• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಯಡಿಯೂರಪ್ಪನವರ ಹಾದಿಯಲ್ಲಿ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಲು ಈ ಕಾರ್ಯಕ್ರಮ ಮಾಡುತ್ತಿದ್ದಾರೆ : ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
July 26, 2022
in ಕರ್ನಾಟಕ
0
ಬಿಜೆಪಿಯವರ ಜಾಹಿರಾತು ರಾಜ್ಯಕ್ಕೆ ಅವಮಾನ : ಸಿದ್ದರಾಮಯ್ಯ
Share on WhatsAppShare on FacebookShare on Telegram

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ತಿಂಗಳ 28ನೇ ತಾರೀಖಿನಂದು ವರ್ಷಾಚರಣೆಯನ್ನು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳು ತುಂಬುತ್ತದೆ, ಎರಡು ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಬಸವರಾಜ ಬೊಮ್ಮಾಯಿ ಅವರು ಜುಲೈ 28 ರಂದು ಅಧಿಕಾರಕ್ಕೆ ಬಂದಿದ್ದು. ತಾವು ಯಡಿಯೂರಪ್ಪ ಅವರ ಹಾದಿಯಲ್ಲಿ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಲು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ,   ಬೊಮ್ಮಾಯಿ ಅವರು ಬಂದಾಗ ನಮಗೆ ಸ್ವಲ್ಪ ಭರವಸೆ ಇತ್ತು, ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು, ಹೀಗಾಗಿ ಒಂದಷ್ಟು ವಿಭಿನ್ನವಾಗಿ ಕೆಲಸ ಮಾಡಬಹುದು ಎಂಬ ಭರವಸೆ ಇತ್ತು. ಆದರೆ ಕಳೆದ ಒಂದು ವರ್ಷದ ಆಡಳಿತ ನೋಡಿದರೆ ಸಂಪೂರ್ಣ ಭ್ರಮ ನಿರಸನ ವಾಗಿದೆ. ಇವರ ಕಾಲದಲ್ಲಿ ಹಿಂದೆಂದೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ. ರಾಜ್ಯದ ಇತಿಹಾಸದಲ್ಲಿ 40% ಕಮಿಷನ್‌ ಕೊಡಬೇಕಾದ ಪರಿಸ್ಥಿತಿ  ಇಲ್ಲಿನ ಕಂಟ್ರಾಕ್ಟರ್‌ ಗೆ ಬಂದಿರುವುದು ಇದೇ ಮೊದಲು. ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ಈ ಲಂಚದ ಹಣ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಮಾಡಿದ ಕೆಲಸದ ಹಣ ಬಿಡುಗಡೆ ಮಾಡಲಿಲ್ಲ ಎಂದು ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾದರು. ಇದಕ್ಕೆ ಕಾರಣರಾದ ಮಂತ್ರಿ ನಮ್ಮ ಹೋರಾಟಗಳಿಗೆ ಮಣಿದು ರಾಜೀನಾಮೆಯನ್ನು ನೀಡಿದ್ದರು, ಆದರೆ ಈಗ ಪೊಲೀಸ್‌ ಇಲಾಖೆ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ. ಇದರರ್ಥ ಪೊಲೀಸರು ಮಂತ್ರಿಯವರನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ, ಇದಕ್ಕಾಗಿ ನಾವು ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದ್ದೆವು. ಇದನ್ನು ನಾನು ಈಗಲೂ ಒತ್ತಾಯ ಮಾಡುತ್ತೇನೆ. ಡಿಕ್ಲರೇಷನ್‌ ಇರುವಂತಹಾ ಪ್ರಕರಣದಲ್ಲಿ ಅದನ್ನು ಮುಚ್ಚಿಹಾಕಿ ಬಿರಿಪೋರ್ಟ್‌ ನೀಡುವುದು ಅನ್ಯಾಯ. ಇಂಥಾ ಭ್ರಷ್ಟ ಸರ್ಕಾರ ಯಾವಾಗಲೂ ಬಂದಿರಲಿಲ್ಲ, ಇದರ ಸಂಭ್ರಮಾಚರಣೆ ಮಾಡಲು ಬೊಮ್ಮಾಯಿ ಅವರು ಹೊರಟಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಡಬ್ಬಲ್‌ ಇಂಜಿನ್‌ ಸರ್ಕಾರದಿಂದ ಬಹಳಷ್ಟು ಕೊಡುಗೆ ಬಂದಿದೆ ಎಂದು ತಮ್ಮ ಬೆನ್ನು ತಟ್ಟಿಕೊಳ್ಳಲು ಕೆಲಸವನ್ನು ಅವರು ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಬೇರೆ ಯಾವಾಗಲೂ ಮಾಡಿರಲಿಲ್ಲ. 14ನೇ ಹಣಕಾಸು ಆಯೋಗ ನಮ್ಮ ರಾಜ್ಯದ ಪಾಲನ್ನು 42% ಗೆ ನಿಗದಿ ಮಾಡಿತ್ತು, ಆದರೆ ಈ ಅವಧಿಯಲ್ಲಿ ಬಂದಿದ್ದು ಬರೀ 31% ಮಾತ್ರ. ತೆರಿಗೆ ವಸೂಲಿ ಆಗಲಿಲ್ಲ ಎಂಬ ಕಾರಣ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡಿದರು. ನರೇಂದ್ರ ಮೋದಿ ಅವರ ಕಾಲದಲ್ಲಿ 15ನೇ ಹಣಕಾಸು ಆಯೋಗ ರಚನೆ ಯಾಯಿತು. 14 ಮತ್ತು 15ನೇ ಹಣಕಾಸು ಆಯೋಗದ ನಡುವೆ ನಮ್ಮ ಪಾಲಿನ ವ್ಯತ್ಯಾಸ 1.07% ಕಡಿಮೆಯಾಯಿತು. ಈ ಕಾರಣಕ್ಕಾಗಿ ನಮಗೆ 5,495 ಕೋಟಿ ವಿಶೇಷ ಅನುದಾನ ನೀಡಿದ್ದರು. ಆದರೆ ಅದನ್ನು ನಿರ್ಮಲಾ ಸೀತಾರಾಮನ್‌ ಅವರು ನೀಡಲಿಲ್ಲ. ಸರ್ಕಾರದ ಪರವಾಗಿ ಯಾರು ಕೂಡ ಈ ಹಣಕ್ಕಾಗಿ ಕೇಂದ್ರವನ್ನು ಒತ್ತಾಯ ಮಾಡಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲೂ ಬಸವರಾಜ ಬೊಮ್ಮಾಯಿ ಅವರೇ ಜಿ,ಎಸ್‌,ಟಿ ಕೌನ್ಸಿಲ್‌ ಸಭೆಗಳಿಗೆ ಹೋಗುತ್ತಿದ್ದರು, ಮುಖ್ಯಮಂತ್ರಿ ಆದಮೇಲೂ ಅವರೇ ಹೋಗುತ್ತಿದ್ದಾರೆ. ಈ ಹಣವನ್ನು ತರಲು ಒತ್ತಾಯ ಮಾಡದ ಕಾರಣ ಅಂತಿಮ ವರದಿಯಲ್ಲಿ ಇರಲಿಲ್ಲ ಎಂದಿದ್ದಾರೆ.

