• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ವಿಶ್ವಗುರು ಭಾರತದಲ್ಲಿ ಮತ್ತೊಂದು ಕಾಮಕ್ರೌರ್ಯ: ದೆಹಲಿಯ ಹಳೆ ನಂಗ್ಲೀಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಕರ್ಣ by ಕರ್ಣ
August 4, 2021
in ಅಭಿಮತ
0
ವಿಶ್ವಗುರು ಭಾರತದಲ್ಲಿ ಮತ್ತೊಂದು ಕಾಮಕ್ರೌರ್ಯ: ದೆಹಲಿಯ ಹಳೆ ನಂಗ್ಲೀಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ!
Share on WhatsAppShare on FacebookShare on Telegram
ADVERTISEMENT

ಆ ಪುಟಾಣಿಗೆ ಇನ್ನೂ 9 ವರ್ಷ. ಹೆಸರು ತಾರ. ಆಡಿ, ನಲಿದು ಬದುಕ ಬೇಕಿತ್ತು ಆ ಕೂಸು. ಆದರೆ ನಾಲ್ವರು ನರರಾಕ್ಷಸರ ಕಾಮದ ತೆವಲಿಗೆ ಆ ಒಂಬತ್ತು ವರ್ಷದ ಹೆಣ್ಣುಗೂಸು ಬಲಿಯಾಗಬೇಕಾಯ್ತು. ಅದು ಅಗಸ್ಟ್ ಒಂದು. ದೆಹಲಿಯ ದಂಡು ಸ್ಮಶಾನದಲ್ಲಿ ತಾರ ಅಬೋಧಾವಸ್ತೆಯಲ್ಲಿ ಮಮ್ಮಲ ಮಲಗಿಬಿಟ್ಟಿದ್ದಳು. ಕರುಳ ಕುಡಿಯ ಹುಡುಕಿ ಬಂದ ತಾಯಿಯ ಕಣ್ಣಿಗೆ ನಿಶ್ಶಕ್ತ ಸ್ಥಿತಿಯಲ್ಲಿ ಮಲಗಿದ ಕೂಸನ್ನು ಕಂಡು ಆಕೆಯ ತಾಯಿ ನಿಂತಲ್ಲೇ ಕುಸಿದು ಬಿಟ್ಟಿದ್ದರು. ಅಷ್ಟೊತ್ತಿಗೆ ಬಂದ ಆ ಸ್ಮಶಾನದಲ್ಲಿರುವ ಪುರೋಹಿತನೊಬ್ಬ ʻʻಆಗಿದ್ದಾಯ್ತು. ಇನ್ನಿದನ್ನು ದೊಡ್ಡದು ಮಾಡಬೇಡಿʼʼ ಎಂದು ತಾರಳ ತಾಯಿಗೆ ಬೆದರಿಕೆ ಒಡ್ಡಲು ನಿಂತು ಬಿಟ್ಟ. ತನ್ನ ಮಗಳಿಗೆ ಏನಾಯ್ತೆಂದು ಆ ಪುರೋಹಿತನ ಬಳಿ ವಿಚಾರಿಸುವಾಗ ʻʻಹುಡುಗಿ ನೀರು ತುಂಬಲು ಬಂದಿದ್ದಳು. ಆಗ ಕರೆಂಟ್ ತಗುಲಿ ಸಾವನ್ನಪ್ಪಿದ್ದಾಳೆʼʼʼ ಎಂದು ಪುರೋಹಿತ ಸುಳ್ಳು ನುಡಿದ. ಆದರೆ ಸತ್ತು ಮಲಗಿರುವ ಹುಡುಗಿಯ ತುಟಿ ಬಾತುಹೋಗಿತ್ತು. ನಾಲಗೆ ನೀಲಿ ಬಣ್ಣಕ್ಕೆ ತಿರುಗಿತ್ತು. ಅವಳ ಕಣ್ಣು ಮುಚ್ಚಿರಲಿಲ್ಲ. ಎಡಗೈ ಮೇಲೆ ಪರಚಿದ ಕಲೆಗಳಿದ್ದವು. ಅವಳ ಒಳ ಉಡುಪು ಒದ್ದೆಯಾಗಿತ್ತು. ಅವಳನ್ನು ನೋಡಲಾಗದೆ ಅವುಡುಗಚ್ಚಿ ಅಳುವುದಕ್ಕೆ ತಾರಾಳ ತಾಯಿ ಶುರುವಿಟ್ಟುಕೊಂಡಳು.

9 ವರ್ಷದ ಮಗುವಿನ ಮೇಲೆ ಅತ್ಯಾಚಾರ !

ದೆಹಲಿಯ ಹಳೆ ನಂಗ್ಲೀ ಏರಿಯಾದ ಬೀದಿಯೊಂದರಲ್ಲಿ ತಾರ ತನ್ನ ಪೋಷಕರ ಜೊತೆ ಬದುಕುತ್ತಿದ್ದಳು. ಈಕೆಯ ತಂದೆ ತಾಯಿಗೆ ಚಿಂದಿ ಆಯುವ ಕೆಲಸ. ಇದರ ಜೊತೆಗೆ ಅದೇ ಬೀದಿಯಲ್ಲಿದ್ದ ಬೀರ್ ಬಾಬಾ ದರ್ಗಾದ ಮುಂಭಾಗದಲ್ಲಿ ಕೂತು ಭಿಕ್ಷೆ ಎತ್ತುತ್ತಿದ್ದರು. ಹೀಗಿರುವ ಆಗಸ್ಟ್ ಒಂದರ ದಿನ ತಾರಾಳ ತಂದೆ ಭಿಕ್ಷಾಟನೆ ಮುಗಿಸಿ ಮನೆ ಬಂದವ, ತಾಯಿಗೆ ಕೊಂಚ ನೀರು ತಲುಪಿಸು ಎಂದು ಹೇಳುತ್ತಾನೆ. ಈಗ ಆಡುತ್ತಿದ್ದೇನೆ. ಆಟ ಮುಗಿಸಿ ತಾಯಿಗೆ ನೀರು ತಲುಪಿಸುತ್ತೇನೆ ಎಂದು ತಾರ ಗೆಳೆಯೊರಡನೆ ಆಟಕ್ಕೆ ಹೊರಟಿದ್ದಳು. ಆಟ ಮುಗಿಸಿ ತಾಯಿಗೆ ನೀರು ತರಲೆಂದು ಹೋದವಳು ನಂತರ ಸ್ಮಾಶನದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಮಯ ಬಹಳ ಕಳೆದರೂ ನೀರು ತಂದು ಕೊಡದ ಮಗಳ ಹುಡುಕಿ ಆಕೆಯ ತಾಯಿ ಹುಡುಕಾಡಲು ಶುರುಮಾಡುತ್ತಾಳೆ. ಅಲ್ಲೇ ಪಕ್ಕದಲ್ಲಿ ಸಾಮಾನ್ಯವಾಗಿ ನೀರು ತುಂಬಲು ಹೋಗುತ್ತಿದ್ದ ದಂಡು ಸ್ಮಶಾನಕ್ಕೆ ಹೋಗಿ ನೋಡವಾಗ ತಾರ ಉಸಿರು ಕಳೆದುಕೊಂಡು ಮಲಗಿ ಬಿಟ್ಟಿದ್ದಳು.

