಇದನ್ನು ಯಾವುದೇ ಕಾನೂನು, ಔಪಚಾರಿಕ ಪ್ರಕ್ರಿಯೆಯ ಮೂಲಕ ಯಶಸ್ವಿಯಾಗಿ ಸಾಧಿಸಲಾಗಿರಲಿಲ್ಲ, ಆದರೆ ಸಾಮೂಹಿಕ ಚೌಕಾಸಿಯ ಶಕ್ತಿಯ ಮೂಲಕ ಸಾಧಿಸಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ” ಎನ್ನುತ್ತಾರೆ ಸಮಿತಾ.

ಡಾ ಜನಾ ಬಗ್ಗೆ ‘ದಿ ವೈರ್‌’ಗೆ ಬರೆದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಮಾರಿ ಮಾರ್ಸೆಲ್ ತೆಕೇಕರ ಅವರ “ವ್ಯತ್ಯಾಸವೆಂದರೆ ಅವರು ಕೇವಲ ಸಾಮಾಜಿಕ ಹೋರಾಟಗಾರನಾಗಿರಲಿಲ್ಲ. ಅವರು ಕ್ರಾಂತಿಕಾರಿಯಾಗಿದ್ದರು, ಬಹುಶಃ ಭಾರತದಲ್ಲಿ ಮೊದಲ ಬಾರಿಗೆ ಯಾರಾದರೂ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ಬಗ್ಗೆ ಮಾತನಾಡಿದವರೆಂದರೆ ಜನಾ. ಅವರು ಅವರ ಬದುಕನ್ನು ಬೆಳಗಿದರು” ಎಂಬ ಮಾತುಗಳು ಜನಾ ಅವರ ಅಸಮಾನ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ .
(ಮೂಲ: ದಿ ಬೆಟರ್ ಇಂಡಿಯಾ)

Previous Post

ಡಿಪೋದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ BMTC ಬಸ್‌ಗಳು : ಇದರ ನಿರ್ವಹಣ ವೆಚ್ಚವೇ 10 ಕೋಟಿ!

Next Post

19 ಐಎಎಸ್‌ ಅಧಿಕಾರಿಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
19 ಐಎಎಸ್‌ ಅಧಿಕಾರಿಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

19 ಐಎಎಸ್‌ ಅಧಿಕಾರಿಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada