ಕನ್ನಡದ ಖ್ಯಾತ ನಟ, ನಿರ್ದೇಶಕ ಡಾಲಿ ಎಂದೇ ಖ್ಯಾತರಾಗಿರುವ ಧನಂಜಯ್ ಅವರು ಇದೇ ಫೆ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ಆಮಂತ್ರಣ ಹಂಚುವ ಕೆಲಸದಲ್ಲಿ ಸಖತ್ ಬ್ಯುಸಿಯಾಗಿರುವ ಡಾಲಿ ಧನಂಜಯ್, ತಮ್ಮ ಮೊದಲ ಆಮಂತ್ರಣವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ತಮ್ಮ ಮದುವೆಗೆ ಆಗಮಿಸಿ ಹಾರೈಸುವಂತೆ ಮನವಿ ಮಾಡಿದ್ದರು.
ಸೋಮವಾರ (ಜ.13) ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಾಲಿ ಧನಂಜಯ್ ಮದುವೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಅದರೊಂದಿಗೆ ತಮ್ಮ ಹಿತೈಶಿ ಬಂಧುಗಳಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುತ್ತಾ ಬರುತ್ತಿದ್ದಾರೆ.
ಇನ್ನು ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಧನ್ಯತಾ ಜೊತೆ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದು, ಮದುವೆಯು ಮೈಸೂರಿ ವಸ್ತುಪ್ರದರ್ಶನ ಮುಂಭಾಗದ ಪಾರ್ಕಿಂಗ್ ಏರಿಯಾದಲ್ಲಿ ನಡೆಯಲಿದೆ.
ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿಗಳ ಮದುವೆ ನಡೆಯಲಿದ್ದು, ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು ಸೇರಿದಂತೆ ಹಲವು ಚಿತ್ರರಂಗದ ನಟ, ನಟಿಯರು ಮತ್ತು ರಾಜ್ಯದ ಹಲವು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.