ಪ್ರತಿಯೊಬ್ಬರು ಕೂಡ ಬೆಳಗ್ಗೆ ಎದ್ದ ತಕ್ಷಣ ಹಲ್ಲುಗಳನ್ನು ಉಚ್ಚುತ್ತಾರೆ. ಇದರ ಜೊತೆಗೆ ನಾಲಿಗೆಯನ್ನು ಕೂಡ ಕ್ಲೀನ್ ಮಾಡಬೇಕು ಹಲ್ಲುಜ್ಜಿ ನಾಲಿಗೆಯನ್ನ ಕ್ಲೀನ್ ಮಾಡದಿದ್ದಲ್ಲಿ ಆರೋಗ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೂ ಕೂಡ ನಾಲಿಗೆಯನ್ನು ಕ್ಲೀನ್ ಮಾಡುವುದು ಮುಖ್ಯವಾಗಿರುತ್ತದೆ. ನಾಲಿಗೆಯನ್ನು ಕ್ಲೀನ್ ಮಾಡಿದ್ದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಮಾಹಿತಿ ಹೀಗಿದೆ.

- ನಾಲಿಗೆಯನ್ನು ಕ್ಲೀನ್ ಮಾಡದಿದ್ದಲ್ಲಿ ನಾಲಿಗೆಯ ಮೇಲೆ ಪದರದ ಮೇಲೆ ಪದರಗಳು ಉಳಿಯುತ್ತದೆ ಇದರಿಂದ ನಾವು ತಿಂದ ಆಹಾರದ ರುಚಿಯು ಕಡಿಮೆಯಾಗುತ್ತದೆ. ರುಚಿ ಕಡಿಮೆಯಾದರೆ ಊಟ ತಿಂಡಿ ಸೇರುವುದಿಲ್ಲ.
- ನಾಲಿಗೆಯನ್ನು ಉಜ್ಜುತ್ತಿದ್ದಲ್ಲಿ ಹಲ್ಲುಗಳು ಹುಳುಕಾಗುತ್ತವೆ. ಇದರಿಂದ ಹಲ್ಲು ನೋವು ಶುರುವಾಗುತ್ತದೆ.
- ನಾಲಿಗೆಯನ್ನು ಉಜ್ಜದಿದ್ದಲ್ಲಿ ನಾಲಿಗೆ ಮೇಲೆ ಬ್ಯಾಕ್ಟೀರಿಯಾ ಗಳು ಹೆಚ್ಚಾಗುತ್ತದೆ. ಬಾಯಿಂದ ದುರ್ವಾಸನೆ ಬರುತ್ತದೆ. ಬ್ಯಾಡ್ ಬ್ರೀಥ್, ಇದರಿಂದ ಇನ್ನೊಬ್ಬರ ಜೊತೆ ಮಾತನಾಡಲು ಮುಜುಗರವಾಗುತ್ತದೆ.
- ನಾಲಿಗೆ ಮೇಲೆ ಉಳಿದುಕೊಂಡಿರುವ ಬ್ಯಾಕ್ಟೀರಿಯಾ ಫುಡ್ ಪಾಯ್ಸನ್ ಕ್ರಿಯೇಟ್ ಮಾಡುತ್ತದೆ ಇದರಿಂದಾಗಿ ವಾಂತಿ ,ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
- ಪ್ರತಿದಿನ ನಾವು ನಾಲಿಗೆಯನ್ನು ಕ್ಲೀನ್ ಮಾಡದಿದ್ದಲ್ಲಿ ಹೃದಯದ ಆರೋಗ್ಯವು ಕಡಿಮೆಯಾಗುತ್ತದೆ ಹೃದಯಕ್ಕೆ ಸಂಬಂಧಿಸಿದ ಇತರೆ ಕಾಯಿಲೆಗಳು ಹೆಚ್ಚಾಗುತ್ತದೆ.
- ನಾಲಿಗೆ ಮೇಲೆ ಉಳಿದುಕೊಂಡಿರುವ ಬ್ಯಾಕ್ಟೀರಿಯದಿಂದಾಗಿ ಕ್ಯಾನ್ಸರ್ ಬರುವಂತಹ ಚಾನ್ಸಸ್ ಹೆಚ್ಚಿರುತ್ತದೆ.
- ಹಾಗೂ ಮುಖ್ಯವಾಗಿ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ.
- ಈ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಪ್ರತಿದಿನ ನಾಲಿಗೆಯನ್ನು ಕ್ಲೀನ್ ಮಾಡುವುದು ಉತ್ತಮ.

