ವಾಷಿಂಗ್ಟನ್:ಅಮೆರಿಕದಲ್ಲಿ ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಎಲೆಕ್ಷನ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(Donald Trump) ಸ್ಫರ್ಧಿಸುತ್ತಿರುವ ವಿಚಾರ ಗೊತ್ತೆ ಇದೆ. ಬಿರುಸಿನ ಪ್ರಚಾರದ ನಡುವೆ ವಿರಾಮ ತೆಗೆದುಕೊಂಡಿರುವ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಮೆಕ್ಡೊನಾಲ್ಡ್ಗೆ ಹೋಗಿದ್ದಾರೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
A man of the people, Donald Trump is casually working at McDonalds today. pic.twitter.com/54orj0l5uB
— Dominic Michael Tripi (@DMichaelTripi) October 20, 2024
ಪಾರ್ಸೆಲ್ ಪಡೆಯಲು ವಿಂಡೋ ಬಳಿ ಬಂದವರು ಭಾರತೀಯರು ಎಂದು ಹೇಳಲಾಗಿದೆ.ಟ್ರಂಪ್ ಅವರನ್ನು ನೋಡಿದ ಕಾರಿನಲ್ಲಿದ್ದ ವ್ಯಕ್ತಿ ಭಾರತೀಯ ಸಂಪ್ರದಾಯದಂತೆ ಕಾರಿನಲ್ಲಿದ್ದ ವ್ಯಕ್ತಿ ಕೈಮುಗಿದು ಟ್ರಂಪ್ ಅವರನ್ನು ಮಾತನಾಡಿಸುತ್ತಾರೆ.ಅಮೆರಿಕದ ಮಾಜಿ ಅಧ್ಯಕ್ಷ ಶೇಕ್ಹ್ಯಾಂಡ್ ನೀಡಿ ಅವರ ಆರ್ಡರ್ ಅನ್ನು ಕೊಡುತ್ತಾರೆ. ಕೃತಜ್ಞತೆಯನ್ನು ವ್ಯಕ್ತಪಡಿಸಿದ ವ್ಯಕ್ತಿ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳುತ್ತಾರೆ.ಈ ವೇಳೆ ಕಾರಿನಲ್ಲಿ ಕುಳಿತಿದ್ದ ಮಹಿಳೆ ಟ್ರಂಪ್ಗೆ ಶೇಕ್ಹ್ಯಾಂಡ್ ಮಾಡಿ ಧನ್ಯವಾದ ಹೇಳುತ್ತಾರೆ.
Listen to this Indian dude that pulls up
— Hodgetwins (@hodgetwins) October 20, 2024
All Americans love Trump pic.twitter.com/x0RHCP6OtI
ಮೆಕ್ಡೊನಾಲ್ಡ್ನಲ್ಲಿ ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಗುರಿಯಾಗಿಸಿಕೊಂಡು ಡೊನಾಲ್ಡ್ ಟ್ರಂಪ್, ಈಗ ನಾನು ಕಮಲಾ (ಹ್ಯಾರಿಸ್)ಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಕಮಲಾ ಹ್ಯಾರಿಸ್ ಟ್ರಂಪ್ ಅವರ ವಯಸ್ಸಿನ ಬಗ್ಗೆ ಟಾರ್ಗೆಟ್ ಮಾಡಿ ಮಾತನಾಡಿದ್ದರು.ಟ್ರಂಪ್ ಹೇಳಿಕೆ ಅದಕ್ಕೆ ತಿರುಗೇಟು ಎಂದು ಪರಿಗಣಿಸಲಾಗುತ್ತಿದೆ.
TRUMP: "I've now worked for 15 minutes more than Kamala."
— Breaking911 (@Breaking911) October 20, 2024
REPORTER: "Why would she lie about that?"
TRUMP: "Because she's 'Lyin' Kamala.'" 🤣 pic.twitter.com/gB1Y9RIct7
ಹ್ಯಾರಿಸ್ ಏಕೆ ಸುಳ್ಳು ಹೇಳುತ್ತಾರೆ ಎಂದು ಟ್ರಂಪ್ ಅವರನ್ನು ಕೇಳಿದಾಗ ‘ಏಕೆಂದರೆ ಅವಳು ಸುಳ್ಳುಗಾರ್ತಿ ಎಂದು ಉತ್ತರಿಸಿದ್ದಾರೆ.