ಸಿಲಿಕಾನ್ ಸಿಟಿಯ ಬಸವನಗುಡಿಯಲ್ಲಿ ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆಯು ಇತಿಹಾಸ ಪ್ರಸಿದ್ಧ. ಆದರೆ ಕೊರೊನಾದಿಂದ ಎರಡು ವರ್ಷ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೀಗ ಸಿಟಿಯಲ್ಲಿ ಕೊರೋನಾ ಇಳಿಮುಖವಾಗಿದ್ದು, ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆ ನಡೆಸಲು ಈ ಬಾರಿ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ.
ಎರಡು ವರ್ಷಗಳ ಬಳಿಕ ನಡೆಯುತ್ತಿದೆ ಬಸವನಗುಡಿ ಕಡಲೆಕಾಯಿ ಪರಿಷೆ.!!
ಸಿಲಿಕಾನ್ ಸಿಟಿಯ ಹಿರಿಮೆಗೆ ಬಸವನಗುಡಿ ಕಡಲೆಕಾಯಿ ಪರಿಷೆ ಕೂಡ ಒಂದು. ಕಳೆದ ನೂರಾರೂ ವರ್ಷಗಳಿಂದ ನಾಡಪ್ರಭು ಕೆಂಪೇಗೌಡರೂ ಅಚರಣೆ ಮಾಡುತ್ತ ಬಂದಿರುವ ಈ ಜಾತ್ರೆ 400 ವರ್ಷಗಳ ಇತಿಹಾಸವಿದ್ದು, ಬೆಂಗಳೂರಿನ ಹಬ್ಬ ಎಂದು ಕರೆಯಲಾಗುತ್ತೆ. ಆದರೆ ಕಳೆದ ಒಂದು ವರ್ಷದಿಂದ ಈ ಜಾತ್ರೆಗೆ ಕೊರೋನಾದ ಕರಿನೆರಳು ಅವರಿಸಿತ್ತು. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆ ಅದ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರತಿ ವರ್ಷ ಯಾವ ರೀತಿ ನಡೆಯುತ್ತದೋ ಅದೇ ರೀತಿ ಪರಿಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿ, ಕೊರೋನಾ ಮಾರ್ಗಸೂಚಿಗಳನ್ನೂ ಪಾಲಿಸಬೇಕು ಅಂತ ಅಯುಕ್ತರು ಹೇಳಿದ್ದಾರೆ.
ನವೆಂಬರ್ 29ರಿಂದ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ.!!
ಇನ್ನೂ ಪರಿಷೆಯಲ್ಲಿ ವಿವಿಧ ತಳಿಯ ಕಡಲೆಕಾಯಿಗಳದ್ದೇ ಕಾರುಬಾರು ಇರಲಿದೆ. ಜತೆಗೆ ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಬೀಡುಬಿಡುತ್ತಾರೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಲಕ್ಷಾಂತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಕಳೆದ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ಧಾರ್ಮಿಕ ದತ್ತಿ ಇಲಾಖೆ, ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಹಾಗೂ ರಸ್ತೆ ಬದಿ ಕಡಲೆಕಾಯಿ ಮಾರಾಟಕ್ಕೂ ನಿರ್ಬಂಧ ವಿಧಿಸಿತ್ತು. ಇದೀಗ ಅನುಮತಿ ನೀಡಲಾಗಿದ್ದು, ಈ ಬಾರಿಯ ಪರಿಷೆ ನೋಡುಗರ ಗಮನ ಸೆಳೆಯಲಿದೆ. ಹಾಗೂ ದೊಡ್ಡ ಗಣಪತಿಯ ದರ್ಶನ ಎಲ್ಲ ಭಕ್ತದಿಗಳಿಗೂ ಸಿಗಲಿದೆ. ಅಂದಹಾಗೆ, ಈ ಕಡಲೆಕಾಯಿ ಪರಿಷೆ ಪ್ರತಿ ವರ್ಷದ ಕಾರ್ತಿಕ ಮಾಸದ ಕಡೆಯ ಸೋಮವಾರ ನಡೆಯಲಿದೆ. ಅಂದರೆ ಈ ಬಾರಿ ಇದೇ ನವೆಂಬರ್ 29ರಿಂದ ಶುರುವಾಗಿ ಮೂರು ದಿನಗಳ ಕಾಲ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದ ಬಳಿ ಕಡಲೇಕಾಯಿ ಪರಿಷೆ ನಡೆಯಲಿದೆ.
ಕೋವಿಡ್ ಮಾರ್ಗಸೂಚಿಯಂತೆ ನಡೆಯಲಿದೆ ಗ್ರಾಮೀಣ ಸೊಗಡಿನ ಜಾತ್ರೆ.!!
ಇನ್ನೂ ಪರಿಷೆ ನಡೆಯುವುದರಿಂದ ನಮ್ಮ ಆಚರ, ವಿಚಾರಗಳು ಜೀವಂತವಾಗಿರುತ್ತೆ. ಈ ಪರಿಷೆಯನ್ನೆ ನಂಬಿಕೊಂಡ ವ್ಯಾಪರಸ್ಥರಿಗೆ ಅನುಕುಲವಾಗುತ್ತೆ, ಪಾಲಿಕೆ ನಿರ್ಧಾರ ಸ್ವಾಗತಾರ್ಹ, ಜನರು ಕೂಡ ಕೋವಿಡ್ ನಿಯಾಮ ಪಾಲಿಸಿ ಪರಿಷೆಯನ್ನೂ ಯಾಶಸ್ವಿಗೊಳಿಸಬೇಕು ಎಂಬುದು ಭಕ್ತರ ಮಾತು. ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿಯಿಂದ ಹಸಿರು ನಿಶಾನೆ ಸಿಕ್ಕಿರುವುದು ನಗರದ ಜನರಿಗೆ ಒಂದು ರೀತಿಯಲ್ಲಿ ಜಾತ್ರೆ ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಂತಾಗಿದೆ. ಆದರೆ, ಜನರು ಕೂಡ ಜಾತ್ರೆ ಅಂತ ಕೋವಿಡ್ ನಿಯಾಮಾವಳಿಗಳನ್ನು ಗಾಳಿಗೆ ತೂರಿದರೆ, ಅಪಾಯ ತಪ್ಪಿದ್ದಲ್ಲ ಎನ್ನುವ ಎಚ್ಚರಿಕೆ ಜನರಿಗಿದ್ದರೆ ಒಳ್ಳೆಯದ್ದು.