14% ನಷ್ಟವಾಗುತ್ತದೆ ಎಂದು ಜಿ,ಎಸ್‌,ಟಿ ಪರಿಹಾರವಾಗಿ ಕೊಡಲು ಒಪ್ಪಿಕೊಂಡಿದ್ದರು ಅದೂ ಕೂಡ ಜುಲೈ ಒಂದರಿಂದ ನಿಂತು ಹೋಗಿದೆ. ಬಿಜೆಪಿಯೇತರ ಸರ್ಕಾರಗಳು ಪರಿಹಾರ ಮುಂದುವರೆಸಿ ಎಂದು ಒತ್ತಾಯ ಮಾಡಿದರೂ, ಬೊಮ್ಮಾಯಿ ಅವರು ಕೇಂದ್ರದ ಅಣತಿಯಂತೆ ಒಪ್ಪಿಕೊಂಡು ಸುಮ್ಮನಾಗಿದ್ದಾರೆ. ಆಮೇಲೆ ರಾಜ್ಯಕ್ಕೆ ಬಂದು ಮುಂದಿನ ಎರಡು ಮೂರು ತಿಂಗಳಲ್ಲಿ ಮನವಿಯನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸುಳ್ಳು ಹೇಳಿದರು. ಜಿ,ಎಸ್‌,ಟಿ ಕೌನ್ಸಿಲ್‌ ನಲ್ಲಿ ತೀರ್ಮಾನವಾಗದೆ ಮುಂದೆ ತೀರ್ಮಾನವಾಗುತ್ತದೆ ಎಂದರೆ ಯಾರು ನಂಬುತ್ತಾರೆ ಎಂದು ಹೇಳಿದ್ದಾರೆ.

2020-21 ರಲ್ಲೇ ಸುಮಾರು 11,000 ಕೋಟಿ ಜಿ,ಎಸ್‌,ಟಿ ಬಾಕಿ ಬರಬೇಕಿತ್ತು ಅದನ್ನು ತೆಗೆದುಕೊಳ್ಳಲು ಆಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರು ಇದ್ದಾರೆ. ಮುಖ್ಯಮಂತ್ರಿಗಳೇ ಜಿ.ಎಸ್.ಟಿ ಕೌನ್ಸಿಲ್‌ ಸದಸ್ಯರಿದ್ದಾರೆ ಆದರೂ ಯಾರೋಬ್ಬರೂ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಇದನ್ನೇ ಒಂದು ವರ್ಷದ ಸಂಭ್ರಮ ಎಂದು ಆಚರಣೆ ಮಾಡುತ್ತೀರಾ? ಜಿಎಸ್‌ಟಿ ಸಭೆಯಲ್ಲಿ ಹಾಲು, ಮೊಸರು, ಮಂಡಕ್ಕಿ ಗಳಿಗೆ 0% ಇಂದ 5% ಜಿಎಸ್‌ಟಿ ವಿಧಿಸಿದ್ದಾರೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಯಾರಾದರೂ ಸಾಮಾನ್ಯ ಜನ ಬಳಸುವ ಮಂಡಕ್ಕಿ ಮೇಲೆ ಜಿಎಸ್‌ಟಿ ಹಾಕುತ್ತಾರ? ಇದು ಬಸವರಾಜ ಬೊಮ್ಮಾಯಿ ಅವರು ಸಬ್‌ ಕಮಿಟಿಗೆ ಅಧ್ಯಕ್ಷರಾಗಿ ಮಾಡಿರುವ ಬಡವರ ರಕ್ತ ಕುಡಿಯುವ ಕೆಲಸ ಎಂದು ಕಿಡಿಕಾರಿದ್ದಾರೆ.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 3 ವರ್ಷ ಆದರೂ ಒಂದೇ ಒಂದು ಹೊಸ ಮನೆಯನ್ನು ಮಂಜೂರು ಮಾಡಿ, ಕಟ್ಟಿಸಿಕೊಟ್ಟಿಲ್ಲ. ಈ ವರ್ಷ ಕಟ್ಟಿಸಿಕೊಡ್ತೀವಿ ಎಂದಿದ್ದಾರೆ, ಇದು ಚುನಾವಣಾ ವರ್ಷವಾದ್ದರಿಂದ ಎಷ್ಟು ಕಟ್ಟಿಸ್ತಾರೆ ಬಿಟ್ತಾರೆ ಹೇಳೋದು ಕಷ್ಟ. ನಮ್ಮ ಸರ್ಕಾರ ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿ ಜಮೀನು ಮಂಜೂರು ಮಾಡಿದ್ದೆವು. ನಂತರ ಆನ್‌ ಲೈನ್‌ ಮೂಲಕ ಅರ್ಜಿ ಕರೆದಿದ್ದೆವು. ಹಿಂದೆ ಅರ್ಜಿ ಹಾಕಿದ್ದವರು ತಮಗೆ ಮನೆ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು, ಆದರೆ ಈ ಸರ್ಕಾರ ಮತ್ತೆ ಅರ್ಜಿ ಕರೆದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು  ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸರ್ಕಾರವೇ ಮನುವಾದಿಗಳಿಗೆ ಬೆಂಬಲ ನೀಡುವ ಕೆಲಸ ಮಾಡುತ್ತಿದೆ. ಅವರು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಬಾಹಿರ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಇಲ್ಲದೆ ಹೋದರೆ ಯಾರೂ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಬರಲ್ಲ ಎಂದು ನಾನು ಸದನದಲ್ಲಿ ಹೇಳಿದ್ದು. ಹಿಜಾಬ್‌, ಹಲಾಲ್‌, ಜಾತ್ರೆಗಳಲ್ಲಿ ಅಲ್ಪಸಂಖ್ಯಾತ ವ್ಯಾಪಾರಿಗಳಿಗೆ ನಿಷೇಧ ಮುಂತಾದವುಗಳನ್ನು ಸರ್ಕಾರವೇ ಹುಟ್ಟುಹಾಕಿತು. ದ್ವೇಷವನ್ನು ಹುಟ್ಟುಹಾಕಿದ್ದೇ ಈ ಸರ್ಕಾರದ ಸಾಧನೆ. ಬೊಮ್ಮಾಯಿ ಅವರ ಕಾಲದಲ್ಲಿ ಇದು ವ್ಯಾಪಾಕವಾಗಿ ನಡೆದಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅರ್‌,ಎಸ್‌,ಎಸ್‌ ನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದರು, ಬೊಮ್ಮಾಯಿ ಅವರು ಸಂಪೂರ್ಣವಾಗಿ ಆರ್‌,ಎಸ್‌,ಎಸ್‌ ಕಪಿಮುಷ್ಟಿಯಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಇದನ್ನೇ ಜನರಿಗೆ ಹೇಳಲಿ ಎಂದಿದ್ದಾರೆ.

ಅಧಿಕಾರಕ್ಕೆ ಬಂದ 3 ವರ್ಷಗಳ ಆಯ್ತು. 2018ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 10% ಕೂಡ ಇಲ್ಲ. 5 ವರ್ಷಗಳಲ್ಲಿ 150 ಲಕ್ಷ ಕೋಟಿ ರೂ. ಗಳನ್ನು ನೀರಾವರಿಗೆ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಇಲ್ಲಿಯವರೆಗೆ 50,000 ಕೋಟಿಯನ್ನೂ ಖರ್ಚು ಮಾಡಿಲ್ಲ. ಇದೇ ರೀತಿ ತಾವು ಹೇಳಿದ್ದ ಭರವಸೆಗಳನ್ನು ಈಡೇರಿಸುವ ಪ್ರಯತ್ನವನ್ನೇ ಮಾಡಿಲ್ಲ.  ಈ ಸರ್ಕಾರ ಜನರಿಗೆ ದ್ರೋಹ ಎಸಗಿದೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಈ ಮಾತನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅವರು ಈ ಸರ್ಕಾರದ ಅಡಿ ಗುತ್ತಿಗೆ ಕೆಲಸಗಳನ್ನು ಮಾಡಲು ಆಗುತ್ತಿಲ್ಲ, ನಮ್ಮಿಂದ 40% ಕಮಿಷನ್‌ ಕೇಳುತ್ತಿದ್ದಾರೆ, ನೀವೆ ಏನಾದ್ರೂ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿಗಳಿಗೆ ಪತ್ರ ಬರೆದು 1 ವರ್ಷ ಆಗಿದೆ, ಆದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಇದು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಷ್ಟು ಅಂಕ ಕೊಡುತ್ತೀರ ಎಂದು ಕೆಲವರು ನನ್ನನ್ನು ಕೇಳಿದರು, ಅದಕ್ಕೆ ನಾನು ಸೊನ್ನೆ ಮಾತ್ರ ಕೊಡಲು ಸಾಧ್ಯ ಎಂದಿದ್ದಾರೆ

ಪಿಎಸ್‌ಐ ಹಗರಣದಲ್ಲಿ ಐಪಿಎಸ್‌ ಆಫೀಸರ್‌ ಬಂಧನವಾಗಿದೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಐಎಎಸ್‌, ಐಪಿಎಸ್‌ ದರ್ಜೆಯ ಅಧಿಕಾರಿಗಳ ಬಂಧನವಾದದ್ದು ಇದೇ ಮೊದಲು. ಅಂದರೆ ಭ್ರಷ್ಟಾಚಾರ ಯಾವ ಮಟ್ಟಿಗೆ ಇದೆ ಎಂದು ನೀವೆ ಅರ್ಥಮಾಡಿಕೊಳ್ಳಬೇಕು. ಇದೆಲ್ಲ ಮಂತ್ರಿಗಳು ಹಾಗೂ ರಾಜಕಾರಣಿಗಳ ಕುಮ್ಮಕ್ಕು ಇಲ್ಲದೆ ನಡೆಯಲು ಸಾಧ್ಯವೇ? ಇಡೀ ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಇಲ್ಲದೆ ಹೋದರೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ಮಾಡಿಸಿ. ಇಲ್ಲದಿದ್ದರೆ ಸತ್ಯ ಹೊರಬರಲ್ಲ. ಆದರೆ ಬೊಮ್ಮಾಯಿ ಅವರು ಇದನ್ನು ಮುಚ್ಚಿಹಾಕಲು ಯತ್ನ ಮಾಡಿದ್ದಾರೆ.

ಕೆಪಿಎಸ್‌ಸಿ ಮುಂದೆ ಬಿಜೆಪಿ ಶಾಸಕರೇ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್‌ ನಲ್ಲಿ ಶಿಸ್ತಿಲ್ಲ ಎನ್ನುತ್ತಾರೆ. ಬಿಜೆಪಿ ಬಹಳಾ ಶಿಸ್ತಿನ ಪಕ್ಷ ಅಲ್ವಾ? ಬಿಜೆಪಿ ಶಾಸಕ ಯತ್ನಾಳ್‌ ಅವರು ಮುಖ್ಯಮಂತ್ರಿಯಾಗಲು ಎಷ್ಟು ಹಣ ಕೊಡಬೇಕು? ಯಡಿಯೂರಪ್ಪ ಅವರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದರು. ಹೆಚ್‌, ವಿಶ್ವನಾಥ್‌ ಅವರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 10% ಕಮಿಷನ್‌ ಹೊಡೆಯಲಾಗಿದೆ ಎಂದು ಹೇಳಿದ್ದರು. ಇವೆಲ್ಲ ಶೀಸ್ತೋ? ಅಶಿಸ್ತೋ? ಎಂದು ಪ್ರಶ್ನಿಸಿದ್ದಾರೆ.

ಇಂದು ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ನಿಂತುಹೋಗಿದೆ. ಇದೊಂದು ನಿಷ್ಕ್ರಿಯ ಸರ್ಕಾರ. ನಡೆಯುತ್ತಿರುವ ಭ್ರಷ್ಟಾಚಾರವನ್ನು ನೋಡಿಕೊಂಡು ಬೊಮ್ಮಾಯಿ ಅವರು ಸುಮ್ಮನೆ ಕೂತಿದ್ದಾರೆ. ವಿಧಾನಸೌಧ ಇಂದು ವ್ಯಾಪಾರದ ಸೌಧ ಆಗಿದೆ. ಇವರು ʼಭ್ರಷ್ಟೋತ್ಸವʼ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಆಚರಣೆ ಮಾಡಬೇಕು. ಯಡಿಯೂರಪ್ಪ ಅವರ ಹಾದಿಯಲ್ಲಿ ತಮ್ಮ ಸರ್ಕಾರ ನಡೆಯುತ್ತಿಲ್ಲ ಎಂದು ತೋರಿಸಲು ಆಚರಣೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು 26 ಜುಲೈಗೆ, ಇವರು ಮುಖ್ಯಮಂತ್ರಿಯಾಗಿದ್ದು 28 ಜುಲೈಗೆ. ಅದಕ್ಕೆ 28ಕ್ಕೆ ಆಚರಣೆ ಮಾಡಲು ಹೊರಟಿದ್ದಾರೆ. ಆದರೆ ಭ್ರಷ್ಟಾಚಾರ ವಿಭಿನ್ನ ಆಗೋಕಾಗುತ್ತಾ? ಯಡಿಯೂರಪ್ಪ ಮಾಡಿದ್ರೂ ಒಂದೇ, ಬೊಮ್ಮಾಯಿ ಅವರು ಮಾಡಿದ್ರೂ ಒಂದೆ. ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಲು ಯಾವ ನೈತಿಕ ಹಕ್ಕಿದೆ? ಇವರು ಆರಂಭಿಸಿದ ಆಪರೇಷನ್‌ ಕಮಲ ಇಡೀ ದೇಶಕ್ಕೆ ರೋಗದಂತೆ ಹಬ್ಬಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಈ ಸರ್ಕಾರದ ವರ್ಷಾಚರಣೆ ಕಾರ್ಯಕ್ರಮ ಒಂದು “ಭ್ರಷ್ಟೋತ್ಸವ” ಕಾರ್ಯಕ್ರಮ ಎಂದು ಟೀಕಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ನನಗೆ ಯಾವ ನೋಟಿಸ್ ಬಂದಿಲ್ಲ, ಸೂಚನೆ ನೀಡಲಾಗಿದೆ ಅಷ್ಟೇ : ಶಾಸಕ ಜಮೀರ್

Next Post

ರಾಜ್ಯ ಸರ್ಕಾರದ್ದು ಸಾಧನೋತ್ಸವ ಅಲ್ಲ, ಅದು ಬಿಜೆಪಿಯ ಭ್ರಷ್ಟೋತ್ಸವ: ಡಿಕೆಶಿ ಕಿಡಿ 

Related Posts

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
0

ಗಂಡು ಮಕ್ಕಳಮೇಲೆ ರೇಗುವುದು ಜಾಸ್ತಿ ಮಾತು ಮಾತಿಗೆ ಹೆಣ್ಣನ್ನು ಸಂಪ್ರದಾಯ ಪದ್ಧತಿ ಆಚರಣೆ ನಡೆ ನುಡಿ ಮೈಮಾಟ ಸ್ವತಂತ್ರ ಅಳು ನಗು ಎಲ್ಲದರಲ್ಲೂ ಕಟ್ಟಿ ಹಾಕುವ ಸಮಾಜ...

Read moreDetails
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

July 10, 2025
Next Post
ಬಿಜೆಪಿಯವರನ್ನ ನೋಡಿ ಭ್ರಷ್ಟಾಚಾರ, ಲೂಟಿ ಮಾಡೋದನ್ನ ಕಲಿಯಬೇಕಾ? : ಡಿ.ಕೆ.ಶಿವಕುಮಾರ್‌

ರಾಜ್ಯ ಸರ್ಕಾರದ್ದು ಸಾಧನೋತ್ಸವ ಅಲ್ಲ, ಅದು ಬಿಜೆಪಿಯ ಭ್ರಷ್ಟೋತ್ಸವ: ಡಿಕೆಶಿ ಕಿಡಿ 

Please login to join discussion

Recent News

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada