ಸೂಪರ್ ಹಿಟ್ ಸಿನಿಮಾಗಳಾದ ‘ವಿಕ್ರಾಂತ್ ರೋಣ’, ‘ಗಾಳಿಪಟ 2, ‘ಗುರು ಶಿಷ್ಯರು’ ನಂತರ ಜೀ5 ನಲ್ಲಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾಗೋಕೆ ರೆಡಿಯಾಗಿದೆ. ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ ‘ಹೆಡ್ ಬುಷ್’ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ.
ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್’ ಸಿನಿಮಾ ಜನವರಿ 13 ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಅಗ್ನಿ ಶ್ರೀಧರ್ ಬರೆದ ಪುಸ್ತಕ ಆಧರಿಸಿದ ಈ ಚಿತ್ರ ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ತೆರೆ ಮೇಲೆ 70ರ ದಶಕದ ಭೂಗತ ಜಗತ್ತನ್ನು ಕಟ್ಟಿಕೊಟ್ಟ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಎಂ.ಪಿ.ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯ ಕಂಡು ಪ್ರೇಕ್ಷಕರು ಫಿದಾ ಆಗಿದ್ರು. ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿಕೊಂಡ ಈ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಇದೀಗ ಜೀ5 ಮೂಲಕ ಒಟಿಟಿ ಪ್ರೇಕ್ಷಕರ ಮನ ಗೆಲ್ಲೋಕೆ ರೆಡಿಯಾಗಿದ್ದು ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಜನವರಿ 13 ರಂದು ಜೀ5ನಲ್ಲಿ ‘ಹೆಡ್ ಬುಷ್’ ಸಿನಿಮಾ ಬಿಡುಗಡೆಯಾಗುತ್ತಿದೆ.
ಧನಂಜಯ್ ಜೊತೆ ಪಾಯಲ್ ರಜಪೂತ್ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದು, ಲೂಸ್ ಮಾದ ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ಕ್ರೇಜಿ ಸ್ಟಾರ್ ರವಿಚಂದ್ರನ್, ಶೃತಿ ಹರಿಹರನ್ ಒಳಗೊಂಡ ಬಹು ತಾರಾಗಣ ಈ ಚಿತ್ರದಲ್ಲಿದೆ. ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ, ಚರಣ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಬಹುಪರಾಕ್ ಹೇಳಿಸಿಕೊಂಡ ಈ ಚಿತ್ರ ಈಗ ಜೀ5 ಒಟಿಟಿಗೆ ಲಗ್ಗೆ ಇಡುತ್ತಿದೆ.
ಬೇರೆ ಓಟಿಟಿ ಫ್ಲಾಟ್ ಫಾರಂ ಗಳಿಗೆ ಹೋಲಿಕೆ ಮಾಡಿದರೆ, ಕಳೆದ ವರ್ಷ ಕನ್ನಡದ ಬಹುತೇಕ ಹಿಟ್ ಸಿನೆಮಾಗಳು ಬಿಡುಗಡೆಯಾಗಿರೋದು Zee5 ನಲ್ಲೇ. ಆ ಜರ್ನಿ ಈ ವರ್ಷ ಸಹ ಮುಂದುವರಿಯುತ್ತಿದ್ದು, ಮತ್ತಷ್ಟು ಹಿಟ್ ಸಿನಿಮಾಗಳನ್ನ ನಿರೀಕ್ಷೆ ಮಾಡಬಹುದು.
ಜೀ 5 ಉತ್ತಮ ಕಟೆಂಟ್ ವುಳ್ಳ ಹಾಗೂ ಗುಣಮಟ್ಟದ ಸಿನಿಮಾಗಳ ಮೂಲಕ ಪ್ರೇಕ್ಷಕರ ಅಪಾರ ಪ್ರೀತಿ ಗಳಿಸಿಕೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ‘ವಿಕ್ರಾಂತ್ ರೋಣ’, ‘ಗಾಳಿಪಟ 2’ ಹಾಗೂ ‘ಗುರು ಶಿಷ್ಯರು’ ಚಿತ್ರಗಳು ಬಿಡುಗಡೆಯಾಗಿ ದಾಖಲೆ ವೀವ್ಸ್ ಪಡೆದುಕೊಂಡಿವೆ. ಒಟಿಟಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಮುಂಚೂಣಿಯಲ್ಲಿರುವ ಜೀ5 ನಲ್ಲೀಗ ‘ಹೆಡ್ ಬುಷ್’ ಬಿಡುಗಡೆಯಾಗುತ್ತಿದೆ.