ಕನ್ನಡದ ಬಹು ಯಶಸ್ವಿ ನಟರಲ್ಲೊಬ್ಬರು ಎಂದು ಕರೆಯಲ್ಪಡುವ ಡಾಲಿ ಧನಂಜಯ ಹಾಗು ಯಶ್ ಶೆಟ್ಟಿ ಅಭಿನಯದ Once Upon A Time In ಜಮಾಲಿಗುಡ್ಡ ಚಿತ್ರದ ಪರ್ಸ್ಟ್ ಲುಕ್ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಹಿರೋಶಿಮಾ ಪತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡರೆ ಖಳ ನಟ ಯಶ್ ಶೆಟ್ಟಿ ನಾಗಸಕಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಚಿತ್ರದ ಎರಡು ಪೋಸ್ಟರ್ಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಇದಕ್ಕೆ ಪೂರಕವೆಂಬಂತೆ ಧನಂಜಯ್ ಮಾಡಿರುವ ಟ್ವೀಟ್ ಇದಕ್ಕೆ ಸಾಕ್ಷಿ ಎಂಬಂತಿದೆ.
ನಟ ಯಶ್ ಶೆಟ್ಟಿ ಜನುಮದಿನದ ಅಂಗವಾಗಿ ಖೈದಿ ಸಮವಸ್ತ್ರದಲ್ಲಿ ಯಶ್ ಶೆಟ್ಟಿ ಇರುವ ಫೋಟೋವನ್ನು ಚಿತ್ರತಂಡ ಬಿಡುಗಡೆಗೊಳಿಸಿ ಶುಭ ಹಾರೈಸಿತ್ತು.
ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ ಹಾಗು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 80 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

90ರ ದಶಕದಲ್ಲಿ ಕಥೆ ಸಾಗಲಿದ್ದು ಧನಂಜಯ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿ ಖ್ಯಾತಿಯ ಸಂತು, ತ್ರಿವೇಣಿ, ಪ್ರಾಣ್ಯಾ ಹಾಗು ನಂದಗೋಪಾಲ್ ಚಿತ್ರದಲ್ಲಿ ನಟಿಸಿದ್ದಾರೆ.
ನಿಹಾರಿಕ ಮೂವಿಸ್ ಬ್ಯಾನರ್ ಅಡಿ ಶ್ರೀಹರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಚಿತ್ರಕ್ಕೆ ಕುಶಾಲ್ ಗೌಡ ಆಕ್ಷನ್ ಕಟ್ ಹೇಳಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ದೀಪು.ಎಸ್.ಕೊಮ್ಮ ಸಂಕಲನ ಚಿತ್ರಕ್ಕಿದೆ.







