
ನಟ ಡಾಲಿ ಧನಂಜಯ ಅವರ ಅಜ್ಜಿ 95 ವರ್ಷದ ಮಲ್ಲಮ್ಮ ನಿಧನರಾಗಿದ್ದಾರೆ.ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.ಕಳೆದ ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಮಲ್ಲಮ್ಮ ಅವರ ಎರಡನೇ ಮಗನಾಗಿದ್ದ ಅಡವಿಸ್ವಾಮಿ ಅವರ ಪುತ್ರ ಡಾಲಿ ಧನಂಜಯ ಹೆಸರಾಂತ ನಟರಾಗಿದ್ದಾರೆ.

ಡಾಲಿ ಅಂದರೆ ಅವರಿಗೆ ಅಚ್ಚುಮೆಚ್ಚು.ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜತೆ ತೆರಳಿ ಮತದಾನ ಮಾಡುತ್ತಿದ್ದರು. ಧನಂಜಯಗೆ ಕೂಡ ಅಜ್ಜಿ ಮಲ್ಲಮ್ಮನ ಕಂಡ್ರೆ ತುಂಬಾನೆ ಪ್ರೀತಿ. ಚಿಕ್ಕವಯಸ್ಸಿನಿಂದಲೂ ಅಜ್ಜಿಯ ತೋಳಲ್ಲಿ ಧನಂಜಯ ಬೆಳೆದಿದ್ರು.












