
ಕಾಶ್ಮೀರದ ಪಹಲ್ಗಾಮ್ ಘಟನೆ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಪ್ರವಾಸಿಗರಿಗೆ ಆಗಿದ್ದು ಭಯಾನಕ ಘಟನೆ ಎಂದಿದ್ದಾರೆ ಸಚಿವ ಸಂತೋಷ್ ಲಾಡ್. ರಾಜಕೀಯ ಮಾತನಾಡಬಾರದು ಅಂದುಕೊಂಡಿದ್ದೇವೆ. ಆದರೆ ಕೆಲವಾರು ಪ್ರಶ್ನೆ ನಮ್ಮನ್ನ ಕಾಡುತ್ತಿವೆ. ಇಂತಹ ಘಟನೆಗಳು ನಡೆದಾಗ ಯಾವ ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಲ್ಲ, ನೇರವಾಗಿ ಬಂದು ಉತ್ತರ ಕೊಟ್ಟಿರೋದು ಬೆರಳೆಣಿಕೆಯಷ್ಟು. ಕೇವಲ ಸ್ಟುಡಿಯೋಗಳಲ್ಲಿ ಪರ ವಿರೋಧ ಚರ್ಚೆಗಳು ಆಗ್ತಿವೆ.
ಕೇಂದ್ರ ಸರ್ಕಾರದಲ್ಲಿ ಆದ ವೈಫಲ್ಯದ ಬಗ್ಗೆ ಯಾರೂ ಮಾತನಾಡ್ತಿಲ್ಲ. ಮಾಧ್ಯಮಗಳಂತೂ ಕೇಂದ್ರ ಗೃಹ ಸಚಿವರ ರಾಜಿನಾಮೆ ಕೇಳ್ತಿಲ್ಲ. ನಮ್ಮ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ಕೇಳ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಯಾರೂ ಕೇಂದ್ರ ಗೃಹ ಸಚಿವರ ರಾಜೀನಾಮೆ ಕೇಳ್ತಿಲ್ಲ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ. ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ. ಗೃಹ ಸಚಿವರನ್ನ ಕೇಳ್ತೇನೆ, ಅಲ್ಲಿ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಇದರ ಬಗ್ಗೆ ಚರ್ಚೆ ಆಗಬೇಕೆ ವಿನಃ ಬೇರೆದಕ್ಕೆ ಅಲ್ಲ. ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ ಮುಸ್ಲಿಂ ಅಂತಾರೆ. ಆಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ. ಇಂತಹ ದೊಡ್ಡ ಘಟನೆ ನಡೆದರೂ ಪ್ರಧಾನಿ ಮೋದಿ ಬಿಹಾರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಸಚಿವ ಸಂತೋಷ್ ಲಾಡ್ ವಾಗ್ದಾಳಿ ಮಾಡಿದ್ದಾರೆ.
ಪುಲ್ವಾಮ ಏನಾಯ್ತು, ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ..? ನೀವು ಹಿಂದೂಗಳನ್ನ ಕೊಂದಿರೋದು. 20 ರಾಜ್ಯಗಳಲ್ಲಿ ನೀವೆ ಸಿಎಂ, ನೀವೆ ಪಿಎಂ. ಬರೀ ಹಿಂದೂ ಮುಸ್ಲಿಂ ಬಿಟ್ರೆ ಬೇರೆ ಏನೂ ಇಲ್ಲ. ರಾಜ್ಯ ಸರ್ಕಾರ ಬಂದು ಇವತ್ತು ವೈಫಲ್ಯ ಅಂತ ಹೇಳಿದೆ. ಆದರೆ ಯಾವ ಮಾಧ್ಯಮಗಳು ಸೆಕ್ಯೂರಿಟಿ ಲ್ಯಾಪ್ಸ್ ಅಂತ ಹೇಳಿದ್ದಾರ..? ಇವರೆ ಆರ್ಟಿಕಲ್ 370 ಮಾಡಿದ್ರು, ಎಲ್ಲಾ ನಮ್ಮ ಕಂಟ್ರೋಲ್‌ನಲ್ಲೇ ಇದೆ ಅಂದ್ರು. ನಾನು ನೋಡಿದಂತೆ ಅಲ್ಲಿನ ಲೋಕಲ್ ಜನ ಬ್ಯೂಟಿಫುಲ್. ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೇಗೆ ಬಂದೂಕು ಬಂತು, ಅವರು ಹೇಗೆ ಬಂದ್ರು..? ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಯಾಕೆ..? ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಮೋದಿ ಜಮ್ಮು ಕಾಶ್ಮೀರಕ್ಕೆ ಹೋಗಲಿಲ್ಲ..? ಯಾವ ಸಚಿವರು ಹೋಗಲಿಲ್ಲ ಕಾಶ್ಮೀರಕ್ಕೆ.. ಕೇವಲ ಮುಸ್ಲಿಮರ ಬಗ್ಗೆ ಮಾತನಾಡ್ತಾರೆ ಬಿಟ್ರೆ, ಬೇರೆ ಯಾವುದರ ಬಗ್ಗೆ ಮಾತನಾಡಲ್ಲ. ಪುಲ್ವಾಮ ಬಗ್ಗೆ ಯಾಕೆ ಯಾರೂ ಮಾತನಾಡ್ತಿಲ್ಲ..? ಇಲ್ಲಿಯವರೆಗೆ ಯಾರನ್ನಾದ್ರು ಅರೆಸ್ಟ್ ಮಾಡಿದ್ದಾರ..? ಈಗ ಬಿಹಾರ ಎಲೆಕ್ಷನ್ ಬಂತು ಇದನ್ನ ತಂದ್ರು. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮುಸ್ಲಿಮರ ಬಗ್ಗೆ ಮಾತನಾಡ್ತೀರ..? ಕುಂಭಮೇಳಕ್ಕೆ ಸಾಮಾನ್ಯ ಜನಕ್ಕೆ ಫ್ಲೈಟ್ ಸಿಗುವಂತೆ ಮಾಡಿದ್ರಾ..? ಎಲ್ಲಾ ಹಿಂದೂಗಳಿಗೆ ಫ್ರೀ ಬಿಡಬಹುದಿತ್ತಲ್ಲ..? ಎಲ್ಲಾ ಅಲ್ಲೆ ದುಡ್ಡು ಮಾಡಿಕೊಂಡ್ರು. 30-40 ಸಾವಿರ ಏರ್ ಟಿಕೆಟ್ ದರ ಏರಿಸಿದ್ರು. ರಕ್ತ ಸುರಿಸಿಕೊಂಡು ಐದಾರು ಕಿ.ಮೀ. ದೂರ ಎರಡು ಸಾವಿರ ಜನ ಸಾಗಿಸಿದ್ದಾರೆ. ಅಲ್ಲಿನ ಜನರನ್ನ ರಕ್ಷಣೆ ಮಾಡಿ ಕೆಳಗೆ ತಂದಿದ್ದು ಮುಸ್ಲಿಮರೇ. ಅದರ ಬಗ್ಗೆ ಯಾರಾದ್ರು ಮಾತನಾಡಿದ್ರಾ..? ಎಂದು ಕಿಡಿಕಾರಿದ್ದಾರೆ.

ಬಿಹಾರದಲ್ಲಿ ಏನೂ ಮಾಡಿದ್ರು ಅಂತ ಹೇಳಲಿಲ್ಲ. ಬರೀ ಪಾಕಿಸ್ತಾನ, ಮುಸ್ಲಿಮರ ಬಗ್ಗೆ ಮಾತನಾಡಿದ್ದು. ಪಾಕಿಸ್ತಾನ, ಅಫ್ಘಾನಿಸ್ತಾನ, ತಾಳಿ, ಮಂಗಳಸೂತ್ರದ ಬಗ್ಗೆ ಅಷ್ಟೇ ಚರ್ಚೆ. ಚುನಾವಣೆ ಮುಗಿಯೋವರೆಗೂ ನೋಡಿ ಬರೀ ಇದೆ ಇರುತ್ತೆ. ಕಳೆದ ಹನ್ನೊಂದು ವರ್ಷಗಳಲ್ಲಿ ಆದ ಭಯೋತ್ಪಾಧಕ ಘಟನೆ ಬಗ್ಗೆ ಚರ್ಚೆ ಆಗಲಿ. ಪ್ರಧಾನಿ ಮೋದಿ ರಾಜೀನಾಮೆ ಕೊಡಲಿ, ಬೇರೆಯವರಿಗೆ ಅವಕಾಶ ಮಾಡಿಕೊಡಲಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವುದು ಬೇಡ. ನೈತಿಕ ಹೊಣೆ ಹೊತ್ತು ಒಂದು ಸುದ್ದಿಗೋಷ್ಟಿ ಮಾಡಲಿ ಸಾಕು ಎಂದು ಸವಾಲು ಹಾಕಿದ್ದಾರೆ.