ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಹೋದರ ಡಿ.ಕೆ.ಸುರೇಶ್ (D.k.suresh) ಮಣಿಸಲು ‘ದೋಸ್ತಿ’ ಪಡೆ ಮಾಸ್ಟರ್ ಪ್ಲಾನ್ ಹೆಣೆಯುತ್ತಿದೆ.

ಈಗಾಗಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ದೊಡ್ಡಗೌಡ್ರ ಅಳಿಯ ಖ್ಯಾತ ವೈದ್ಯ ಡಾ.ಸಿ.ಎನ್ ಮಂಜುನಾಥ್ (Dr.C.N.Manjunath) ಸ್ಪರ್ಧಿಸೋದು ಬಹುತೇಕ ಕನ್ಫರ್ಮ್ ಆಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕಿಳಿಸುವ ಮೂಲಕ ಡಿಕೆ ಬ್ರದರ್ಸ್ ಸೋಲಿಸಲು ದೋಸ್ತಿ ಪಕ್ಷಗಳು ಖೆಡ್ಡಾ ತೊಡುತ್ತಿವೆ.

ರಾಜಕೀಯ ಜಿದ್ದು ಇಟ್ಟುಕೊಂಡೇ ಡಿಕೆ ಸುರೇಶ್‍ಗೆ ಖೆಡ್ಡಾ ತೋಡಲು ದೋಸ್ತಿಗಳು ಮುಂದಾಗಿದ್ದಾರೆ. ಡಿ.ಕೆ ಸುರೇಶ್ ಸೋಲಿಸಲು ಬೆಂಗಳೂರು ಗ್ರಾಮಾಂತರ ಭಾಗದ ಬಿಜೆಪಿ-ಜೆಡಿಎಸ್ (bjp-jds) ನಾಯಕರು ಕೂಡ ಪರಸ್ಪರ ಕೈಜೋಡಿಸಿದ್ದಾರೆ .

ಬಿಜೆಪಿಯ ಸಿ ಪಿ ಯೋಗೀಶ್ವರ್, ಮುನಿರತ್ನ, ಎಂ ಕೃಷ್ಣಪ್ಪರಿಗೂ ಡಿ.ಕೆ ಸುರೇಶ್ ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅಲ್ಲದೇ ಡಾ.ಸಿ.ಎನ್ ಮಂಜುನಾಥ್ ಅವರೇ ಸಮರ್ಥ ಅಭ್ಯರ್ಥಿ ಎಂದು ನಿರ್ಧರಿಸಿದ್ದಾರೆ. ಯಾಕೆಂದರೆ ಮಂಜುನಾಥ್ ಅವರ ವಿರುದ್ಧ ಪ್ರಚಾರಕ್ಕೆ ಡಿಕೆ ಬ್ರದರ್ಸ್ ಬಳಿ ಯಾವುದೇ ಅಸ್ತ್ರ ಇಲ್ಲ. ಇದೇ ದೋಸ್ತಿ ಪಕ್ಷಗಳಿಗೆ ದೊಡ್ಡ ಅಡ್ವಾಂಟೇಜ್ ಕೂಡ ಆಗಿದೆ. ಸಜ್ಜನ ಡಾ. ಮಂಜುನಾಥ್ ಸ್ಪರ್ಧಿಸಿದರೆ ಡಿಕೆ ಸುರೇಶ್‍ಗೆ ಭಾರೀ ಹಿನ್ನಡೆ ಆಗುವ ನಿರೀಕ್ಷೆಯಲ್ಲಿ ದೋಸ್ತಿಗಳು ಇದ್ದಾರೆ. ಖುದ್ದು ದೇವೇಗೌಡರೂ ಸಹ ಡಿಕೆಸು ಸೋಲಿಸಲು ಕ್ಷೇತ್ರ ಪರ್ಯಟನೆಗೆ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ ಲಭ್ಯವಾಗಿದೆ.
ಮಂಜುನಾಥ್ ಪರ ಎಲ್ಲ ವರ್ಗದವರೂ ಮತ ಹಾಕುವ ವಿಶ್ವಾಸದಲ್ಲಿ ಮೈತ್ರಿ ಕೂಟ ಇದೆ. ಡಾ.ಮಂಜುನಾಥ್ ಇಮೇಜ್, ಮೋದಿ ಟ್ರೆಂಡ್, ಮೂಲಕ ಡಿಕೆಸು ಸೋಲಿಸಲು ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ.













