ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಘೀ ಕೇಸ್ (Dengue cases) ಹೆಚ್ಚಳವಾಗ್ತಿದೆ. ಹೀಗಾಗಿ ಮೆಡಿಕಲ್ ಎಮರ್ಜೆನ್ಸಿ (Medical emergency) ಘೋಷಿಸಿ ಎಂದು ರಾಜ್ಯ ಸರ್ಕಾರಕ್ಕೆ ನೂತನ ಸಂಸದ ಸಿ.ಎನ್ ಮಂಜುನಾಥ್ (Dr manjunath) ಸಲಹೆ ನೀಡಿದ್ರು. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health minister Dinesh gundurao) ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಆರೋಗ್ಯ ಸಚಿವರು,ಮಾನ್ಯ ಸಿ.ಎನ್ ಮಂಜುನಾಥ್‌ಅವರೇ, ಡೆಂಘೀ ವಿಚಾರದಲ್ಲಿ ನೀವು ವ್ಯಕ್ತಪಡಿಸಿದ ಕಾಳಜಿಗೆ ನಮ್ಮ ಮೆಚ್ಚುಗೆ ಇದೆ, ಆದರೆ ವಾಸ್ತವ ಸಂಗತಿಯೇನು ಗೊತ್ತೇ? ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡುವಷ್ಟರ ಮಟ್ಟಿಗೆ ರಾಜ್ಯದ ಪರಿಸ್ಥಿತಿ ಹದಗೆಟ್ಟಿಲ್ಲ ಎಂದಿದ್ದಾರೆ.

ಡೆಂಘೀ ತಡೆಗೆ ರಾಜ್ಯ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂಬುದನ್ನು ನೀವೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೀರಿ. ಅಂದ ಹಾಗೆ ಡೆಂಘೀ ಹರಡುವುದು ಸೊಳ್ಳೆಗಳಿಂದಲೇ ಹೊರತು, ಮನುಷ್ಯರಿಂದ ಅಲ್ಲ ಎಂಬ ಸಾಮಾನ್ಯ ಸಂಗತಿಯನ್ನು ನಿಮ್ಮ ಪಕ್ಷದ ಅಸಾಮಾನ್ಯ ನಾಯಕರಿಗೆ ಅರ್ಥ ಮಾಡಿಸಿ ಎಂಬುದು ನಮ್ಮ ವಿನಮ್ರ ಮನವಿ ಎಂದು ಕಿಡಿಕಾರಿದ್ದಾರೆ.