ಬೀದರ್:-ತೋಟಗಾರಿಕೆ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಡಾ.ಎಮ್.ಎಚ್.ಮರಿಗೌಡ ತೋಟಗಾರಿಕೆ ಕ್ಷೇತ್ರದಲ್ಲಿ ಪರಿಣಿತರಾಗಿದ್ದರು ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು. ಅವರು ಗುರುವಾರ ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ರಾಷ್ರೀಯ ಸೇವಾ ಯೋಜನೆ ಘಟಕ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ರಿಲಾಯನ್ಸ್ ಫೌಂಡೇಶನ್,
ಔಟರಿಚ್ ಸಂಸ್ಥೆ ಬೀದರ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಬೀದರ ಇವರುಗಳ ಸಹಯೋಗದೊಂದಿಗೆ ತೋಟಗಾರಿಕೆ ಪಿತಾಮಹ ದಿ: ಡಾ.ಎಮ್.ಎಚ್. ಮರೀಗೌಡರವರ ಜನ್ಮದಿನದ ಅಂಗವಾಗಿ ತೋಟಗಾರಿಕಾ ದಿನಾಚರಣೆ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರಿಗೆ ಮತ್ತು ಎನ್.ಆರ್. ಎಲ್. ಎಮ್. ಸದಸ್ಯರುಗಳಿಗೆ ಹವಾಮಾನ ಹೊಂದಾಣಿಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಎಂ.ಎಚ್.ಮರಿಗೌಡ ಅವರು 1951 ರಲ್ಲಿ ಮೈಸೂರಿನ ತೋಟಗಾರಿಕೆ ಸೂಪರಿಂಡೆಂಟ್ ಹುದ್ದೆಯನ್ನು ವಹಿಸಿಕೊಂಡ ನಂತರ ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಅಗಾಧವಾದ ಬೆಳವಣಿಗೆ ಕಂಡುಬಂದಿರುವುದರ ಜೊತೆಗೆ ಅವರು ತೋಟಗಾರಿಕೆ ಅಭಿವೃದ್ಧಿಯ ವಿಶಿಷ್ಟ ಮಾದರಿಯ ಅನುಷ್ಠಾನವನ್ನು ಪ್ರಾರಂಭಿಸಿದರು, ಅಂದರೆ, 4 ಅಂಗಗಳ ತೋಟಗಾರಿಕೆ ಮಾದರಿ ಇದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ತೋಟಗಾರಿಕೆ ಉತ್ಪನ್ನ ಸಹಕಾರ ಮಾರಾಟ ಸಂಘ ಮತ್ತು ನರ್ಸರಿಗಳ ಸಹಕಾರ ಸಂಘವನ್ನು ಸ್ಥಾಪಿಸಿದರು. ಅವರು ರಾಜ್ಯದಾದ್ಯಂತ 357 ಫಾರ್ಮ್ ಮತ್ತು ನರ್ಸರಿಗಳನ್ನು ಪ್ರಾರಂಭಿಸಿದರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ.ಸುರೇಶ ಪಾಟೀಲ, ಬೀದರ ಪ್ರಗತಿಪರ ರೈತರು ಹಾಗೂ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ವೀರೇಂದ್ರ ಪಾಟೀಲ, ಡಾ.ವಿಜಯಮಹಾಂಏಶ, ಅನುರಾಧಾ ಆರ್.ಡಬ್ಲೂö್ಯ. ಡಾ.ಅಂಬರೀಶ, ಡಾ.ಪ್ರಶಾಂತ, ಡಾ.ವಿ.ಪಿ.ಸಿಂಗ, ಡಾ.ಅಶೋಕ ಸೂರ್ಯವಂಶಿ ಸೇರಿದಂತೆ ಮಹಾವಿದ್ಯಾಲಯದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ರೈತಬಾಂಧವರು ಉಪಸ್ಥಿತರಿದ್ದರು.