ವಿಶ್ವದ ದೊಡ್ಡಣ್ಣ ಅಮೆರಿಕಾ (America) ಈಗಾಗಲೇ ಅಕ್ರಮ ವಲಸಿಗರ ಬಗ್ಗೆ ಕೈಗೊಂಡಿರುವ ಕ್ರಮಗಳಿಂದ ವಿಶ್ವವ್ಯಾಪಿ ಸದ್ದು ಮಾಡಿದ್ದು. ಈ ಮಧ್ಯೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald trump) ವಿದೇಶಿ ಹೂಡಿಕೆದಾರರಿಗೆ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ.

ಹೌದು, ಡೋನ್ಲಾಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ, ಈಗಾಗಲೇ ಅಕ್ರಮ ವಲಸಿಗರನ್ನ ದೇಶದಿಂದಲೇ ಹೊರಹಾಕುವ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಈಗ ಶ್ರೀಮಂತ ವಲಸಿಗರ ಬಗ್ಗೆ ಟ್ರಂಪ್ ಮೃದು ದೋರಣೆ ತೋರಿದಂತಿದೆ.
ಶ್ರೀಮಂತ ಅಕ್ರಮ ವಲಸಿಗರಿಗೆ ಹೊಸ ಯೋಜನೆಯೊಂದನ್ನ ಜಾರಿಗೆ ತರಲು ಟ್ರಂಪ್ ಮುಂದಾಗಿದ್ದಾರೆ. ಗೋಲ್ಡ್ ಕಾರ್ಡ್‌ಗಳ (Gold card) ಮೂಲಕ ಶ್ರೀಮಂತ ವಲಸಿಗರಿಗೆ ಅಮೆರಿಕನ್ ಪೌರತ್ವ (US citizenship) ನೀಡಲು ಪ್ಲಾನ್ ಮಾಡಿದ್ದಾರೆ.

ಅಂದ್ರೆ ಅಮೆರಿಕದಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು 43-45 ಕೋಟಿ ಪಾವತಿಸಿ ಖರೀದಿ ಇದನ್ನು ಮಾಡಬಹುದು. ಈ ರೀತಿಯ ಸುಮಾರು 1 ಮಿಲಿಯನ್ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಟ್ರಂಪ್ ಮುಂದಾಗಿದ್ದಾರೆ.
ಈ ನಿಯಮದ ಮೂಲಕ ರಾಷ್ಟ್ರೀಯ ಸಾಲವನ್ನು ಬಹಳ ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.