ಈ ಬ್ಯುಸಿ ಲೈಫ್ನಲ್ಲಿ ನಾವು ಆರಾಮಾಗಿ ಕೂತು ಊಟ ಮಾಡೋದಕ್ಕೂ ಕೂಡ ಟೈಮ್ ಇರೋದಿಲ್ಲ ಎಲ್ಲವೂ ಕೂಡ ಅರ್ಜೆಂಟ ಅರ್ಜೆಂಟಲ್ಲಿಯೇ ಮುಗಿಸಿ ಕೆಲಸಕ್ಕೆ ಹೊರಟುಬಿಡುತ್ತೇವೆ. ಆದ್ರೆ ಹಿರಿಯರು ಹೇಳುವ ಪ್ರಕಾರ ನಾವು ಊಟ ಮಾಡುವಾಗ ಅಚ್ಚುಕಟ್ಟಾಗಿ ಆರಾಮಾಗಿ ಊಟ ಮಾಡುವುದು ಉತ್ತಮ ಎಂದು.
ಹಾಗೂ ಊಟ ಮಾಡಲು ಕುಳಿತುಕೊಳ್ಳುವ ಜಾಗ ಕೂಡ ತುಂಬಾನೇ ಮುಖ್ಯ. ಕೆಲವ್ರು ಡೈನಿಂಗ್ ಟೇಬಲ್ ನಲ್ಲಿ ಊಟ ಮಾಡ್ತಾರೆ, ಹಾಗೆ ಇನ್ನು ಕೆಲವರು ಸೋಫಾ ಮೇಲೆ, ಚೇರ್ ಮೇಲೆ ,ಕಾಟ್ ಮೇಲೆ ಹೀಗೆ ಕೂತು ಊಟ ಮಾಡ್ತಾರೆ. ದೊಡ್ಡವರು ಹೇಳುವ ಪ್ರಕಾರ ಹೇಗೆ ಬೇಕೋ ಹಾಗೆ ಕುತ್ಕೊಂಡು ತಿಂದರೆ ತಿಂದಿದ್ದು ಮೈಗೆ ಹತ್ತಲ್ಲ ಅಂತ. ಏನು ಮುಖ್ಯವಾಗಿ ಊಟ ಮಾಡುವಾಗ ಹೆಚ್ಚು ಮಾತನಾಡುವುದು ಮೊಬೈಲ್ನಲ್ಲಿ ಮುಳುಗಿ ಹೋಗುವುದು ,ಟಿವಿಯನ್ನು ನೋಡ್ತಾ ಊಟ ಮಾಡುವಂತದ್ದು ಇದು ಒಳ್ಳೆಯ ಅಭ್ಯಾಸವಲ್ಲ ಹೀಗೆ ಮಾಡುವುದರಿಂದ ನಮಗೆ ಊಟದ ಮೇಲೆ ಹೆಚ್ಚು ಗಮನ ಇರಲ್ಲ.
ಮುಖ್ಯವಾಗಿ ಆಯುರ್ವೇದದ ತಜ್ಞರು ಕೂಡ ಹೇಳುವ ಪ್ರಕಾರ ನಾವು ಊಟ ಮಾಡುವಾಗ ಕೆಳಗೆ ಕೂತು ಊಟ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಇದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಒದಗುತ್ತೆ ಹಾಗಾದ್ರೆ ಏನಿಲ್ಲಾ ಬೆನಿಫಿಟ್ಸ್.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಕೆಳಗೆ ಅಂದ್ರೆ ನೆಲದ ಮೇಲೆ ಕೂತು ಊಟ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗುವುದು.ಹಾಗೂ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಕಾನ್ಸ್ಟಿಪೇಶನ್ ಸಮಸ್ಯೆಯೂ ಕೂಡ ದೂರವಾಗುತ್ತದೆ.
ಒತ್ತಡ ಕಡಿಮೆಯಾಗುತ್ತದೆ
ಯಾವುದೇ ಒತ್ತಡವಿದ್ರೂ ಕೂಡ ಅದರಿಂದ ಹೊರಗೆ ಬರಲು ನಾವು ಸ್ವಲ್ಪ ವಿರಾಮವನ್ನ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕೆಳಗೆ ಕೂತು ಆರಾಮಾಗಿ ಊಟ ಮಾಡುವುದರಿಂದ ಒತ್ತಡ ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ
ಊಟದ ಸಮಯದಲ್ಲಿ ನಾವು ಕೆಳಗೆ ಕೂತು ವಿಶ್ರಾಂತಿ ಪಡೆಯುತ್ತೇವೆ ಆರಾಮಾಗಿ ಊಟ ಮಾಡುತ್ತೇವೆ ಇದರಿಂದ ದೇಹವನ್ನ ರಿಚಾರ್ಜ್ ಮಾಡಲು ಮತ್ತು ರಿಫೋಕಸ್ ಮಾಡಲು ತುಂಬಾನೇ ಸಹಾಯಕಾರಿ ಇದರಿಂದ ಪ್ರೊಡಕ್ಟಿವಿಟಿ ಹೆಚ್ಚಾಗಲು ಸಹಾಯವಾಗುತ್ತದೆ.
ದೇಹಕ್ಕೆ ಬೇಕಾದ ಪೋಷಕಾಂಶಗಳು
ತಜ್ಞರ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಆಹಾರದಲ್ಲಿ ಇರುವಂತಹ ವಿವಿಧ ಬಗೆಯ ಪೋಷಕಾಂಶಗಳನ್ನು ಅಂಗಾಂಗಗಳು ಹೀರಿಕೊಳ್ಳುತ್ತವೆ ಎಂದು. ಹೆಚ್ಚಾಗಿ ಇದರಿಂದ ಬೆಲ್ಲಿ ಫ್ಯಾಟ್ ಸಮಸ್ಯೆಯೂ ಕೂಡ ಕಾಡುವುದಿಲ್ಲ.
ರಕ್ತ ಸಂಚಾರ ಉತ್ತಮ
ಕರುಳಿನ ಆರೋಗ್ಯಕ್ಕಾಗಿ ನಾವು ನೆಲದ ಮೇಲೆ ಕೂತು ಊಟ ಮಾಡುವುದು ತುಂಬಾನೇ ಉಪಕಾರಿ.ನಮ್ಮ ಹೃದಯದ ಮೇಲಿನ ಒತ್ತಡವನ್ನ ಕಡಿಮೆ ಮಾಡುತ್ತದೆ ಹಾಗೂ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಹಾಗೂ ಮುಖ್ಯವಾಗಿ ಹೊಟ್ಟೆ ಮಾತ್ರವಲ್ಲದೆ ಪ್ರತಿಯೊಂದು ಭಾಗಗಳಿಗೂ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ ಹಾಗಾಗಿ ಕೆಳಗೆ ಕೂತು ಊಟ ಮಾಡಬೇಕು.