ಸಿಖ್ಖರ ಸಾಂಪ್ರದಾಯಿಕ ಪೇಟ ಮತ್ತು ಸೊಂಟದಲ್ಲಿರುವ ಖಡ್ಗವನ್ನು ಹಿಜಾಬ್ ವಿವಾದಕ್ಕೆ ಹೋಲಿಸಬೇಡಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿವಾದ ಕುರಿತು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಐವರು ನ್ಯಾಯಮೂರ್ತಿಗಳ ಪೀಠ ಹಾಗೂ ವಕೀಲರ ನಡುವಣ ವಾದ- ವಿವಾದ ಮುಂದುವರಿದಿದೆ.
ವಿಚಾರಣೆ ವೇಳೆ ನಿನ್ನೆ ವಸ್ತ್ರ ಧರಿಸುವ ಹಕ್ಕು ಕೇಳುವುದಾದರೆ ಬಟ್ಟೆ ಧರಿಸದೇ ಇರುವ ಹಕ್ಕಿಗೂ ನಿಯಮ ರೂಪಿಸಬೇಕೆ ಎಂದು ಪ್ರಶ್ನಿಸಿದ್ದ ನ್ಯಾಯಮೂರ್ತಿಗಳು ಇಂದು ಸಿಖ್ಖರ ಪೇಟ ಮತ್ತು ಖಡ್ಗದ ಸಂಪ್ರದಾಯವನ್ನು ಎಳೆದು ತಾರದಂತೆ ಸೂಚಿಸಿದರು.

ಹಿಜಾಬ್ ಕುರಿತ ಅರ್ಜಿಗಳ ಪರ ವಕೀಲರಲ್ಲಿ ಒಬ್ಬರಾದ ವಕೀಲ ನಿಜಾಮುದ್ದೀನ್ ಷಾಷಾ, ಹಿಜಾಬ್ ಮತ್ತು ಸಿಖ್ಖರ ಪೇಟ ಮತ್ತು ಕಿರ್ಪಾನ್ (ಖಡ್ಗ) ನಡುವೆ ಸಾಮ್ಯತೆಗಳ ವಿವರ ನೀಡಿದರು. ಸಿಖ್ಖರು ಪೇಟ ಧರಿಸುವುದು ಸೊಂಟದಲ್ಲಿ ಖಡ್ಗ ಹೊಂದಿರುವುದು ಅವರ ಸಂಪ್ರದಾಯದಂತೆ ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದು ಸಂಪ್ರದಾಯವಾಗಿದೆ. ಆದ್ದರಿಂದ ಸಂಪ್ರದಾಯ ಅನುಸರಿಸುವುದು ಅವರ ಹಕ್ಕು ಎಂದು ಪ್ರತಿಪಾದಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಗುಪ್ತಾ, ಸಿಖ್ಖರು ಪೇಟ ಧರಿಸುವುದು ಹಾಗೂ ಖಡ್ಗ ಹೊಂದುವುದಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆ. ಹಾಗಾಗಿ ಇದನ್ನು ಹಿಜಾಬ್ ವಿವಾದಕ್ಕೆ ಹೋಲಿಸಬೇಡಿ ಎಂದು ಸಲಹೆ ನೀಡಿದರು.