2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election 2023) ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾಜ್ಯದಲ್ಲಿ ಚುನಾವಣಾ(election) ರಣಕಹಳೆ ಮೊಳಗಿದ್ದು, ಪಕ್ಷದ ನಾಯಕರು , ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರ(political leaders) ನಡುವೆ ವಾಕ್ಸಮರವೂ ಮುಂದುವರಿದಿದೆ. ವರುಣ ಕ್ಷೇತ್ರದ ಅಭಿವೃದ್ಧಿ ನನ್ನಿಂದ ಮಾತ್ರ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಹೇಳಿಕೆ ವಿಚಾರವಾಗಿ, ವರುಣದಲ್ಲಿ ಪ್ರಚಾರದ ವೇಳೆ ವಿ.ಸೋಮಣ್ಣನವರು(v somanna) ಪ್ರತಿಕ್ರಿಯಿಸಿದ್ದಾರೆ.
ʻತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತೆ ಎಂಬಂತೆ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮನಸ್ಸು ಮಾಡಿದ್ದರೆ ವರುಣ ಅಭಿವೃದ್ಧಿ ಮಾಡಬಹುದಿತ್ತುʼ ಅಂತ ಬಿಜೆಪಿ ಅಭ್ಯರ್ಥಿ(BJP candidate) ವಿ.ಸೋಮಣ್ಣ(V somanna) ತಿರುಗೇಟು ನೀಡಿದ್ರು. ʻವರುಣದಲ್ಲಿ 1 ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಬಾದಾಮಿಯಲ್ಲೂ ಸಿದ್ದರಾಮಯ್ಯ(siddaramaiah) ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕೆಂದು ಸೋಮಣ್ಣ ಸಿದ್ದಾರಾಮಯ್ಯಗೆ ಟಾಂಗ್ ಕೊಟ್ಟರು.