IC: THE PRINT

ವಿದ್ಯುತ್ ತಗುಲಿ ಸತ್ತಿದ್ದಾಳೆ ಎಂಬ ಆ ಪುರೋಹಿತನ ಮಾತನ್ನು ನಂಬದ ತಾರಾಳ ತಾಯಿ ʻʻಮತ್ತೇಗೆ ಹುಡುಗಿಯ ಮೈ ಮೇಲೆ ಪರಚಿದ ಕಲೆಗಳು ಬಂದವುʼʼ ಎಂದು ಪ್ರಶ್ನಿಸಿದ್ದಾಳೆ. ಇಷ್ಟಕ್ಕೇ ಪುರೋಹಿತ ʻʻಆಗಿದ್ದಾಯ್ತು.. ಇದನ್ನು ದೊಡ್ಡದು ಮಾಡಬೇಡಿ. ಕಾನೂನು,, ಹೋರಾಟ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಇಲ್ಲೇ ಆಕೆಯನ್ನು ಸುಡುತ್ತೇನೆ. ನಾಳೆ ಬಂದು ಬೂದಿ ಪಡೆದು ಯಮುನಾ ನದಿಯಲ್ಲಿ ವಿಸರ್ಜನೆ ಮಾಡಿ. ನೀವು ಈಗ ಬಹಳ ದಣಿದಿದ್ದೀರಿ. ರೋಟಿ ತಂದು ಕೊಡಲೇʼʼ ಎಂದು ಕೇಳಿದ. ಇದಕ್ಕೆ ನಿರಾಕರಿಸಿದ ಆಕೆಯ ತಾಯಿ ಜೋರಾಗಿ ಕಿರುಚಾಡಲು ಶುರುವಿಟ್ಟುಕೊಂಡಿದ್ದಾಳೆ. ಅಷ್ಟಕ್ಕೇ ಕೋಪಗೊಂಡ ʻʻಚೀರಾಡಿ.. ಎಲ್ಲರನ್ನು ಸೇರಿಸಬೇಡ ಬೇಕಾದ ರೀತಿಯಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆʼʼ ಮತ್ತೆ ದುರಹಂಕಾರ ತೋರುತ್ತಾನೆ ಪುರೋಹಿತ. ಅಂದಹಾಗೆ, ಆ ಅತ್ಯಾಚಾರಿ ಪುರೋಹಿತನ ಹೆಸರು ರಾಧೇ ಶ್ಯಾಮ್.

ತಾರಾಳ ತಾಯಿಯ ಕೂಗಾಟಕ್ಕೆ ಸೇರಿದ ಅಪ್ಪ-ಪಕ್ಕದ ಜನರು !

ತಮಗಾದ ಅನ್ಯಾಯ ಸಹಿಸಿಕೊಳ್ಳಲಾಗದ ತಾಯಿಯ ಆಕ್ರಂದನಕ್ಕೆ, ತಂದೆ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಆದರೆ ಅಷ್ಟೊತ್ತಿಗಾಗಲೇ ಸ್ಮಶಾನದ ಗೇಟನ್ನು ಮುಚ್ಚಿ ಯಾರೂ ಒಳಗಡೆ ಬಾರದಂತೆ ತಡೆಯಲಾಗಿತ್ತು. ಆದರೆ ಗೇಟಿನ ಬೀಗವನ್ನು ಮುರಿದು ಜನರು ಸ್ಮಶಾನದೊಳಕ್ಕೆ ಬಂದು ಬಿಟ್ಟಿದ್ದರು. ಜನ ಸೇರುತ್ತಿದ್ದಂತೆ ಬೆವರಿ ಭಯಗೊಂಡ ಪುರೋಹಿತ ರಾಧೇ ಶ್ಯಾಮ್ ಅತ್ಯಾಚಾರ ಎಸಗಿರುವುದು ಒಪ್ಪಿಕೊಂಡನು. ಇದೇ ವೇಳೆ ನೆರೆದಿದ್ದ ಜನರಲ್ಲಿ ಯಾರೋ ಒಬ್ಬರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಅಷ್ಟೊತ್ತಿಗಾಗಲೇ ಪುರೋಹಿತ ರಾಧೇ ಶ್ಯಾಮ್ 9 ವರ್ಷದ ತಾರಾಳ ಮೃತ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಟ್ಟದ್ದನು, ಧಗಧಗ ಉರಿಯುತ್ತಿರುವ ಬೆಂಕಿಯನ್ನು ಆರಿಸಲು ಅಲ್ಲಿ ಸೇರಿದ ಜನರು ಯತ್ನಿಸಿದರು. ಸಾಕ್ಷಿಕಗಳು ನಾಶವಾಗದಿರಲಿ ಎಂದು ಜನರು ಬೆಂಕಿ ನಂದಿಸಲು ಮುಂದಾಗಿದ್ದರು. ಆದರೆ ಆಗಮಿಸಿದ್ದ ಪೊಲೀಸರು ಬೆಂಕಿ ನಂದಿಸಲು ತಡೆ ಹೇರಿದರು. ಆದರೆ ಜನರ ಒತ್ತಾಯ ಮೇರೆಗೆ ಬೆಂಕಿ ನಂದಿಸಲೇ ಬೇಕಾಯ್ತು. ಈ ವೇಳೆ ಅತ್ಯಾಚಾರಕ್ಕೆ ಒಳಗಾಗಿದ್ದ ತಾರಾಳ ದೇಹ ಅರ್ಧ ಬೆಂದು ಹೋಗಿತ್ತು. ನಂತರ ಈ ಅತ್ಯಾಚಾರವನ್ನು ಎಸಗಿದ ಪುರೋಹಿತ ರಾಧೇ ಶ್ಯಾಮ್ ಸೇರಿದಂತೆ ಲಕ್ಷ್ಮಿ ನಾರಾಯಣ್, ಕುಲ್ದೀಪ್ ಹಾಗೂ ಸಲೀಂ ಎಂಬವರನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದರು.

ಮೇಲ್ನೋಟಕ್ಕೆ ಇದೊಂದು ಅತ್ಯಾಚಾರ ಎಂದು ಸಾಬೀತಾದ ಹಿನ್ನೆಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲೇ ಕೇಸು ದಾಖಲಿಸಿ ತನಿಖೆ ಮುಂದುವರೆಸಿದರು. ಇದರ ಜೊತೆಗೆ ಸ್ಟೇಟ್ಮೆಂಟ್ ದಾಖಲಿಸಲು ತಾರಾಳ ತಂದೆ ಹಾಗೂ ತಾಯಿಯನ್ನು ಪೊಲೀಸರು ಸುಮಾರು 15 ತಾಸು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಈ ವೇಳೆ ತಮಗೆ ಒಂದು ಹನಿ ನೀರೂ ಕೊಡದೆ ಮಾನಸಿಕ ಹಿಂಸೆಯನ್ನು ಪೊಲೀಸರು ಕೊಟ್ಟಿದ್ದಾರೆಂದು ತಾರಾಳ ಪೋಷಕರು ಆರೋಪಿಸಿದ್ದಾರೆ.

 Delhi Cantt crematorium

ಈ ಹಿಂದೆಯೂ ಅದೇ ಜಾಗದಲ್ಲಿ ನಡೆದಿತ್ತು ಅತ್ಯಾಚಾರ !

ತಾರ ಎಲ್ಲಿ ಅತ್ಯಾಚಾರಕ್ಕೆ ಗುರಿಯಾದಳೋ ಅದೇ ಜಾಗದಲ್ಲಿ ಈ ಹಿಂದೆಯೂ ಅತ್ಯಾಚಾರ ಪ್ರಕಣಗಳು ದಾಖಲಾಗಿದೆ. ಇದೇ ವರ್ಷದ ಜೂನ್ ತಿಂಗಳಿನಲ್ಲಿ ಇಬ್ಬರು ಹೆಂಗಸರ ಮೇಲೆ ಇದೇ ದಂಡು ಸ್ಮಶಾನದಲ್ಲಿ ಅತ್ಯಾಚಾರ ಎಸಗಿರುವ ಘಟನೆ ಬಗ್ಗೆ ಇದೇ ಪೊಲೀಸ್ ಠಾಣೆಯಲ್ಲಿ ದೂಋು ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಭಾರತೀಯ ಸೇನೆಗೆ ಸೇರಿದ ಸೈನಿಕರನ್ನು ಅರೆಸ್ಟ್ ಮಾಡಿರುವ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಾದ ನವಭಾರತ್ ಟೈಮ್ಸ್ ಹಾಗೂ ನ್ಯೂಸ್ ಲಾಂಡ್ರಿ ವರದಿ ಮಾಡಿದೆ. ಅಲ್ದೇ ಈ ದಂಡು ಸ್ಮಶಾನದಲ್ಲಿ ಸಿಸಿಟಿವಿ ಇಲ್ಲದ ಕಾರಣ ಇಂಥಾ ಪ್ರಕರಣಗಳು ನಡೆಯುತ್ತಿದೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ವಿಶ್ವಗುರು ಆಗಲ ಹೊರಟ ಭಾರತದಲ್ಲಿ ತಳಸಮುದಾಯಗಳ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಅತ್ಯಾಚಾರಗಳು ನಡೆಯುತ್ತಿದೆ. ಇದನ್ನು ನೋಡಿಯೂ ನೋಡದಂತೆ ಜಾಣ ಕುರುಡಾಗಿ ಕೇಂದ್ರ ಸರ್ಕಾರಗಳು ಸ್ಥಳೀಯ ಸರ್ಕಾರಗಳು ನಡೆದುಕೊಳ್ಳುತ್ತಿದೆ. ಖಂಡಿತ ತಾರಳಂಥ ಭವಿಷ್ಯ ಕಾಣಬೇಕಿದ್ದ ಕೂಸುಗಳು ಹೀಗೆ ಬೀದಿಯಲ್ಲೇ ಮಾನಭಂಗಕ್ಕೆ ಒಳಗಾಗುತ್ತಿರುವುದು ಮುಂದೆ ದೇಶ ಸಾಗಬಲ್ಲ ದಾರಿಯನ್ನು ನಿಚ್ಚಳವಾಗಿಸುತ್ತಿದೆ. ಅದೇನೆ ಇದ್ದರೂ ಈ ಪ್ರಕರಣದ ನಾಲ್ವರು ಕಾಮ ರಾಕ್ಷಸರಿಗೆ ಕಠಿಣ ಶಿಕ್ಷೆ ಆಗಲಿ ಎಂಬುವುದೇ ನಮ್ಮ ಆಶಯ.

ಹತ್ಯಾಚಾರಕ್ಕೊಳಗಾದ ಬಾಲಕಿಯ ಪೋಷಕರನ್ನು ಭೇಟಿ ಮಾಡಿ ಸಂತೈಸಿದ ರಾಹುಲ್‌ ಗಾಂಧಿ 

ದೆಹಲಿ ಹಳೆ ನಂಘ್ಲಿಯಲ್ಲಿ ಹತ್ಯಾಚಾರಕ್ಕೊಳಗಾದ ಬಾಲಕಿಯ ಪೋಷಕರನ್ನು ಭೇಟಿ ಮಾಡಿ ಸಂತೈಸಿದ ರಾಹುಲ್‌ ಗಾಂಧಿ #RahulGandhi
Tags: 9 YEAR GIRLAAP GovtBJPCentral GovernmentDelhiRape Caseನರೇಂದ್ರ ಮೋದಿಬಿಜೆಪಿ
Previous Post

ಬೆಂಗಳೂರಿನಲ್ಲಿ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಯ ಹಾಸಿಗೆಗಳ ಬೇಡಿಕೆ ಹೆಚ್ಚುತ್ತಿದೆ!

Next Post

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಯುವ ಬಾಕ್ಸರ್ ಲವ್ಲಿನಾ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಯುವ ಬಾಕ್ಸರ್ ಲವ್ಲಿನಾ

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಯುವ ಬಾಕ್ಸರ್ ಲವ್ಲಿನಾ

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada