• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇನ್ಮುಂದೆ ಬೆಂಗಳೂರಲ್ಲಿ ಶ್ವಾನ ಸಾಕಲು ಲೈಸನ್ಸ್ ಕಡ್ಡಾಯ: ಇಲ್ಲಿದೆ ಮಹತ್ವದ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
February 12, 2026
in Top Story, ಕರ್ನಾಟಕ
0
ಇನ್ಮುಂದೆ ಬೆಂಗಳೂರಲ್ಲಿ ಶ್ವಾನ ಸಾಕಲು ಲೈಸನ್ಸ್ ಕಡ್ಡಾಯ: ಇಲ್ಲಿದೆ ಮಹತ್ವದ ಮಾಹಿತಿ
Share on WhatsAppShare on FacebookShare on Telegram

ಬೆಂಗಳೂರು: ಮನೆಯಲ್ಲಿ ನಾಯಿ ಸಾಕೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈಗಂತೂ ಪ್ರತಿ ಮನೆಯಲ್ಲಿ ಒಂದು ಪೆಟ್‌ ಶ್ವಾನ ಇದ್ದೇ ಇರುತ್ತದೆ. ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುವವರು ಒಂದೆಡೆಯಾದರೆ, ಇನ್ನೂ ಕೆಲವರು ತಮ್ಮ ಮನೆಯ ಪಕ್ಕದಲ್ಲೇ ಒಂದಿಷ್ಟು ಬೀದಿ ನಾಯಿಗಳನ್ನು ಕೂಡ ಸಾಕುತ್ತಾರೆ. ಇದೀಗ ಬೆಂಗಳೂರಿನಲ್ಲಿ ನಾಯಿ ಸಾಕುವವರಿಗೆ ಹೊಸ ನಿಯಮ ಜಾರಿಗೆ ತರಲು ಜಿಬಿಎ ಸಜ್ಜಾಗುತ್ತಿದ್ದು, ಪೆಟ್‌ ಪೇರೆಂಟ್ಸ್‌ ಓದಲೇ ಬೇಕಾದ ಸುದ್ದಿ ಇಲ್ಲಿದೆ.

ADVERTISEMENT
Rahul Gandhi : ನೀವು ದೇಶಕ್ಕೆ ಹಾನಿಮಾಡ್ತಿದ್ದೀರಿ, ಸ್ವಲ್ಪನಾದ್ರು ಜವಾಬ್ದಾರಿ ಬೇಡವೆ..? #media #rahulgandhi

ಬೆಂಗಳೂರಿನಲ್ಲಿ ಸಾಕು ನಾಯಿಗಳ ಪಾಲನೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಜಿಬಿಎ ಚಿಂತನೆ ನಡೆಸುತ್ತಿದೆ. ಇನ್ನು ಮುಂದೆ ಮನೆಗಳಲ್ಲಿ ಸಾಕು ನಾಯಿಗಳನ್ನು ಸಾಕಲು ಕಡ್ಡಾಯವಾಗಿ ಲೈಸನ್ಸ್ ಪಡೆಯಬೇಕಾಗುವ ಸಾಧ್ಯತೆ ಇದೆ. ನಗರದಲ್ಲಿ ಸಾಕು ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ನಿಯಮಗಳ ಪ್ರಕಾರ, ಒಂದು ಮನೆಯಲ್ಲಿ ಗರಿಷ್ಠ ಮೂರು ನಾಯಿಗಳನ್ನು ಮಾತ್ರ ಸಾಕಲು ಅವಕಾಶ ಇರಬಹುದು. ಮೂರುಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಿದರೆ ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಎನ್‌ಜಿಒ ಅಥವಾ ಪ್ರಾಣಿ ಕೇಂದ್ರಗಳಿಗೆ ಹಸ್ತಾಂತರಿಸುವ ಕ್ರಮ ಜರುಗಬಹುದು.

DCM Dk Shivakumar Press Meet: ದೆಹಲಿಯಲ್ಲಿ ರಹಸ್ಯ ಬಿಚ್ಚಿಟ್ಟ DK #pratidhvani

ಇಲ್ಲಿದೆ ಮಹತ್ವದ ಮಾಹಿತಿ

ಸಾಕು ನಾಯಿಗಳಿಗೆ ಜಿಬಿಎಯಿಂದ ಪರವಾನಗಿ (ಲೈಸನ್ಸ್) ಪಡೆಯಬೇಕು. ಜೊತೆಗೆ ಪ್ರತಿ ವರ್ಷ ಲೈಸನ್ಸ್ ನವೀಕರಣ ಮಾಡ ಬೇಕು. ನಾಯಿಗಳ ತಳಿಯ ಆಧಾರದ ಮೇಲೆ ಶುಲ್ಕ ಲೈಸನ್ಸ್ ನಿಗದಿಯಾಗಲಿದೆ. ಜಿಬಿಎ ನಿಯೋಜಿತ ಪಶುವೈದ್ಯರಿಂದ ದೃಢೀಕರಣ ಪಡೆದಿರಬೇಕು ಹಾಗೂ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು. ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು. ಇನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವಾಗ ಹಗ್ಗ/ಚೈನ್ ಕಡ್ಡಾಯ. ರಸ್ತೆಗಳಲ್ಲಿ ಮಲಮೂತ್ರ ಮಾಡಿದರೆ ಮಾಲೀಕರೇ ಸ್ವಚ್ಛಗೊಳಿಸಬೇಕು. ನೆರೆಹೊರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

Prabha Mallikarjun : ಸಂಸತ್ತಿನಲ್ಲಿ ಅಬ್ಬರಿಸಿದ ಕಾಂಗ್ರೆಸ್ ಸಂಸದೆ.. #pratidhvani

ಒಂದು ವೇಳೆ ಸಾಕು ನಾಯಿ ತಪ್ಪಿಸಿಕೊಂಡು ಅಧಿಕಾರಿಗಳು ವಶಕ್ಕೆ ಪಡೆದರೆ ದಂಡ ಪಾವತಿಸಿ ಬಿಡಿಸಿಕೊಳ್ಳಬೇಕು. 72 ಗಂಟೆಯೊಳಗೆ ಬಿಡಿಸಿಕೊಂಡರೆ 1,000 ರೂಪಾಯಿ ದಂಡ 72 ಗಂಟೆ ನಂತರ ಪ್ರತಿದಿನ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲ ತಳಿಯ ಯಿಗಳನ್ನು ಸಾಕುವುದಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಈ ಹೊಸ ನಿಯಮಗಳು ಜಾರಿಗೆ ಬಂದರೆ ಸಾಕು ನಾಯಿ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸದ್ಯ ಈ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಅಂತಿಮ ಆದೇಶ ಹೊರಬರುವುದನ್ನು ಕಾದು ನೋಡಬೇಕಿದೆ.

Tags: BanglorebengalurudogsKannadakannada newsKarnatakaPet Dogs
Previous Post

Rahul Gandhi: ರಾಹುಲ್ ಗಾಂಧಿ ಸಂಸತ್‌ ಸದಸ್ಯತ್ವ ವಜಾಗೊಳಿಸಲು ಬಿಜೆಪಿ ಬೇಡಿಕೆ

Next Post

ಲೋಕಸಭಾ ಸ್ಪೀಕರ್ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ರಾ ಕಾಂಗ್ರೆಸ್ ಸಂಸದರು..?

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ಲೋಕಸಭಾ ಸ್ಪೀಕರ್ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ರಾ ಕಾಂಗ್ರೆಸ್ ಸಂಸದರು..?

ಲೋಕಸಭಾ ಸ್ಪೀಕರ್ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ರಾ ಕಾಂಗ್ರೆಸ್ ಸಂಸದರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada